White Hair Remedy: ನಮ್ಮಲ್ಲಿ ಅನೇಕರಿಗೆ ಕಾಲಕಾಲಕ್ಕೆ ಟೀ ಅಥವಾ ಕಾಫಿ ಬೇಕಾಗುತ್ತದೆ. ಕೆಲವರು 1 ಕಪ್ ಕಾಫಿಯೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಅದರಂತೆ ಕೂದಲಿಗೂ ಕಾಫಿ ಪುಡಿ ವರದಾನವಿದ್ದಂತೆ ಎನ್ನುವುದು ನಿಮಗೇ ಗೊತ್ತೇ? ಇಲ್ಲವಾದರೇ ಇದೀಗ ತಿಳಿಯೋಣ..
ಇತ್ತೀಚಿನ ದಿನಗಳಲ್ಲಿ, ಅನೇಕ ಯುವಕ-ಯುವತಿಯರು ಬಿಳಿ ಕೂದಲಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗುತ್ತದೆ. 40 ವರ್ಷಗಳ ನಂತರ ಬರುವ ಸಮಸ್ಯೆಗಳು ಬೇಗ ಬರುತ್ತಿರುವುದರಿಂದ ಯುವಕರು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಅನೇಕರಿಗೆ ಕಾಫಿ ಟೀ ಎಂದರೇ ಒಂದು ರೀತಿಯ ರಿಫ್ರೆಶ್‌ಮೆಂಟ್ ಇದ್ದಹಾಗೆ.. ಅದನ್ನು ಕುಡಿದ್ರೆ ಆರಾಮಾಗಿ ಇರಬಹುದು ಎನ್ನುವ ಮನಸ್ಥಿತಿಯವರು ಇದ್ದಾರೆ.. ಹೀಗೆ ಈ ಕಾಫಿ ಟೀಯನ್ನು ವ್ಯಾಪಕವಾಗಿ ಬಳಸಲಾಗುತ್ತೆ..
ಈ ಕಾಫಿ ಪುಡಿಯಿದ ಕೂದಲಿಗೂ ಅನೇಕ ಪ್ರಯೋಜನಗಳಿವೆ,, ಹೌದು ಕಾಫಿ ಬೀಜದ ಪುಡಿಯನ್ನು ತೆಂಗಿನ ಎಣ್ಣೆಯಲ್ಲಿ ಮಿಕ್ಸ್ ಮಾಡಿ ಕೂದಲಿಗೆ ಅರ್ಧಗಂಟೆ ಬಿಟ್ಟು ತೊಳೆದರೇ ಕೂದಲಿನ ಹಲವಾರು ಸಮಸ್ಯೆಗಳಿಗ ಮುಕ್ತಿ ನೀಡಬಹುದಾಗಿದೆ..
ಕೂದಲು ಸ್ಮೂತ್ ಆಗಬೇಕೆಂದರೇ ಕಾಫಿ ಪುಡಿ ಬೆರೆಸಿದ ತೆಂಗಿನ ಎಣ್ಣೆಗೆ ಅಲೂವೇರಾವನ್ನು ಬೆರೆಸಿ ಕೂದಲಿಗೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ತೊಳೆಯಿರಿ.. ಇದರಿಂದ ಕೂದಲು ಸ್ಮೂತ್ ಆಗುವುದರ ಜೊತೆಗೆ ಎಲ್ಲ ಸಮಸ್ಯೆಗಳೂ ದೂರವಾಗುತ್ತವೆ..
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.