ರಶ್ಮಿಕಾ, ಪೂಜಾ, ಲೀಲಾ..! ಟಾಪ್‌ ರೇಂಜ್‌ನಲ್ಲಿರುವ ಈ ಕನ್ನಡತಿಯರಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವವರು ಯಾರು ಗೊತ್ತೆ..?

Highest remuneration actress : ಚಿತ್ರರಂಗದಲ್ಲಿ ನಾಯಕಿಯರ ಕ್ರೇಜ್‌ ಹೆಚ್ಚಿನ ದಿನ ಇರುವುದಿಲ್ಲ. ಹೊಸ ಮುಖಗಳು ಬಂದಾಗ, ಹಳಬರಿಗೆ ಆಫರ್‌ಗಳು ಕಡಿಮೆಯಾಗುತ್ತಲೇ ಹೋಗುತ್ತದೆ. ಹಾಗಾಗಿಯೇ ಬೇಡಿಕೆ ಇದ್ದಾಗಲೇ ಎಷ್ಟು ಬೇಕೋ ಅಷ್ಟು ಹಣ ಗಳಿಕೆ ಮಾಡಲು, ನಟಿಯರು ಮುಂದಾಗುತ್ತಾರೆ. ನಿರ್ಮಾಪಕರೂ ಅಷ್ಟೇ ಟ್ರೇಂಡ್‌ನಲ್ಲಿರುವ ನಟಿಯರಿಗೆ ಮಣೆ ಹಾಕುತ್ತಾರೆ. ಇನ್ನು ಕನ್ನಡ ಸಿನಿರಂಗದಿಂದ ಬಾಲಿವುಡ್‌, ಕಾಲಿವುಡ್‌, ಟಾಲಿವುಡ್‌ನಲ್ಲಿ ಮಿಂಚುತ್ತಿರುವ ನಟಿಯರಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರಾರು..? ಬನ್ನಿ ನೋಡೋಣ..
 

1 /8

ಸೌತ್‌ ನಟಿಯರು ಸಹ ಬಾಲಿವುಡ್‌ ನಾಯಕಿಯರ ಸಮ ಸಂಭಾವನೆ  ಪಡೆಯುತ್ತಿದ್ದಾರೆ. ಹೆಚ್ಚಾಗಿ ಕನ್ನಡತಿಯರು ಇಂದಿ ಬಾಲಿವುಡ್‌ ಅನ್ನು ಆಳುತ್ತಿದ್ದಾರೆ.  ಬನ್ನಿ ಟ್ರೇಂಟ್‌ನಲ್ಲಿರುವ ನಟಿಯರ ನಿಜವಾದ ಸಂಭಾವನೆ ಎಷ್ಟು ಅಂತ ನೋಡೋಣ..  

2 /8

ಪುಷ್ಪ ಮತ್ತು ಅನಿಮಲ್ ಸಿನಿಮಾಗಳ ಮೂಲಕ ಪ್ಯಾನ್ ಇಂಡಿಯಾದಲ್ಲಿ ರಶ್ಮಿಕಾ ಮಂದಣ್ಣ ಕ್ರೇಜ್ ಹೆಚ್ಚಾಯಿತು. ಸದ್ಯ ಪ್ರತಿ ಚಿತ್ರಕ್ಕೆ 3 ಕೋಟಿ ಬಹುಮಾನ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಪುಷ್ಪಾ 2 ರಿಲೀಸ್‌ ಬಳಿಕ ನಟಿಯ ಸಂಭಾವನೆ ಹೆಚ್ಚುವುದು ನಿಶ್ಚಿತ.  

3 /8

ರಾಧೆ ಶ್ಯಾಮ್ ಸಿನಿಮಾಗೂ ಮೊದಲು ಫುಲ್ ಫಾರ್ಮ್ ನಲ್ಲಿದ್ದ ಪೂಜಾ ಹೆಗಡೆ.. ಆ ನಂತರ ಸಾಲು ಸಾಲು ಫ್ಲಾಪ್ ಗಳಿಂದ ನಟಿಯ ಕ್ರೇಜ್‌ ದಿಢೀರ್ ಕುಸಿಯಿತು. ಸದ್ಯ ಆಕೆಯ ಕೈಯಲ್ಲಿ ಒಂದೋ ಎರಡೋ ಚಿತ್ರಗಳಿವೆ. ಸದ್ಯ ಪ್ರತಿ ಚಿತ್ರಕ್ಕೆ ರೂ. 3 ಕೋಟಿ ಸಂಭಾವನೆ.    

4 /8

ಗುಂಟೂರು ಕಾರ ಸೇರಿದಂತೆ ಹಲವು ಸಿನಿಮಾಗಳು ಪ್ಲಾಪ್‌ ಆದ ನಂತರ ಶ್ರೀಲೀಲಾ ಕ್ರೇಜ್‌ ಕಡಿಮೆಯಾಯಿತು. ಪ್ರಸ್ತುತ ಪವನ್ ಕಲ್ಯಾಣ್ ಜೊತೆ 'ಉಸ್ತಾದ್ ಭಗತ್ ಸಿಂಗ್' ಚಿತ್ರದಲ್ಲಿ ಲೀಲಾ ನಟಿಸುತ್ತಿದ್ದು, ಈ ಸಿನಿಮಾದ ಮೂಲಕ ಕಮ್‌ ಬ್ಯಾಕ್‌ ಮಾಡುವ ನಿರೀಕ್ಷೆ ಇದೆ. ಇನ್ನು ನಟಿ ಪ್ರತಿ ಚಿತ್ರಕ್ಕೆ ಆಕೆ 1.50 ಕೋಟಿ ರೂ. ರವರೆಗೆ ಸಂಭಾವನೆ ಪಡೆಯುತ್ತಾರೆ.  

5 /8

ಕಿಯಾರಾ ಅಡ್ವಾಣಿ ಪ್ಯಾನ್ ಇಂಡಿಯಾ ನಾಯಕಿಯಾಗಿ ಹೊರಹೊಮ್ಮುತ್ತಿದ್ದಾರೆ. ಸದ್ಯ, ರಾಮ್ ಚರಣ್ ಜೊತೆಗಿನ 'ಗೇಮ್ ಚೇಂಜರ್' ಚಿತ್ರಕ್ಕಾಗಿ ಅವರು ಸುಮಾರು 3 ಕೋಟಿ ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ..    

6 /8

ನಿಧಿ ಅಗರ್ವಾಲ್ ಪ್ರತಿ ಚಿತ್ರಕ್ಕೆ ರೂ. ಕೋಟಿಗಳವರೆಗೆ ಸಂಭಾವನೆ ಪಡೆಯುತ್ತಾರೆ. ಸದ್ಯ ಪವನ್ ಕಲ್ಯಾಣ್ ಅಭಿನಯದ ಮುಂಬರುವ ಬಹುನಿರೀಕ್ಷಿತ ಸಿನಿಮಾ ‘ಹರಿ ಹರ ವೀರಮಲ್ಲು’ದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿಧಿ ಈ ಚಿತ್ರದ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.  

7 /8

ಕಳೆದ ಕೆಲವು ವರ್ಷಗಳಿಂದ 1.5 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದ ನಟಿ ಸಾಯಿ ಪಲ್ಲವಿ ಇತ್ತೀಚಿಗೆ, ನಾಗ ಚೈತನ್ಯ ಜೊತೆ 'ತಾಂಡೇಲ್' ಸಿನಿಮಾದಿಂದ ನಟಿಸಲು ರೂ. 2 ಕೋಟಿಯವರೆಗೂ ಸಂಭಾವನೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಬಾಲಿವುಡ್ ನಲ್ಲಿ ತಯಾರಾಗುತ್ತಿರುವ ರಾಮಾಯಣಂ ಚಿತ್ರಕ್ಕೆ ರೂ. 5 ಕೋಟಿಯವರೆಗೂ ಸಂಭಾವನೆ ಇದೆ ಎಂದು ವರದಿಯಾಗಿದೆ.  

8 /8

ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ದಕ್ಷಿಣದ ಎಲ್ಲಾ ಭಾಷೆಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಸದ್ಯ ಪ್ರತಿ ಚಿತ್ರಕ್ಕೆ ರೂ. 2 ಕೋಟಿಯವರೆಗೂ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.