ಜಮೈಕಾ ಬೆಟ್ಟದಲ್ಲಿ ಕ್ರಿಕೆಟ್ ದೈತ್ಯ Chris Gayle ಅರಮನೆ ಹೇಗಿದೆ ಗೊತ್ತಾ?

ಕ್ರಿಸ್ ಗೇಲ್ ಅವರ ಐಷಾರಾಮಿ ಬಂಗಲೆಯಲ್ಲಿ ಹೌಸ್ ಪಾರ್ಟಿಗಾಗಿ ವಿಶೇಷ ಸ್ಥಳವಿದೆ.  ಮೂರು ಅಂತಸ್ತಿನ ಬಂಗಲೆಯಲ್ಲಿ ಮನೆಯೊಳಗೆ ಡ್ಯಾನ್ಸ್ ಫ್ಲೋರ್ ಇದೆ

ನವದೆಹಲಿ : ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಐಷಾರಾಮಿ ಜೀವನ ನಡೆಸುವಲ್ಲಿ ಹೆಸರುವಾಸಿಯಾಗಿದ್ದಾರೆ.  ಜಮೈಕಾದ ಬೆಟ್ಟಗಳಲ್ಲಿ ಕ್ರಿಸ್ ಗೇಲ್ ಅದ್ಬುತ ಬಂಗಲೆ ಇದೆ. ಈ ಬಂಗಲೆ ಯಾವ ಅರಮನೆಗೂ ಕಡಿಮೆ ಏನಿಲ್ಲ. ಇಂದು ಕ್ರಿಸ್ ಗೇಲ್ ಬಳಿ ಲಂಬೋರ್ಘಿನಿ, ಲ್ಯಾಂಡ್ ಕ್ರೂಸರ್ ಮತ್ತು ಹಾರ್ಲೆ ಡೇವಿಡ್ಸನ್ ನಂತಹ ವಾಹನಗಳ ಮಾಲೀಕ ಕೂಡಾ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

 ಕ್ರಿಸ್ ಗೇಲ್ ಅವರ ಐಷಾರಾಮಿ ಬಂಗಲೆಯಲ್ಲಿ ಹೌಸ್ ಪಾರ್ಟಿಗಾಗಿ ವಿಶೇಷ ಸ್ಥಳವಿದೆ.  ಮೂರು ಅಂತಸ್ತಿನ ಬಂಗಲೆಯಲ್ಲಿ ಮನೆಯೊಳಗೆ ಡ್ಯಾನ್ಸ್ ಫ್ಲೋರ್ ಇದೆ ಮತ್ತು ಪೂಲ್ ಪಾರ್ಟಿಗಾಗಿ ವಿಶಾಲವಾದ ಈಜುಕೊಳವಿದೆ.

2 /5

ಜಮೈಕಾದ ಬೆಟ್ಟ ಪ್ರದೇಶಗಳಲ್ಲಿರುವ ಕ್ರಿಸ್ ಗೇಲ್ ಐಷಾರಾಮಿ ಬಂಗಲೆಯ ಮೌಲ್ಯ ಸುಮಾರು 20 ಕೋಟಿ ರೂಪಾಯಿಗಳಿಗಿಂತಲೂ ಅಧಿಕ. ಗೇಲ್ ಸಂದರ್ಶನವೊಂದರಲ್ಲಿ ತನ್ನ ಬಂಗಲೆಯ ವೈಶಿಷ್ಟ್ಯಗಳ ಬಗ್ಗೆ ಹೇಳಿದ್ದರು. ಕ್ರಿಸ್ ಗೇಲ್ ಅವರ ಪ್ರಕಾರ, ಅವರ ಮನೆಯಲ್ಲಿ ಕ್ಲಬ್‌ಗಳಿಂದ ಹಿಡಿದು ಈಜುಕೊಳಗಳವರೆಗೆ ಸೌಲಭ್ಯಗಳಿವೆ.  

3 /5

 ಕ್ರಿಸ್ ಗೇಲ್ ತಮ್ಮ ಮನೆಯ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಕ್ರಿಸ್ ಗೇಲ್ 10 ದೇಶಗಳ 14 ಫ್ರಾಂಚೈಸಿಗಳಿಂದ ಟಿ 20 ಪಂದ್ಯಗಳನ್ನಾಡಿದ್ದಾರೆ. ಐಪಿಎಲ್ ಅಲ್ಲದೆ, ಪಾಕಿಸ್ತಾನ, ಶ್ರೀಲಂಕಾ, ಆಸ್ಟ್ರೇಲಿಯಾ, ಜಮೈಕಾ, ಇಂಗ್ಲೆಂಡ್, ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾದ ಟಿ 20 ಲೀಗ್ ಪಂದ್ಯಾವಳಿಗಳು ಇದರಲ್ಲಿ ಸೇರಿವೆ.

4 /5

ಕ್ರಿಸ್ ಗೇಲ್ ಅವರ ತಂದೆ ಡಡ್ಲಿ ಗೇಲ್ ಪೊಲೀಸ್ ಅಧಿಕಾರಿಯಾಗಿದ್ದರು. ಅವರ ತಾಯಿ ತಿಂಡಿ ಮಾರುತ್ತಿದ್ದರು. ಟಿ 20 ಕ್ರಿಕೆಟ್ ಕ್ರಿಸ್ ಗೇಲ್ ಅವರ ಜೀವನವನ್ನೇ ಬದಲಾಯಿಸಿತು.  

5 /5

  ಟಿ 20 ಲೀಗ್ ನಿಂದಾಗಿ ಕ್ರಿಸ್ ಗೇಲ್ ವೃತ್ತಿಜೀವನದಲ್ಲೂ ಉತ್ತುಂಗಕ್ಕೆ ಏರುವಂತಾಯಿತು. ಕ್ರಿಸ್ ಗೇಲ್ ಬಳಿ ಮರ್ಸಿಡಿಸ್, ಲಂಬೋರ್ಘಿನಿ, ಲ್ಯಾಂಡ್ ಕ್ರೂಸರ್ ಮತ್ತು ಹಾರ್ಲೆ ಡೇವಿಡ್ಸನ್ ನಂತಹ ಐಶಾರಾಮಿ ಕಾರುಗಳಿವೆ. ಗೇಲ್ ಅವರ ಪತ್ನಿಯ ಹೆಸರು ನತಾಶಾ ಮತ್ತು ಮಗಳ ಹೆಸರು ಬ್ಲಶ್.