Sleep tips: ನಿದ್ದೆ ಮಾಡುವಾಗ ಈ ಸರಳ ಸಲಹೆ ಪಾಲಿಸಿರಿ

Sleep Health tips: ದಿನನಿತ್ಯ 7-8 ಗಂಟೆ ನಿದ್ದೆ ಮಾಡಿದ್ರೆ ಸಾಕು, ಮಧ್ಯಾಹ್ನ ಮಲಗಲೇಬೇಕು ಅನ್ನುವವರು 30 ನಿಮಿಷ ನಿದ್ರೆ ಮಾಡಿದ್ರೆ ಸಾಕು.

Sleep Health tips: ಮನುಷ್ಯನಿಗೆ ನಿದ್ದೆ ತುಂಬಾನೇ ಅವಶ್ಯಕ. ಯಾವುದೇ ವ್ಯಕ್ತಿ ಆರೋಗ್ಯವಾಗಿರಬೇಕಂದ್ರೆ ಆತನಿಗೆ ಇಂತಿಷ್ಟು ಗಂಟೆಗಳ ನಿದ್ದೆ ತುಂಬಾನೇ ಮುಖ್ಯ. ಇತ್ತೀಚಿನ ಜೀವನಶೈಲಿಯಿಂದ ಅನೇಕರು ಸರಿಯಾಗಿ ನಿದ್ದೆಯಿಲ್ಲದೇ ಸಮಸ್ಯೆ ಅನುಭವಿಸುತ್ತಾರೆ. ನಿದ್ದೆ ಮಾಡುವಾಗ ಪ್ರತಿಯೊಬ್ಬರೂ ಪಾಲಿಸಬೇಕಾದ ಸರಳ ಸಲಹೆಗಳು ಇಲ್ಲಿವೆ ನೋಡಿ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಮಧ್ಯಾಹ್ನ ಅಥವಾ ರಾತ್ರಿಯೇ ಆಗಲಿ ನಿದ್ದೆ ಮಾಡುವ ಮೊದಲು ಅಲರಾಂ ಇಟ್ಟುಕೊಳ್ಳಿ. ಯಾಕಂದ್ರೆ ಪ್ರತಿನಿತ್ಯ ನೀವು ಕೆಲವು ಸಮಯ ಮಾತ್ರ ನಿದ್ದೆ ಮಾಡಬೇಕು. ಆ ಸಮಯವನ್ನೇ ಪ್ರತಿನಿತ್ಯ ನೀವು ಪಾಲನೆ ಮಾಡಬೇಕು. 1 ದಿನ ಹೆಚ್ಚು ಕಡಿಮೆಯಾದ್ರೂ ಆರೋಗ್ಯಕ್ಕೆ ತೊಂದರೆ.

2 /5

ದಿನನಿತ್ಯ 7-8 ಗಂಟೆ ನಿದ್ದೆ ಮಾಡಿದ್ರೆ ಸಾಕು. ಇನ್ನೂ ಮಧ್ಯಾಹ್ನ ಮಲಗಲೇಬೇಕು ಅನ್ನುವವರು 30 ನಿಮಿಷ ನಿದ್ರೆ ಮಾಡಿದ್ರೆ ಸಾಕು. ಮಲಗುವ ಮುನ್ನ ಟೀ- ಕಾಫಿ ಕುಡಿಯುವುದು ಒಳ್ಳೆಯದಲ್ಲ. ಇದು ನಿಮ್ಮ ನಿದ್ರೆಗೆ ಭಂಗ ತರುತ್ತದೆ.  

3 /5

ಮಲಗುವ ಮೊದಲು ನಿಮ್ಮಲ್ಲಿರುವ ಎಲ್ಲಾ ಒತ್ತಡಗಳನ್ನು ದೂರವಿಡಿ. ನಿಮ್ಮಲ್ಲಿ ಒತ್ತಡ ಹೆಚ್ಚಾದ್ರೆ ನಿದ್ರಿಸಲು ಆಗಲ್ಲ. ವ್ಯಾಯಾಮ ಮಾಡುವವರಾದರೆ ಮಲಗುವ 45 ನಿಮಿಷದ ಮೊದಲು ವ್ಯಾಯಾಮ ಮಾಡಬೇಕು.

4 /5

ಏನಾದರೂ ಆಹಾರ ಸೇವಿಸಿದ ಬಳಿಕವೇ ಮಲಗಿ. ಬರೀ ಹೊಟ್ಟೆಯಲ್ಲಿ ಮಲಗುವುದು ಒಳ್ಳೆಯದಲ್ಲ. ಊಟವಾದ ತಕ್ಷಣ ಯಾವುದೇ ಕಾರಣಕ್ಕೂ ಮಲಗಬಾರದು. 10-15 ನಿಮಿಷ ವಾಕ್ ಮಾಡಿದ ನಂತರ ಮಲಗುವುದು ಉತ್ತಮ.

5 /5

ನನಗೆ ನಿದ್ದೆ ಬರುವುದಿಲ್ಲವೆಂದು ಮಧ್ಯಪಾನ ಮಾಡುವ ಅಭ್ಯಾಸ ರೂಢಿಸಿಕೊಳ್ಳಬೇಡಿ. ಆಹಾರ, ಗಾಳಿ, ನೀರು, ವಸತಿ ಹೇಗೆ ನಮ್ಮ ಜೀವನದಲ್ಲಿ ಮುಖ್ಯವಾಗುತ್ತದೆಯೋ ಅದೇ ರೀತಿ ನಮಗೆ ನಿದ್ದೆ ಕೂಡ ಮುಖ್ಯ. ಹೀಗಾಗಿ ನಾವು ನಿದ್ರಿಸುವಾಗ ಕೆಲವೊಂದು ನಿಯಮ ಪಾಲಿಸಲೇಬೇಕು.