Health Tips: ಬೇಸಿಗೆಯಲ್ಲಿ ಅಪ್ಪಿತಪ್ಪಿಯೂ ಇವುಗಳನ್ನು ಕುಡಿಯಬೇಡಿ..!

Summer Drinks: ಬೇಸಿಗೆ ಕಾಲದಲ್ಲಿ ನಾವು ದನಿವು ಮತ್ತು ಆಯಾಸ ನಿವಾರಿಸಲು ಹಲವಾರು ಪಾನೀಯಗಳನ್ನು ಸೇವಿಸುತ್ತೇವೆ. ಬೇಸಿಗೆಯ ಬಾಯಾರಿಕೆ ತಣಿಸಿಕೊಳ್ಳಲು ನಾವು ಕುಡಿಯುವ ಕೆಲವು ಪಾನೀಯಗಳು ನಮ್ಮ ಆರೋಗ್ಯಕ್ಕೆ ಮಾರಕವಾಗಿರುತ್ತದೆ.

Drinks Avoid This Summer Season: ಬೇಸಿಗೆಯಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಈ ಋತುವಿನಲ್ಲಿ ನೀವು ಸೇವಿಸುವ ಆಹಾರ ಮತ್ತು ಪಾನೀಯದ ಬಗ್ಗೆಯೂ ಗಮನಹರಿಸಬೇಕು. ಸ್ವಲ್ಪ ಎಚ್ಚರ ತಪ್ಪಿದ್ರೂ ನೀವು ಅನಾರೋಗ್ಯಕ್ಕೆ ತುತ್ತಾಗಬಹುದು. ಹೀಗಾಗಿ ಬೇಸಿಗೆಯಲ್ಲಿ ನೀವು ಸೇವಿಸುವ ಆಹಾರದ ಬಗ್ಗೆ ವಿಶೇಷ ಗಮನಹರಿಸುವುದು ಉತ್ತಮ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಬೇಸಿಗೆಯಲ್ಲಿ ಹೆಚ್ಚು ಕಾಫಿ ಕುಡಿದರೆ ಆರೋಗ್ಯಕ್ಕೆ ಮಾರಕ. ಕಾಫಿಯಲ್ಲಿರುವ ಕೆಫೀನ್ ಅಂಶವು ದೇಹದಲ್ಲಿ ನೀರಿನ ಕೊರತೆಯನ್ನುಂಟು ಮಾಡುತ್ತದೆ. ಇದರಿಂದ ನಿಮಗೆ ಡಿಹೈಡ್ರೇಶನ್‌ ಉಂಟಾಗುತ್ತದೆ. ಹೀಗಾಗಿ ದಿನಕ್ಕೆ 2 ಕಪ್‌ಗಳಿಗಿಂತ ಹೆಚ್ಚು ಕಾಫಿ ಸೇವಿಸಬೇಡಿ.

2 /5

ಬೇಸಿಗೆಯಲ್ಲಿ ಚಹಾ ಸೇವಿಸುವುದರಿಂದ ದೂರವಿರುವುದು ಉತ್ತಮ. ಚಹಾದಲ್ಲೂ ಕೆಫೀನ್ ಇದ್ದು, ಇದು ದೇಹಕ್ಕೆ ಒಳ್ಳೆಯದಲ್ಲ. ಇದು ಸಹ ಡಿಹೈಡ್ರೇಶನ್‌ಗೆ ಕಾರಣವಾಗುತ್ತದೆ. ಚಹಾ ಮೂತ್ರವರ್ಧಕದಂತೆ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ನಿಮಗೆ ಪದೇ ಪದೇ ಮೂತ್ರವಿಸರ್ಜನೆಯ ಸಮಸ್ಯೆ ಬರಬಹುದು.  

3 /5

ಬೇಸಿಗೆಯ ಬಾಯಾರಿಕೆ ತಣಿಸಲು ಅನೇಕರು ಸೋಡಾ ಸೇವಿಸುತ್ತಾರೆ. ಆದರೆ ಇದು ನಿಮ್ಮ ಆರೋಗ್ಯಕ್ಕೂ ಹಾನಿಯನ್ನುಂಟು ಮಾಡುತ್ತದೆ. ಸೋಡಾ ನೀರಿನಲ್ಲಿ ಕಾರ್ಬನ್ ಮತ್ತು ಬಹಳಷ್ಟು ಫಾಸ್ಪರಿಕ್ ಆಮ್ಲವಿರುತ್ತದೆ. ಇದು ಹೃದಯ ಮತ್ತು ಮೂತ್ರಪಿಂಡದ ಕಾಯಿಲೆಗಳಿಗೆ ಕಾರಣವಾಗುತ್ತದೆ. ಹೀಗಾಗಿ ಇದರ ಬಗ್ಗೆ ಎಚ್ಚರವಹಿಸುವುದು ಅಗತ್ಯ.

4 /5

ಬೇಸಿಗೆ ಕಾಲದಲ್ಲಿ ಬಹುತೇಕರು ಮಿಲ್ಕ್ ಶೇಕ್ಸ್ ಸೇವಿಸಲು ಇಷ್ಟಪಡುತ್ತಾರೆ. ಆದರೆ ಇದರಿಂದ ನಿಮಗೆ ತೊಂದರೆಯುಂಟಾಗುತ್ತದೆ. ಅತಿಯಾಗಿ ಮಿಲ್ಕ್ ಶೇಕ್ಸ್ ಸೇವನೆಯಿಂದ ದೂರವಿರುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಉತ್ತಮ.

5 /5

ಬೇಸಿಗೆಯಲ್ಲಿ ಬಹುತೇಕರು ಫ್ರೂಟ್ ಜ್ಯೂಸ್ ಸೇವಿಸುತ್ತಾರೆ. ಫ್ರೂಟ್ ಜ್ಯೂಸ್ ಸೇವನೆಯಿಂದ ನಿಮಗೆ ತಾತ್ಕಾಲಿಕ ಖುಷಿ ಸಿಗಬಹುದು. ಆದರೆ ಇದರಿಂದ ನಿಮಗೆ ಅನಾರೋಗ್ಯ ಸಮಸ್ಯೆ ಎದುರಾಗುತ್ತದೆ.