Best food for sex Life: ಕುಂಬಳಕಾಯಿ ಬೀಜಗಳಲ್ಲಿ ಜಿಂಕ್ ಅಂಶದ ಪ್ರಮಾಣ ಹೆಚ್ಚಾಗಿದ್ದು, ಇದು ನಿಮ್ಮ ಆರೋಗ್ಯಕರ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚು ಮಾಡಬಲ್ಲದು. ಪುರುಷರು ಕುಂಬಳಕಾಯಿ ಬೀಜಗಳನ್ನು ಸೇವಿಸುವುದರಿಂದ ವೀರ್ಯದ ಗುಣಮಟ್ಟ ಹೆಚ್ಚಾಗುತ್ತದೆ.
Foods to Help Boost Your Sex Life: ದಾಂಪತ್ಯ ಜೀವನಕ್ಕೆ ಸೆಕ್ಸ್ ತುಂಬಾ ಮುಖ್ಯ. ಸಂಗಾತಿಯೊಂದಿಗೆ ಆರೋಗ್ಯಕರ ಬಂಧ ಬೆಳೆಸುವುದು ಮುಖ್ಯ. ಇದು ಸಂಬಂಧವನ್ನು ಬಲಪಡಿಸುತ್ತದೆ ಮತ್ತು ಸಂಗಾತಿಯೊಂದಿಗಿನ ಜೀವನದ ಪ್ರಯಾಣಕ್ಕೆ ಸಹಕಾರಿ. ಸಂಗಾತಿಯೊಂದಿಗೆ ಆತ್ಮೀಯ ದೈಹಿಕ ಸಂಬಂಧ ಹೊಂದುವುದು ಸಂಬಂಧದ ಪ್ರಮುಖ ಭಾಗ. ಲೈಂಗಿಕ ಕ್ರಿಯೆ ಸಂದರ್ಭದಲ್ಲಿ ಪುರುಷರಿಗೆ ಯಾವುದಾದರೂ ಲೈಂಗಿಕ ಸಮಸ್ಯೆಗಳಿದ್ದರೆ ಇಬ್ಬರಿಗೂ ತೊಂದರೆ. ಈ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳಲು ನಮ್ಮೆಲ್ಲರ ಅಡುಗೆಮನೆಯಲ್ಲಿ ಒಳ್ಳೆಯ ಮನೆಮದ್ದುಗಳಿವೆ. ಅಡುಗೆಯಲ್ಲಿ ಬಳಕೆ ಮಾಡುವ ಕೆಲವು ಬೀಜಗಳು ಅಥವಾ ಕಾಳುಗಳು ನಮ್ಮ ಲೈಂಗಿಕ ಶಕ್ತಿ ಹೆಚ್ಚಾಗುತ್ತದೆ. ಆ ಬೀಜಗಳು ಯಾವುದು ಎಂಬುದರ ಬಗ್ಗೆ ತಿಳಿಯಿರಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಕುಂಬಳಕಾಯಿ ಬೀಜಗಳಲ್ಲಿ ಜಿಂಕ್ ಅಂಶದ ಪ್ರಮಾಣ ಹೆಚ್ಚಾಗಿದ್ದು, ಇದು ನಿಮ್ಮ ಆರೋಗ್ಯಕರ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚು ಮಾಡಬಲ್ಲದು. ಪುರುಷರು ಕುಂಬಳಕಾಯಿ ಬೀಜಗಳನ್ನು ಸೇವಿಸುವುದರಿಂದ ವೀರ್ಯದ ಗುಣಮಟ್ಟ ಹೆಚ್ಚಾಗುತ್ತದೆ. ಇದರ ಜೊತೆಗೆ ಪ್ರೋಸ್ಟೇಟ್ ಕ್ಯಾನ್ಸರ್ ಸಮಸ್ಯೆ ಇರುವುದಿಲ್ಲ. ಇದರಲ್ಲಿ ಒಮೆಗಾ -3 ಫ್ಯಾಟಿ ಆಸಿಡ್ ಅಂಶಗಳು ಪ್ರಮಾಣ ಹೆಚ್ಚಾಗಿದ್ದು, ಪುರುಷರಿಗೆ ಲೈಂಗಿಕ ಆಸಕ್ತಿ ಹೆಚ್ಚಾಗಲು ನೆರವಾಗುತ್ತದೆ.
ಎಳ್ಳಿನಲ್ಲಿ ಆಂಟಿ-ಆಕ್ಸಿಡೆಂಟ್ ಅಂಶಗಳ ಪ್ರಮಾಣ ಹೇರಳವಾಗಿದೆ. ಈ ಕಾರಣದಿಂದ ಫ್ರೀ ರಾಡಿಕಲ್ ಅಂಶಗಳು ವೀರ್ಯಾಣುಗಳ ಗುಣಮಟ್ಟದ ಮೇಲೆ ಹಾನಿ ಮಾಡುವ ಪ್ರಭಾವ ತಪ್ಪುತ್ತದೆ. ಹೀಗಾಗಿ ವೀರ್ಯಾಣುಗಳ ಸಂಖ್ಯೆಯಲ್ಲಿ ಕಡಿಮೆಯಾಗುವುದಿಲ್ಲ. ಆರೋಗ್ಯಕರ ವೀರ್ಯಾಣುಗಳ ಚಲನೆ ಇರಲಿದ್ದು, ಪುರುಷರ ನಪುಂಸಕತ್ವ ದೂರವಾಗಲು ಇದು ಅನುಕೂಲವಾಗುತ್ತದೆ.
ಓಂ ಕಾಳುಗಳಲ್ಲಿ ಕೇವಲ ದೇಹದ ತಾಪಮಾನ ಮಾತ್ರವಲ್ಲ, ಪುರುಷರ ಲೈಂಗಿಕ ಆರೋಗ್ಯವನ್ನು ಕಾಪಾಡುವ ಗುಣವಿದೆ. ಪುರುಷರಲ್ಲಿ ಉಂಟಾಗುವ ಶೀಘ್ರಸ್ಕಲನ ಸಮಸ್ಯೆಗೆ ಪರಿಹಾರ ನೀಡಿ ದೀರ್ಘಕಾಲದವರೆಗೆ ಲೈಂಗಿಕ ತೃಪ್ತಿಯನ್ನು ಹೊಂದುವಂತೆ ಮಾಡುತ್ತದೆ.
ಜೀರಿಗೆ ಕಾಳುಗಳಲ್ಲಿ ಲೈಂಗಿಕ ಆಸಕ್ತಿ ಹೆಚ್ಚು ಮಾಡುವ ಖನಿಜಾಂಶಗಳು ಸಾಕಷ್ಟು ಕಂಡುಬರುತ್ತವೆ. ಇದರಲ್ಲಿ ಪೊಟ್ಯಾಷಿಯಂ ಅಂಶ ಹೆಚ್ಚಾಗಿ ಸಿಗುವುದರಿಂದ ಪುರುಷರು ತಮ್ಮ ಸಂಗಾತಿಯ ಬಳಿ ದೀರ್ಘಕಾಲದವರೆಗೆ ತಮ್ಮ ಲೈಂಗಿಕ ತೃಪ್ತಿ ಅನುಭವಿಸಲು ಅನುಕೂಲವಾಗುತ್ತದೆ. ಇದರಲ್ಲಿರುವ ಜಿಂಕ್ ಅಂಶ ವೀರ್ಯಾಣುಗಳ ಉತ್ಪತ್ತಿಯಲ್ಲಿ ನೆರವಾದರೆ, ಪೊಟ್ಯಾಷಿಯಂ ಅಂಶ ಆರೋಗ್ಯಕರ ಹೃದಯ ಬಡಿತ ಮತ್ತು ರಕ್ತದ ಒತ್ತಡದಲ್ಲಿ ನೆರವಾಗುತ್ತದೆ. ಸಾಕಷ್ಟು ಪುರುಷರಲ್ಲಿ ಕಂಡುಬರುವ ಲೈಂಗಿಕ ಸಾಮರ್ಥ್ಯದ ಸಮಸ್ಯೆಯನ್ನು ಜೀರಿಗೆ ಕಾಳುಗಳು ಸುಲಭವಾಗಿ ಬಗೆಹರಿಸುತ್ತವೆ. ವೀರ್ಯಾಣುಗಳ ಗುಣಮಟ್ಟ & ಸಂತತಿಯನ್ನು ಹೆಚ್ಚು ಮಾಡುವಲ್ಲಿ ಜೀರಿಗೆ ಕಾಳುಗಳ ಪಾತ್ರ ಬಹಳ ದೊಡ್ಡದು.
ಕಲ್ಲಂಗಡಿ ಹಣ್ಣು ಅಧಿಕ ನೀರಿನಾಂಶವನ್ನು ಹೊಂದಿರುವುದರಿಂದ ಇದು ಆರೋಗ್ಯಕ್ಕೆ ಒಳ್ಳೆಯದು, ಬೇಸಿಗೆಯಲ್ಲಿ ದೇಹವನ್ನು ಹೈಡ್ರೀಕರಿಸಿಡಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಕಲ್ಲಂಗಡಿ ಹಣ್ಣು ಸೇವನೆಯಿಂದ ನಿಮ್ಮಲ್ಲಿ ಲೈಂಗಿಕ ಆಸಕ್ತಿ ಹೆಚ್ಚುತ್ತದೆ. ಕಲ್ಲಂಗಡಿ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು.