Health Tips: ಪ್ರತಿದಿನವೂ ಸ್ಟ್ರಾಂಗ್ ಕಾಫಿ ಕುಡಿದರೆ ಮಲಬದ್ಧತೆಯಿಂದ ಮುಕ್ತಿ ದೊರೆಯುತ್ತದೆ!

Coffee & constipation: ಪ್ರತಿದಿನವೂ ಮಿಸ್ ಮಾಡದೆ ಸ್ಟ್ರಾಂಗ್ ಕಾಫಿ ಕುಡಿಯುವುದರಿಂದ ಮಲ ವಿಸರ್ಜನೆ ಸರಾಗವಾಗಿ ನಡೆದು ಕರುಳಿನ ಭಾಗದಲ್ಲಿ ಎಲ್ಲಿಯೂ ಸಹ ಮಲ ಗಟ್ಟಿ ಆಗದಂತೆ ಮತ್ತು ಅಲ್ಲೇ ಉಳಿದುಕೊಳ್ಳದಂತೆ ನೋಡಿಕೊಳ್ಳುತ್ತದೆ.

Coffee & constipation: ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಇಂದು ಅನೇಕರು ಮಲಬದ್ಧತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಲಬದ್ಧತೆ ಜೀರ್ಣಕ್ರಿಯೆಗೆ ಸಂಬಂಧಪಟ್ಟ ಸಮಸ್ಯೆ. ನಾವು ಸೇವಿಸಿದ ಆಹಾರವು ಸಣ್ಣ ಮತ್ತು ದೊಡ್ಡ ಕರುಳಿನಲ್ಲಿ ಜೀರ್ಣವಾಗಿ ಹೊರಬರಬೇಕು. ಕೆಲವರಲ್ಲಿ ಈ ಪ್ರಕ್ರಿಯೆ ಸರಿಯಾಗಿ ಆಗದೆ ದೊಡ್ಡ ಕರುಳಿನಲ್ಲಿ ಚಲನೆಯಲ್ಲಿ ತೊಡಕು ಉಂಟಾಗಿ ಮಲ ಹೊರಗೆ ಬರುವುದಿಲ್ಲ. ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ ಪಡೆಯಬೇಕಾದರೆ ಅನೇಕರು ವಿವಿಧ ರೀತಿಯ ಮನೆಮದ್ದುಗಳನ್ನು ಟ್ರೈ ಮಾಡುತ್ತಾರೆ. ಪ್ರತಿದಿನವೂ ಸ್ಟ್ರಾಂಗ್‌ ಕಾಫಿ ಸೇವನೆಯಿಂದಲೂ ನೀವು ಮಲಬದ್ಧತೆಯಿಂದ ಪರಿಹಾರ ಪಡೆಯಬಹುದು. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ಕಾಫಿಯಲ್ಲಿ ಕೆಫಿನ್ ಅಂಶ ಹೆಚ್ಚಾಗಿ ಕಂಡು ಬರುತ್ತದೆ. ಇದು ದೇಹದಲ್ಲಿ ಕರುಳಿನ ಚಲನೆಯನ್ನು ಉತ್ತಮಗೊಳಿಸುವ ಮೂಲಕ ಹೊಟ್ಟೆಯ ಭಾಗದ ಮಾಂಸ - ಖಂಡಗಳನ್ನು ಸಡಿಲಗೊಳಿಸುತ್ತದೆ. ಇದರಿಂದ ತಾನಾಗಿಯೇ ಮಲಬದ್ಧತೆ ಸಮಸ್ಯೆ ಬಗೆಹರಿಯುತ್ತದೆ.

2 /5

ಪ್ರತಿದಿನವೂ ಮಿಸ್ ಮಾಡದೆ ಸ್ಟ್ರಾಂಗ್ ಕಾಫಿ ಕುಡಿಯುವುದರಿಂದ ಮಲ ವಿಸರ್ಜನೆ ಸರಾಗವಾಗಿ ನಡೆದು ಕರುಳಿನ ಭಾಗದಲ್ಲಿ ಎಲ್ಲಿಯೂ ಸಹ ಮಲ ಗಟ್ಟಿ ಆಗದಂತೆ ಮತ್ತು ಅಲ್ಲೇ ಉಳಿದುಕೊಳ್ಳದಂತೆ ನೋಡಿಕೊಳ್ಳುತ್ತದೆ.

3 /5

ಒಂದು ಅಧ್ಯಯನ ಹೇಳುವ ಪ್ರಕಾರ, ಮಲಬದ್ಧತೆ ಸಮಸ್ಯೆಗೆ ನೀವು ಸೇವನೆ ಮಾಡುವ ಆಹಾರ ಪದಾರ್ಥಗಳಿಗೆ ಸರಿಸಮಾನವಾಗಿ ನೀವು ಕುಡಿಯುವ ಒಂದು ಕಪ್ ಕಾಫಿ ಕೂಡ ಉತ್ತಮ ರೀತಿ ಕೆಲಸ ಮಾಡುತ್ತದೆ.

4 /5

ಕಾಫಿಯನ್ನು ಯಾವುದೇ ಕಾರಣಕ್ಕೂ ಅತಿಯಾಗಿ ಸೇವನೆ ಮಾಡಲು ಹೋಗಬಾರದು. ಇದರಿಂದ ನಿಮ್ಮ ದೇಹದ ನಿರ್ಜಲೀಕರಣ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಕಾಫಿ ಕುಡಿದ ನಂತರ ಸಾಕಷ್ಟು ನೀರು ಕುಡಿಯುವುದನ್ನು ಮರೆಯಬಾರದು.

5 /5

ಬೆಳಗ್ಗೆ ಒಂದು ಕಪ್ ಕಾಫಿ ಅಥವಾ ಚಹಾವನ್ನು ಕುಡಿಯುವುದರಿಂದ ಅದರ ಕೆಫೀನ್ ಅಂಶದಿಂದಾಗಿ ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.