Sleeping Disorders: ಆರೋಗ್ಯಕರ ಜೀವನಕ್ಕೆ ನಿದ್ರೆ ತುಂಬಾನೇ ಮುಖ್ಯ. ಹೀಗಾಗಿ ಪ್ರತಿದಿನ ಕನಿಷ್ಠ 6-8 ಗಂಟೆ ನಿದ್ರೆ ಮಾಡುವುದು ಅವಶ್ಯಕ. ನಿದ್ರೆಯಲ್ಲಿ ಆಗುವ ಏರು-ಪೇರು ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
Sleeping Disorders: ರಾತ್ರಿ ತಡವಾಗಿ ಮಲಗುವ ಆರೋಗಕ್ಕೆ ಒಳ್ಳೆಯದಲ್ಲ. ಸರಿಯಾದ ಸಮಯಕ್ಕೆ ನಿದ್ದೆ ಮಾಡಿದ್ರೆ ಮಾತ್ರ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಪ್ರತಿದಿನ ತಡವಾಗಿ ಮಲಗುವುದು ಹೃದಯದ ಆರೋಗ್ಯಕ್ಕೆ ಹಾನಿಕಾರಕ. ನಿದ್ರಾಹೀನತೆಯ ಸಮಸ್ಯೆಯು ಹೃದಯದ ಸಮಸ್ಯೆಗಳಿಗೆ ಕಾರಣವಾಗಬಹುದು. ಸರಿಯಾದ ಸಮಯಕ್ಕೆ ನಿದ್ರೆ ಮಾಡುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ಪ್ರತಿದಿನ ಒಂದು ನಿರ್ದಿಷ್ಟ ಸಮಯದಲ್ಲಿ ಮಲಗುವವರಿಗೆ ಹೃದ್ರೋಗ ಬರುವ ಸಾಧ್ಯತೆ ಕಡಿಮೆ ಅಂತಾ ಅನೇಕ ಸಂಶೋಧನೆಗಳು ದೃಢಪಡಿಸಿವೆ. ನಿದ್ರೆಯ ಕೊರತೆ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ದಿನಕ್ಕೆ 5 ಗಂಟೆಗಿಂತ ಕಡಿಮೆ ನಿದ್ದೆ ಮಾಡಿದ್ರೆ ಏನಾಗುತ್ತೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಅತಿಯಾದ ಒತ್ತಡ ನಿದ್ರೆಯ ಸಮಸ್ಯೆಗಳನ್ನು ಉಂಟು ಮಾಡಬಹುದು. ಹೀಗಾಗಿ ಒತ್ತಡ ನಿರ್ವಹಿಸಲು ಧ್ಯಾನ, ಯೋಗ, ಬೆಳಗ್ಗೆ ಹಾಗೂ ಸಂಜೆಯ ವಾಕಿಂಗ್ ಮಾಡಬೇಕು. ಇದು ನಿಮ್ಮ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ನೀವು ಸುಖ ನಿದ್ರೆ ಪಡೆಯಬಹುದು.
ಆರೋಗ್ಯಕರ ಜೀವನಕ್ಕೆ ವ್ಯಾಯಾಮ ಬಹಳಮುಖ್ಯ. ದಿನಕ್ಕೆ ಅರ್ಧಗಂಟೆಯ ವ್ಯಾಯಾಮ ಮಾಡುವುದು ದೇಹವನ್ನು ಆರೋಗ್ಯವಾಗಿಡುತ್ತದೆ. ಇದು ದೇಹದಲ್ಲಿ ಸಂತೋಷದ ಹಾರ್ಮೋನುಗಳನ್ನು ಸೃಷ್ಟಿಸುತ್ತದೆ. ಇದರಿಂದ ನೀವು ಉತ್ತಮ ನಿದ್ರೆ ಪಡೆಯಬಹುದು. ಆದರೆ ವ್ಯಾಯಾಮದ ನಂತರ ಅಪ್ಪಿತಪ್ಪಿಯೂ ಮಲಗಬಾರದು.
ನಿದ್ರೆಯ ವಿಳಂಬವು ಸೆಲ್ಯುಲಾರ್ ಹಾನಿ, ಉರಿಯೂತ ಮತ್ತು ಹೃದ್ರೋಗದ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಹೀಗಾಗಿ ಪ್ರತಿದಿನ ನಿಗದಿತ ಸಮಯಕ್ಕೆ ಮಲಗಿ ಉತ್ತಮ ನಿದ್ರೆ ಪಡೆಯಬೇಕು. ಇದು ನಿಮ್ಮ ಆರೋಗ್ಯಕ್ಕೆ ತುಂಬಾನೇ ಮುಖ್ಯ. ನಿದ್ರೆ ಮಾಡುವುದರಿಂದ ನೀವು ಆರೋಗ್ಯಕರ ಜೀವನ ಪಡೆಯಬಹುದು.
ಮಲಗುವ ಮುನ್ನ ಫೋನ್ ಬಳಸುವ ಅಭ್ಯಾಸವಿದ್ದರೆ ಇಂದೇ ಬಿಟ್ಟುಬಿಡಿ. ಫೋನ್ ಮೂಲಕ ಹೊರಸೂಸುವ ನೀಲಿ ಬೆಳಕು ನಿಮ್ಮ ನಿದ್ರೆಗೆ ಭಂಗ ತರುತ್ತದೆ. ಫೋನ್ ಬಳಕೆಯಿಂದ ಮೆದುಳಿಗೆ ವಿಶ್ರಾಂತಿ ದೊರೆಯುವುದಿಲ್ಲ. ಹೀಗಾಗಿ ಮಲಗುವ ಒಂದು ಗಂಟೆ ಮೊದಲು ಫೋನ್ ಬಳಕೆ ನಿಲ್ಲಿಸಿ.
ಆರೋಗ್ಯಕರ ಜೀವನಕ್ಕೆ ನಿದ್ರೆ ತುಂಬಾನೇ ಮುಖ್ಯ. ಹೀಗಾಗಿ ಪ್ರತಿದಿನ ಕನಿಷ್ಠ 6-8 ಗಂಟೆ ನಿದ್ರೆ ಮಾಡುವುದು ಅವಶ್ಯಕ. ನಿದ್ರೆಯಲ್ಲಿ ಆಗುವ ಏರು-ಪೇರು ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ನಿದ್ರೆಗೆ ಒಂದು ಸಮಯವನ್ನು ನಿಗದಿಪಡಿಸಿ, ಆ ವೇಳೆಗೆ ಸರಿಯಾಗಿ ನಿದ್ರಿಸುವುದು ರೂಢಿಸಿಕೊಳ್ಳಿರಿ. ಇದು ನಿಮ್ಮ ಉತ್ತಮ ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ.