Health Tips: ಖಾಲಿ ಹೊಟ್ಟೆಯಲ್ಲಿ ನುಗ್ಗೆಕಾಯಿ ನೀರು ಸೇವಿಸಿದ್ರೆ ಏನಾಗುತ್ತೆ ಗೊತ್ತಾ?

Health Benefits of Drumstick Leaves: ನುಗ್ಗೆಕಾಯಿ ಮಧುಮೇಹ ರೋಗಿಗಳಿಗೆ ಅತ್ಯುತ್ತಮವಾಗಿದೆ. ಏಕೆಂದರೆ ಇದು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಮಧುಮೇಹದಿಂದ ಬಳಲುತ್ತಿರುವವರು ಖಾಲಿ ಹೊಟ್ಟೆಯಲ್ಲಿ ನುಗ್ಗೆಕಾಯಿ ನೀರನ್ನು ಸೇವಿಸಬೇಕು.

Health Benefits of Drumstick Water: ಖಾಲಿ ಹೊಟ್ಟೆಯಲ್ಲಿ ನುಗ್ಗೆಕಾಯಿ ನೀರು ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ನುಗ್ಗೆಕಾಯಿ ನಿಮ್ಮ ಜೀರ್ಣಕ್ರಿಯೆಯನ್ನು ಸರಿಪಡಿಸುವುದರ ಜೊತೆಗೆ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಲಿವರ್​​ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ನುಗ್ಗೆಯ ಎಲೆಗಳು, ಕಾಂಡ ಅಥವಾ ಹೂ ಹೀಗೆ ಎಲ್ಲಾ ಭಾಗಗಳು ಹಲವಾರು ಪ್ರಯೋಜನಗಳನ್ನು ಹೊಂದಿವೆ. ನುಗ್ಗೆಕಾಯಿ ನೀರು ಸೇವನೆಯಿಂದ ದೊರೆಯುವ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ... 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ನುಗ್ಗೆಕಾಯಿಯು ಕಿತ್ತಳೆಗಿಂತ 7 ಪಟ್ಟು ಹೆಚ್ಚು ವಿಟಮಿನ್ C, ಕ್ಯಾರೆಟ್‌ಗಿಂತ 10 ಪಟ್ಟು ಹೆಚ್ಚು ವಿಟಮಿನ್ A, ಹಾಲಿಗಿಂತ 17 ಪಟ್ಟು ಹೆಚ್ಚು ಕ್ಯಾಲ್ಸಿಯಂ, ಮೊಸರಿಗಿಂತ 9 ಪಟ್ಟು ಹೆಚ್ಚು ಪ್ರೋಟೀನ್, ಬಾಳೆಹಣ್ಣಿಗಿಂತ 15 ಪಟ್ಟು ಹೆಚ್ಚು ಪೊಟ್ಯಾಸಿಯಂ ಮತ್ತು 25 ಪಟ್ಟು ಹೆಚ್ಚು ಕಬ್ಬಿಣವನ್ನು ನೀಡುತ್ತದೆ. ನುಗ್ಗೆಕಾಯಿಯ ಎಲೆಗಳನ್ನು ನೀರಿನಲ್ಲಿ ಕುದಿಸಿ ಕಷಾಯವನ್ನು ತಯಾರಿಸಿ ಸೇವಿಸಬಹುದು.

2 /5

ಖಾಲಿ ಹೊಟ್ಟೆಯಲ್ಲಿ ನುಗ್ಗೆಕಾಯಿ ನೀರು ಕುಡಿಯುವುದರಿಂದ ನೀವು ವಿವಿಧ ಕಾಯಿಲೆಗಳು ಮತ್ತು ಪೌಷ್ಟಿಕಾಂಶದ ಕೊರತೆಯಿಂದ ಮುಕ್ತಿ ಸಿಗುತ್ತದೆ. ವಿಟಮಿನ್ A, C, E, ಕ್ಯಾಲ್ಸಿಯಂ, ಪೊಟ್ಯಾಸಿಯಂ ಮತ್ತು ಕಬ್ಬಿಣದಂತಹ ಅಗತ್ಯ ಜೀವಸತ್ವಗಳು, ಪೋಷಕಾಂಶಗಳು ಮತ್ತು ಖನಿಜಗಳನ್ನು ನುಗ್ಗೆಕಾಯಿ ಒಳಗೊಂಡಿದೆ.

3 /5

ಕಡಿಮೆ ಹಿಮೋಗ್ಲೋಬಿನ್ ಹೊಂದಿದ್ದರೆ ಅಥವಾ ವಿಟಮಿನ್‌ಗಳ ಕೊರತೆಯಿಂದ ಬಳಲುತ್ತಿದ್ದರೆ, ಕೂದಲು ಉದುರುವಿಕೆ, ತೆಳುವಾದ ಮೂಳೆಗಳು ಅಥವಾ ಚರ್ಮದ ಸಮಸ್ಯೆಗಳನ್ನು ಅನುಭವಿಸಿದರೆ ನಿಮ್ಮ ದೈನಂದಿನ ಡಯಟ್‌ನಲ್ಲಿ ನುಗ್ಗೆಕಾಯಿ ನೀರನ್ನು ಸೇವಿಸಬೇಕು. ನುಗ್ಗೆಕಾಯಿ ನೀರು ಚಯಾಪಚಯವನ್ನು ಸುಧಾರಿಸುವುದರ ಜೊತೆಗೆ ತೂಕ ಕಡಿಮೆ ಮಾಡಿಕೊಳ್ಳಲು ಸಹ ಸಹಾಯ ಮಾಡುತ್ತದೆ.

4 /5

ನುಗ್ಗೆಕಾಯಿ ಬೀಟಾ ಕ್ಯಾರೋಟಿನ್ ಮತ್ತು ವಿಟಮಿನ್ ʼಸಿʼ ಯ ಸಮೃದ್ಧ ಮೂಲವಾಗಿದ್ದು, ಇದು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನುಗ್ಗೆಕಾಯಿ ಉರಿಯೂತದ ಗುಣಲಕ್ಷಣ, ಪಾಲಿಫಿನಾಲ್ ಮತ್ತು ಫ್ಲೇವನಾಯ್ಡ್‌ಗಳನ್ನು ಹೊಂದಿದೆ. ಇದು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

5 /5

ನುಗ್ಗೆಕಾಯಿ ಮಧುಮೇಹ ರೋಗಿಗಳಿಗೆ ಅತ್ಯುತ್ತಮವಾಗಿದೆ. ಏಕೆಂದರೆ ಇದು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಮಧುಮೇಹದಿಂದ ಬಳಲುತ್ತಿರುವವರು ಖಾಲಿ ಹೊಟ್ಟೆಯಲ್ಲಿ ನುಗ್ಗೆಕಾಯಿ ನೀರನ್ನು ಸೇವಿಸಬೇಕು.