Health Benefits of Peanuts: ಶೇಂಗಾದ ಅದ್ಭುತ ಆರೋಗ್ಯ ಪ್ರಯೋಜನಗಳು

Health Benefits of Peanuts: ಶೇಂಗಾ ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಬಡವರ ಬಾದಾಮಿ ಶೇಂಗಾ ಸೇವಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳು ನಿಮ್ಮದಾಗುತ್ತದೆ.

Health Benefits of Peanuts: ಶೇಂಗಾ ವಿಶಿಷ್ಟ ರುಚಿ ಹಾಗೂ ಪೋಷಕಾಂಶ ಗುಣಗಳಿಂದ ಸಮೃದ್ಧವಾಗಿದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ಆರೋಗ್ಯ ದ್ವಿಗುಣಗೊಳ್ಳುತ್ತದೆ. ಶೇಂಗಾ ಉತ್ತಮ ಆರೋಗ್ಯಕರ ಆಹಾರ ಪದಾರ್ಥವಾಗಿದೆ. ಇದು ತೂಕ ನಷ್ಟಕ್ಕೆ ಸಹಕಾರಿಯಾಗಿದ್ದು, ಪ್ರೋಟೀನ್, ಕಾರ್ಬೋಹೈಡ್ರೇಟ್‌, ಆರೋಗ್ಯಕರ ಕೊಬ್ಬು, ಫೈಬರ್ ಮತ್ತು ಕೊಬ್ಬಿನಾಮ್ಲಗಳ ಉತ್ತಮ ಮೂಲವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಶೇಂಗಾವನ್ನು ಬಡವರ ಬಾದಾಮಿ ಎನ್ನಲಾಗುತ್ತದೆ. ಬಾದಾಮಿಯಲ್ಲಿ ಹೇರಳ ಪೋಷಕಾಂಶಗಳಿವೆ. ಶೇಂಗಾದಲ್ಲಿ ಏಕ ಮತ್ತು ಬಹು ಅಸಂತೃಪ್ತ ಕೊಬ್ಬುಗಳು (Mono and Polyunsaturated Fats) ಹೆಚ್ಚಿನ ಪ್ರಮಾಣದಲ್ಲಿದೆ. ಇದು ನಮ್ಮ ಆರೋಗ್ಯಕ್ಕೆ ಅವಶ್ಯಕ ಪೋಷಕಾಂಶಗಳಾಗಿವೆ.

2 /5

ಶೇಂಗಾದಲ್ಲಿ ವಿಟಮಿನ್ ಇ, ಬಿ 1, ಬಿ 3 ಮತ್ತು ಬಿ 9 ಮತ್ತು ಮೆಗ್ನೀಸಿಯಂ, ರಂಜಕ ಮತ್ತು ತಾಮ್ರದಂತಹ ಖನಿಜಗಳೂ ಉತ್ತಮ ಪ್ರಮಾಣದಲ್ಲಿವೆ. ಇವುಗಳು ನಿಮ್ಮ ಆರೋಗ್ಯಕ್ಕೆ ಉತ್ತಮ ಪೋಷಕಾಂಶಗಳಾಗಿವೆ.  

3 /5

ಶೇಂಗಾ ಸೇವನೆಯ ಬಳಿಕ ಹೆಚ್ಚುಹೊತ್ತು ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಹೀಗಾಗಿ ಶೇಂಗಾ ಸೇವನೆ ತೂಕ ಇಳಿಕೆಗೆ ಉತ್ತಮ ಆಯ್ಕೆಯಾಗಿದೆ.

4 /5

ಶೇಂಗಾ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸಲು ಸಾಧ್ಯ. ಇದು ನಿಮ್ಮ ಹೃದಯಕ್ಕೆ ಅದ್ಭುತ ಆರೋಗ್ಯ ಪ್ರಯೋಜನ ನೀಡುತ್ತದೆ. ಶೇಂಗಾ ಸೇವನೆಯಿಂದ ರಕ್ತಪರಿಚಲನೆ ಉತ್ತಮಗೊಂಡು ಆರೋಗ್ಯವೂ ಉತ್ತಮವಾಗಿರುತ್ತದೆ. ಇದು ಹೃದ್ರೋಗದ ಅಪಾಯದಿಂದ ನಿಮ್ಮನ್ನು ರಕ್ಷಿಸುತ್ತದೆ.

5 /5

ಪೋಷಕಾಂಶ ಸಮೃದ್ಧ ಆಹಾರವಾಗಿರುವ ಶೇಂಗಾ ನಿಮ್ಮ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವ ಸಾಮರ್ಥ್ಯ ಹೊಂದಿದೆ. ವಿವಿಧ ರೋಗಗಳನ್ನು ತಡೆಗಟ್ಟಲು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಾಮರ್ಥ್ಯವನ್ನು ಸಹ ಹೊಂದಿವೆ.