Health Benefits Of Ash Gourd: ಬೂದು ಕುಂಬಳಕಾಯಿಯಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಫಾಸ್ಫರಸ್, ಸತು, ಮೆಗ್ನೀಸಿಯಮ್, ತಾಮ್ರ ಮತ್ತು ಮ್ಯಾಂಗನೀಸ್, ನಿಯಾಸಿನ್, ಥಯಾಮಿನ್, ವಿಟಮಿನ್ ಸಿ ಮತ್ತು ರೈಬೋಫ್ಲಾವಿನ್‌ನಂತಹ ವಿಟಮಿನ್‌ಗಳು, ಖನಿಜಗಳು, ಪೋಷಕಾಂಶಗಳು ಹೇರಳವಾಗಿವೆ.
Health Benefits Of Ash Gourd: ಬೂದು ಕುಂಬಳಕಾಯಿ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಅಗತ್ಯ ಪೋಷಕಾಂಶಗಳನ್ನು ಹೊಂದಿರುವ ಬೂದು ಕುಂಬಳಕಾಯಿಯು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ದೇಹವನ್ನು ತಂಪಾಗಿಸುತ್ತದೆ. ಬೂದು ಕುಂಬಳಕಾಯಿಯನ್ನು ರುಚಿಯಾದ ಅಡುಗೆಗೆ ಮಾತ್ರವಲ್ಲ, ದೃಷ್ಟಿ ತೆಗೆಯುವುದಕ್ಕೂ ಬಳಸುತ್ತಾರೆ. ಇದನ್ನು ವಿವಿಧ ರೀತಿಯಲ್ಲಿ ಆಹಾರವಾಗಿ ಸೇವಿಸಲಾಗುತ್ತದೆ. ಬೂದು ಕುಂಬಳಕಾಯಿ ಸಾರು, ಸಾಂಬಾರು, ಮಜ್ಜಿಗೆ ಹುಳಿ, ಹಲ್ವಾ, ಸಿಪ್ಪೆಯಿಂದ ಪಲ್ಯ, ತಿರುಳಿನಿಂದ ಜ್ಯೂಸ್, ಡ್ರೈಸೀಡ್ಸ್ ಆಗಿ ಬೀಜಗಳನ್ನು ಸೇವಿಸಲಾಗುತ್ತದೆ. ಬೂದು ಕುಂಬಳಕಾಯಿ ಸೇವನೆಯ ಮತ್ತಷ್ಟು ಆರೋಗ್ಯ ಪ್ರಯೋಜನಗಳ ಮಾಹಿತಿ ಇಲ್ಲಿದೆ ನೋಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಬೂದು ಕುಂಬಳಕಾಯಿ ಆರೋಗ್ಯದ ಖಜಾನೆ ಎಂದರೆ ತಪ್ಪಲ್ಲ. ಇದರಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಫಾಸ್ಫರಸ್, ಸತು, ಮೆಗ್ನೀಸಿಯಮ್, ತಾಮ್ರ ಮತ್ತು ಮ್ಯಾಂಗನೀಸ್, ನಿಯಾಸಿನ್, ಥಯಾಮಿನ್, ವಿಟಮಿನ್ ಸಿ ಮತ್ತು ರೈಬೋಫ್ಲಾವಿನ್‌ನಂತಹ ವಿಟಮಿನ್‌ಗಳು, ಖನಿಜಗಳು, ಪೋಷಕಾಂಶಗಳು ಹೇರಳವಾಗಿವೆ.
ಶರೀರದಲ್ಲಿ ಉಷ್ಣ, ನೋವು ಕಂಡುಬಂದರೆ ಕುಂಬಳಕಾಯಿ ಗೊಜ್ಜು ತಿಂದರೆ ಬಹಳಷ್ಟು ಪರಿಣಾಮಕಾರಿ. ಮೂತ್ರಕೋಶದಲ್ಲಿ ಕಲ್ಲು, ಸೋಂಕಿನ ಸಮಸ್ಯೆ, ಉರಿಮೂತ್ರವಿದ್ದರೆ ಜ್ಯೂಸ್ ಮಾಡಿಕೊಂಡು ಬೆಳಗ್ಗೆ ಹೊತ್ತು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಕೊಲೆಸ್ಟ್ರಾಲ್ ಸಮಸ್ಯೆಯಿದ್ದರೆ ಪ್ರತಿನಿತ್ಯ ಜ್ಯೂಸ್ ಮಾಡಿ ಅದಕ್ಕೆ ಸ್ವಲ್ಪ ಕಾಳುಮೆಣಸು ಪುಡಿ ಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ದಿನನಿತ್ಯ ಕುಡಿದರೆ ಕೊಬ್ಬು ಕರಗುತ್ತದೆ.
ಬೂದು ಕುಂಬಳಕಾಯಿಯ ಬೀಜದ ತೈಲದಿಂದ ತಲೆಗೆ ಮಸಾಜ್ ಮಾಡುವುದರಿಂದ ತಲೆನೋವು ನಿವಾರಣೆ ಜೊತೆಗೆ ನಿದ್ರಾಹೀನತೆ ಸಮಸ್ಯೆ ದೂರವಾಗುತ್ತದೆ. ನೆನಪಿನ ಶಕ್ತಿ ಸುಧಾರಿಸುತ್ತದೆ. ಕುಂಬಳಕಾಯಿ ಜ್ಯೂಸ್ ಸೇವಿಸುವುದರಿಂದ ದಾಹ ನಿವಾರಣೆಯಾಗುವುದು. ಹೊಟ್ಟೆಯಲ್ಲಿ ಹುಳ ತುಂಬಿದ್ದರೆ ಕುಂಬಳಕಾಯಿ ಬೀಜವನ್ನು ಅರೆದು ಸೇವಿಸಿದರೆ ಪರಿಹಾರ ಸಿಗುತ್ತದೆ.
ಬೂದು ಕುಂಬಳಕಾಯಿಯಲ್ಲಿ ಫೈಬರ್ ಹೆಚ್ಚಿರುವುದರಿಂದ ಮಲಬದ್ಧತೆ, ಗ್ಯಾಸ್ ಮತ್ತು ಅಸಿಡಿಟಿಯಂತಹ ಅಜೀರ್ಣ ಸಮಸ್ಯೆಗಳಿರುವವರು ಹೆಚ್ಚು ಬಳಸಬೇಕು. ಇದರಿಂದ ತಯಾರಿಸಿದ ಕೂಷ್ಮಾಂಡ ಲೇಹವನ್ನು ಪ್ರತಿನಿತ್ಯ ಸ್ವಲ್ಪ ಪ್ರಮಾಣದಲ್ಲಿ ಸೇವಿಸುತ್ತಾ ಬಂದರೆ ಶ್ವಾಸಕೋಶದ ಆರೋಗ್ಯಕ್ಕೆ ಒಳ್ಳೆಯದು.