ಹೃದಯ ಸ್ನಾಯುವಿನ ಒಂದು ಭಾಗವು ಸಾಕಷ್ಟು ರಕ್ತವನ್ನು ಪಡೆಯದ ಸ್ಥಿತಿಯನ್ನು ಹೃದಯಾಘಾತ ಅಥವಾ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ ಎಂದೂ ಕರೆಯಲಾಗುತ್ತದೆ.
ಹೃದಯಾಘಾತ ಎಂದರೇನು?: ಹೃದಯ ಸ್ನಾಯುವಿನ ಒಂದು ಭಾಗವು ಸಾಕಷ್ಟು ರಕ್ತವನ್ನು ಪಡೆಯದಿದ್ದಾಗ ಹೃದಯಾಘಾತ ಸಂಭವಿಸುತ್ತದೆ. ಪರಿಧಮನಿಯ ಕಾಯಿಲೆ (CAD) ಹೃದಯಾಘಾತಕ್ಕೆ ಮುಖ್ಯ ಕಾರಣವಾಗಿದೆ. ಇದರ ಸಾಮಾನ್ಯ ಕಾರಣವೆಂದರೆ ಹೃದಯ ಸ್ನಾಯುಗಳಿಗೆ ರಕ್ತದ ಹರಿವನ್ನು ನಿಲ್ಲಿಸುವ ಪರಿಧಮನಿಯ ತೀವ್ರವಾದ ಸೆಳೆತ ಅಥವಾ ಹಠಾತ್ ಸಂಕೋಚನ. ಹೃದಯಾಘಾತದ 5 ಮೂಲಭೂತ ಲಕ್ಷಣಗಳ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಎದೆ ನೋವು ಅಥವಾ ತೀವ್ರ ಅಸ್ವಸ್ಥತೆ ಉಂಟಾಗುವಿಕೆಯು ಹೃದಯಾಘಾತದ ಪ್ರಮುಖ ಲಕ್ಷಣಗಳಾಗಿವೆ. ಹೆಚ್ಚಿನ ಹೃದಯಾಘಾತಗಳು ಎದೆಯ ಮಧ್ಯದಲ್ಲಿ ಅಥವಾ ಎಡಭಾಗದಲ್ಲಿ ಕೆಲ ನಿಮಿಷಗಳಿಗಿಂತ ಹೆಚ್ಚು ಕಾಲ ಇರುವ ಅಸ್ವಸ್ಥತೆಯನ್ನು ಒಳಗೊಂಡಿರುತ್ತದೆ.
ಹಠಾತ್ ಆಗಿ ನಿಮಗೆ ದೌರ್ಬಲ್ಯ ಉಂಟಾಗುವಿಕೆ ಅಥವಾ ಮೂರ್ಛೆ ಭಾವನೆ ಬಂದರೆ ಅದು ಹೃದಯಾಘಾತ ಲಕ್ಷಣವಾಗಿರುತ್ತದೆ. ನೀವು ತಣ್ಣನೆಯ ಬೆವರಿನಿಂದ ಕೂಡ ಬಳಲಬಹುದು. ಈ ರೀತಿ ಆದಾಗ ಕೂಡಲೇ ನೀವು ವೈದ್ಯರನ್ನು ಸಂಪರ್ಕಿಸಬೇಕು.
ದವಡೆ, ಕುತ್ತಿಗೆ ಅಥವಾ ಬೆನ್ನಿನಲ್ಲಿ ನೋವು ಅಥವಾ ಅಸ್ವಸ್ಥತೆ ಉಂಟಾಗುವುದು ಸಹ ಹೃದಯಾಘಾತದ ಲಕ್ಷಗಳಾಗಿವೆ.
ಹಠಾತ್ ಹೃದಯಾಘಾತ ಸಂಭವಿಸುವವರಲ್ಲಿ ಸಾಮಾನ್ಯವಾಗಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಈ ರೀತಿಯಾದಾಗ ಕೂಡಲೇ ನೀವು ವೈದ್ಯರ ಬಳಿ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು.
ಒಂದು ಅಥವಾ ಎರಡೂ ತೋಳುಗಳು ಮತ್ತು ಭುಜಗಳಲ್ಲಿ ನೋವು ಅಥವಾ ಅಸ್ವಸ್ಥತೆ ಉಂಟಾಗುವಿಕೆ ಸಹ ಹೃದಯಾಘಾತದ ಲಕ್ಷಣಗಳಾಗಿರುತ್ತವೆ. ಪ್ರಾರಂಭಿಕ ಹಂತದಲ್ಲಿಯೇ ನೀವು ಚಿಕಿತ್ಸೆ ಪಡೆದುಕೊಂಡರೆ ಹೃದಯಾಘಾತವನ್ನು ತಪ್ಪಿಸಬಹುದು.