Health Tips: ಎಕ್ಕದ ಎಲೆಗಳನ್ನು ಈ ರೀತಿ ಬಳಸಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತೆ ಗೊತ್ತಾ?

Diabetes: ಎಕ್ಕದ ಎಲೆಗಳಲ್ಲಿ ಕಂಡುಬರುವ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳು ಅನೇಕ ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇದನ್ನು ಮಲಬದ್ಧತೆ, ಅತಿಸಾರ, ಕೀಲು ನೋವು, ಹಲ್ಲಿನ ಸಮಸ್ಯೆಗಳಿಗೆ ಬಳಸಲಾಗುತ್ತದೆ.
 

Diabetes Control Tips: ಇದುವರೆಗೆ ನೀವು ಎಕ್ಕದ ಎಲೆಗಳನ್ನು ಅಥವಾ ಹೂವುಗಳನ್ನು ಪೂಜೆಯಲ್ಲಿ ಬಳಸುತ್ತಿರುವುದನ್ನು ನೀವು ನೋಡಿರಬಹುದು.  ಆದರೆ ಇಂದು ನಾವು ಈ ಎಲೆಯ ಅದ್ಭುತ ಪ್ರಯೋಜನದ ಬಗ್ಗೆ ಹೇಳಲಿದ್ದೇವೆ. ಹೌದು, ಹಲವಾರು ವರ್ಷಗಳಿಂದ ಆಯುರ್ವೇದ ಚಿಕಿತ್ಸೆಯಾಗಿ ಈ ಎಕ್ಕದ ಎಳೆಗಳನ್ನು ಬಳಸಲಾಗುತ್ತೆ. ವಿವಿಧ ಕಾಯಿಲೆಗಳನ್ನು ಗುಣಪಡಿಸಲು ಇದನ್ನು ಬಳಸಲಾಗುತ್ತದೆ.

 

ಇದನ್ನೂ ಓದಿ-Health Tips: ಈ ಬೀಜ ಸೇವನೆಯಿಂದಲೂ ನಿಯಂತ್ರಣಕ್ಕೆ ಬರುತ್ತದೆ ಅಧಿಕ ರಕ್ತದೊತ್ತಡ

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

1. ಎಕ್ಕದ ಎಲೆಗಳಲ್ಲಿ ಕಂಡುಬರುವ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳು ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಮಲಬದ್ಧತೆ, ಅತಿಸಾರ, ಕೀಲು ನೋವು, ಹಲ್ಲಿನ ಸಮಸ್ಯೆಗಳು ಮತ್ತು ದೇಹದ ಸೆಳೆತಗಳಿಗೆ ಚಿಕಿತ್ಸೆ ನೀಡಲು ಈ ಗಿಡವನ್ನು ಬಳಸಲಾಗುತ್ತದೆ.  

2 /6

2. ಅಧ್ಯಯನದಲ್ಲಿ ತಿಳಿದುಬಂದ ಸಂಗತಿ - ಸಕ್ಕರೆ ಕಾಯಿಲೆಗೆ ಎಕ್ಕದ ಎಲೆಗಳಿಂದಲೂ ಚಿಕಿತ್ಸೆ ನೀಡಲಾಗುತ್ತದೆ. ಇನ್ನೊಂದೆಡೆ ಎಕ್ಕದ  ಸಸ್ಯದ ಸಾರವು ಇನ್ಸುಲಿನ್-ಪ್ರೇರಿತ ಪ್ರತಿರೋಧವನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಸಂಶೋಧನೆಯಲ್ಲಿ ಕಂಡುಬಂದಿದೆ.  

3 /6

3. ಇತರ ಸಸ್ಯಗಳು -  ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಲು ಮಧುಮೇಹ ರೋಗಿಗಳು ತಮ್ಮ ಜೀವನಶೈಲಿಯಲ್ಲಿ ಬೆಂಡೆಕಾಯಿ, ಮೆಂತ್ಯ, ಜಾಮೂನ್, ದಾಲ್ಚಿನ್ನಿ, ಕೆಂಪು ಮೆಣಸಿನಕಾಯಿ, ತುಳಸಿ, ಶಿಲಾಜಿತ್ ಮತ್ತು ತಮಾಲ್ ಪತ್ರಗಳನ್ನು ಕೂಡ ಸೇರಿಸಿಕೊಳ್ಳಬಹುದು.  

4 /6

4. ಇತರ ರೋಗಗಳ ನಿವಾರಣೆಗೂ ಕೂಡ ಎಕ್ಕದ ಎಲೆ ಬಳಸಲಾಗುತ್ತದೆ - ಎಕ್ಕದ ಗಿಡದ ಬೇರನ್ನು ಕುಷ್ಠರೋಗ, ಎಸ್ಜಿಮಾ, ಅಲ್ಸರ್, ಅತಿಸಾರ ಮತ್ತು ಕೆಮ್ಮುಗಳಲ್ಲಿಯೂ ಕೋಅ ಬಳಸಲಾಗುತ್ತದೆ. ಇದೇ ವೇಳೆ ಯಾವುದೇ ರೀತಿಯ ಗಾಯವನ್ನು ಗುಣಪಡಿಸಲು ಕೂಡ ಎಕ್ಕದ ಎಲೆಗಳನ್ನು ಬಳಸಲಾಗುತ್ತದೆ.  

5 /6

5. ಡಯಾಬಿಟಿಸ್ ನಲ್ಲಿ ಎಕ್ಕದ ಎಲೆಗಳನ್ನು ಹೇಗೆ ಬಳಸಬೇಕು?ಎಕ್ಕದ ಎಲೆಗಳನ್ನು ಉಲ್ಟಾ ಮಾಡಿ ಮತ್ತು ಅದನ್ನು ಅಡಿಭಾಗಕ್ಕೆ ಹಚ್ಚಿ ನಂತರ ಸಾಕ್ಸ್ ಧರಿಸಿ. ರಾತ್ರಿಯಿಡೀ ಇಟ್ಟುಕೊಂಡ ನಂತರ, ಮಾರನೆಯ ದಿನ ಬೆಳಗ್ಗೆ ಪಾದಗಳನ್ನು ತೊಳೆಯಿರಿ. ಇದನ್ನು 1 ವಾರ ನಿರಂತರವಾಗಿ ಮಾಡಿ.   

6 /6

6. ಎಚ್ಚರಿಕೆ - ಗರ್ಭವತಿ ಮಹಿಳೆಯರು ಇದನ್ನು ಬಳಸಬಾರದು. ಅಷ್ಟೇ ಅಲ್ಲ ಎಕ್ಕಿ ಗಿಡದ ಹಾಲು ತುಂಬಾ ವಿಷಕಾರಿಯಗಿರುತ್ತದೆ. ಹೀಗಾಗಿ ಅದನ್ನು ಕಣ್ಣುಗಳ ಸಂಪರ್ಕಕ್ಕೆ ತೆಗೆದುಕೊಂಡು ಹೋಗಬೇಡಿ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)