Email account ಹ್ಯಾಕ್ ಆಗಿದೆಯಾ ಎನ್ನುವುದನ್ನು ಈ ಸುಲಭ ವಿಧಾನಗಳಲ್ಲಿ ಪತ್ತೆ ಮಾಡಿ

ನಿಮ್ಮ ಇಮೇಲ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆಯೇ? ಕೇವಲ ಎರಡು ಸುಲಭ ವಿಧಾನಗಳೊಂದಿಗೆ ಇದನ್ನು ಕಂಡುಹಿಡಿಯಬಹುದು. 
 

ನವದೆಹಲಿ : ಇತ್ತೀಚಿನ ದಿನಗಳಲ್ಲಿ ಮೊಬೈಲ್ ಹ್ಯಾಕ್ (Mobile hack) ಸಮಸ್ಯೆಯನ್ನು ಹೆಚ್ಚಿನವರು ಎದುರಿಸುತ್ತಾರೆ. ಮೊಬೈಲ್ , ಇಮೇಲ್ ಹ್ಯಾಕ್ ಮಾಡಿ  ಎಲ್ಲಾ ಡಾಟಾವನ್ನು ಕದಿಯಲಾಗುತ್ತದೆ. ಈ ಸಂದರ್ಭದಲ್ಲಿ ಮೊಬೈಲ್ ಅಥವಾ ಇಮೇಲ್ ನಲ್ಲೇನಾದರೂ (Email) ಬ್ಯಾಂಕ್ ಡೀಟೇಲ್ ಗಳಿದ್ದರೆ ಅದು ಇನ್ನು ಅಪಾಯಕಾರಿ.  ಪ್ರತಿ ದಿನ ಹ್ಯಾಕ್  ಸುದ್ದಿಗಳನ್ನು ಕೇಳಿ ನಿಮ್ಮ ಇಮೇಲ್ ಖಾತೆಯನ್ನು ಕೂಡಾ ಹ್ಯಾಕ್ ಮಾಡಲಾಗಿದೆ ಎಂಬ ಅನುಮಾನ ಬಂದಿರಬಹುದು. ಇಂಥಹ ಸಂದೇಹವಿದ್ದರೆ, ಚಿಂತೆ ಮಾಡುವ ಅಗತ್ಯವಿಲ್ಲ. ಇದನ್ನು ಕಂಡುಕೊಳ್ಳಲು ಸುಲಭ ವಿಧಾನವಿದೆ.  ಆ ವಿಧಾನ ಯಾವುವು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

 

1 /5

 ಇತ್ತೀಚಿನ ಕೆಲವು ವರದಿಗಳಲ್ಲಿ, ಸೋಶಿಯಲ್ ಮೀಡಿಯಾ  ಸೈಟ್ ಫೇಸ್‌ಬುಕ್‌ನಿಂದ (Facebook) ಕೋಟ್ಯಂತರ ಬಳಕೆದಾರರ ಡೇಟಾ ಸೋರಿಕೆಯಾಗಿದೆ ಎಂದು ಹೇಳಲಾಗಿದೆ. ಮಾಹಿತಿಯ ಪ್ರಕಾರ, ಭಾರತದ 60 ಲಕ್ಷಕ್ಕೂ ಹೆಚ್ಚು ಬಳಕೆದಾರರ ಡೇಟಾ ಸೋರಿಕೆಯಾಗಿದೆ.  

2 /5

ಪೇಮೆಂಟ್ ಅಪ್ಲಿಕೇಶನ್ Mobikwikನಿಂದಲೂ ಕೆಲವು ಬಳಕೆದಾರರ ಡೇಟಾ ಸೋರಿಕೆಯಾಗಿದೆ. ಈ ಡಾಟಾ ಸೋರಿಕೆ ಸಂದರ್ಭದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಕೂಡ ತನಿಖೆಗೆ ಆದೇಶಿಸಿತ್ತು.

3 /5

ನಿಮ್ಮ ಇಮೇಲ್ ಖಾತೆಯನ್ನು ಸಹ ಹ್ಯಾಕ್ ಮಾಡಲಾಗಿದೆ ಎಂಬ ಸಂದೇಹ ನಿಮಗಿದ್ದರೆ, ಅದಕ್ಕೂ ಈಗ ಪರಿಹಾರವಿದೆ. ಸುಲಭ ವಿಧಾನದಿಂದ ಇದನ್ನು ಪತ್ತೆ ಹಚ್ಚಬಹುದು. haveibeenpwned.com ಗೆ ಹೋಗಿ ನಿಮ್ಮ ಇ ಮೇಲ್ ಹ್ಯಾಕ್ ಆಗಿದೆಯೇ ಎನ್ನುವುದನ್ನು ಕಂಡುಕೊಳ್ಳಬಹುದು. 

4 /5

ನಿಮ್ಮ ಇಮೇಲ್ ಐಡಿಯನ್ನು haveibeenpwned.com ನಲ್ಲಿ ನಮೂದಿಸುವ ಮೂಲಕ ಹ್ಯಾಕಿಂಗ್ ಬಗ್ಗೆ ತಿಳಿದುಕೊಳ್ಳಬಹುದು. ನಿಮ್ಮ ಇಮೇಲ್ ಐಡಿಯನ್ನು ನಮೂದಿಸುವ ವೇಳೆ, ಸಿಗ್ಲಲ್ ನಲ್ಲಿ  ಹಸಿರು ಬಣ್ಣ ಬಂದರೆ ನಿಮ್ಮ ಇಮೇಲ್ ಸುರಕ್ಷಿತವಾಗಿದೆ ಎಂದರ್ಥ. ಒಂದು ವೇಳೆ ಅದು ಕಂದು ಬಣ್ಣಕ್ಕೆ ತಿರುಗಿದರೆ , ನಿಮ್ಮ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.

5 /5

ಸಿಸ್ಟಮ್‌ನಲ್ಲಿ ಹ್ಯಾಕಿಂಗ್ ಅಪಾಯವಿದ್ದರೆ, ತಕ್ಷಣ ನಿಮ್ಮ ಇಮೇಲ್ ಖಾತೆಯ ಪಾಸ್‌ವರ್ಡ್ ಅನ್ನು ಬದಲಾಯಿಸಿ. ಸ್ಟ್ರಾಂಗ್ ಪಾಸ್‌ವರ್ಡ್ ಅನ್ನು ಇಡಿ. ಹೀಗೆ ಮಾಡುವುದರಿಂದ ಹ್ಯಾಕ್ ಆಗುವ ಅಪಾಯವನ್ನು ತಪ್ಪಿಸಿಕೊಳ್ಳಬಹುದು.