6 ವರ್ಷದ ಲವ್, ಮದುವೆಗೂ ಮುನ್ನ ಮಗು!‌ ಪ್ರೀತಿಗಾಗಿ ಒಬ್ಬಳನ್ನೇ 3 ಬಾರಿ ಮದುವೆಯಾದ ಟೀಂ ಇಂಡಿಯಾದ ಕ್ರಿಕೆಟರ್ ಈತ! ಆದ್ರೆ ಕೊನೆಗೆ ಸಿಕ್ಕಿದ್ದು ಡಿವೋರ್ಸ್!

Hardik Pandya-Natasa Stankovic: ಈ ಬಾರಿಯ ಐಪಿಎಲ್‌ʼನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಿದ್ದರು. ಮುಂಬೈ ತಂಡದ ನಾಯಕನಾಗಿ 14 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದ ಪಾಂಡ್ಯ ಕೇವಲ 4 ಪಂದ್ಯಗಳಲ್ಲಿ ಮಾತ್ರ ತಂಡವನ್ನು ಗೆದ್ದುಕೊಂಡಿದ್ದರು. ಇದರಿಂದಾಗಿ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದು ಐಪಿಎಲ್‌ʼನಿಂದ ನಿರ್ಗಮಿಸಿತ್ತು.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /7

ಈ ಬಾರಿಯ ಐಪಿಎಲ್‌ʼನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಿದ್ದರು. ಮುಂಬೈ ತಂಡದ ನಾಯಕನಾಗಿ 14 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದ ಪಾಂಡ್ಯ ಕೇವಲ 4 ಪಂದ್ಯಗಳಲ್ಲಿ ಮಾತ್ರ ತಂಡವನ್ನು ಗೆದ್ದುಕೊಂಡಿದ್ದರು. ಇದರಿಂದಾಗಿ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದು ಐಪಿಎಲ್‌ʼನಿಂದ ನಿರ್ಗಮಿಸಿತ್ತು.

2 /7

ಈ ದುಃಸ್ವಪ್ನ ಮರೆಯುವ ವೇಳೆಗಾಗಲೇ ಹಾರ್ದಿಕ್ ಪಾಂಡ್ಯ ವೈಯಕ್ತಿಕ ಜೀವನದಲ್ಲಿ ಬಿರುಗಾಳಿ ಎದ್ದಿತ್ತು. ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಸ್ಟಾಂಕೋವಿಕ್ ವಿಚ್ಛೇದನ ಪಡೆದು, ಇದುವರೆಗೆ ಹರಿದಾಡುತ್ತಿದ್ದ ವದಂತಿ ಸತ್ಯ ಎಂಬುದನ್ನು ಸಾಬೀತುಪಡಿಸಿದ್ದರು.   

3 /7

ಒಂದೊಮ್ಮೆ ಮುಂಬೈನ ನೈಟ್ ಕ್ಲಬ್‌ʼನಲ್ಲಿ ಭೇಟಿಯಾಗಿದ್ದ ಹಾರ್ದಿಕ್ ಮತ್ತು ನತಾಶಾ, ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬಿದ್ದಿದ್ದರು. ಅದಾದ ಬಳಿಕ ಡೇಟಿಂಗ್‌ ಮಾಡಿದ್ದರು.  

4 /7

ಇನ್ನು ಇವರಿಬ್ಬರು ಸಹ ಒಟ್ಟಾಗಿ ಅನೇಕ ಸಂದರ್ಭದಲ್ಲಿ ಕಾಣಿಸಿಕೊಂಡಿದ್ದರು. ಅಂದಹಾಗೆ ಒಂದು ದಿನ ಹಾರ್ದಿಕ್ ಪಾಂಡ್ಯ ಕೆಲವು ಫೋಟೋ ಮತ್ತು ವೀಡಿಯೊಗಳನ್ನು ಶೇರ್‌ ಮಾಡಿ ನತಾಶಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಘೋಷಿಸಿದರು. ತುಂಬಾ ಪ್ರೀತಿಸುತ್ತಿದ್ದ ಜೋಡಿ ದುಬೈನಲ್ಲಿ ಸ್ಪೀಡ್ ಬೋಟ್ʼನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅಂದಹಾಗೆ ಅದಾಗಲೇ ನತಾಶಾ ಗರ್ಭಿಣಿಯಾಗಿದ್ದರು ಎಂದು ತಿಳಿದುಬಂದಿತ್ತು.  

5 /7

ಈ ಜೋಡಿ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ನಾವು ಮದುವೆಯಾಗುತ್ತಿದ್ದೇವೆ ಎಂದು ಬರೆದುಕೊಂಡಿತ್ತು. ಅಷ್ಟೇ ಅಲ್ಲದೆ, ನತಾಶಾ ಗರ್ಭಿಣಿ ಎಂಬುದನ್ನು ಸಹ ಈ ಪೋಸ್ಟ್ʼನಲ್ಲಿ ಹೇಳಲಾಗಿತ್ತು.   

6 /7

ಈ ಮೂಲಕ ಇಬ್ಬರೂ ಎರಡನೇ ಬಾರಿ ಮದುವೆಯಾಗಿದ್ದರು.  ಜೀವನದ ಈ ಸುಂದರ ಹಂತವನ್ನು ಆನಂದಿಸುತ್ತಿದ್ದ ಜೋಡಿ, ಮಗನ ಜನನದ ಬಳಿಕ ಅದ್ದೂರಿಯಾಗಿ ವಿವಾಹವಾಗಿದ್ದರು. ಇದರ ಫೋಟೋಗಳು ಭಾರೀ ವೈರಲ್‌ ಆಗಿತ್ತು/   

7 /7

ಆದರೆ ಇದೀಗ ಈ ಮುದ್ದಾದ ಪ್ರೇಮ ಪ್ರಣಯ ಮುಕ್ತಾಯಗೊಂಡಿದೆ. ಆರು ವರ್ಷಗಳ ಕಾಲ ಪ್ರೀತಿಸಿ ದಾಂಪತ್ಯ ನಡೆಸಿದ್ದ ಈ ಜೋಡಿ ವಿಚ್ಛೇದನ ಘೋಷಿಸಿ ನಾನೊಂದು ತೀರಾ.. ನೀನೊಂದು ತೀರಾ ಎಂಬಂತಾಗಿದೆ. ಇನ್ನು ಇವರ ವಿಚ್ಛೇದನಕ್ಕೆ ಕಾರಣ ಏನೆಂಬುದು ತಿಳಿದಿಲ್ಲ.