Hanuman Janmotsav 2022: ಆಂಜನೇಯನ ಪೂಜೆ ವೇಳೆ ಯಾವುದೇ ಕಾರಣಕ್ಕೂ ಈ ತಪ್ಪುಗಳಾಗದಂತೆ ನೋಡಿಕೊಳ್ಳಿ

 ಆಂಜನೇಯ ಸಂತೋಷಗೊಂಡರೆ, ಅವನ ಅನುಗ್ರಹದಿಂದ ಜೀವನದ ಎಲ್ಲಾ ದುಃಖಗಳು ದೂರವಾಗುತ್ತವೆ. 

ಬೆಂಗಳೂರು : Hanuman Janmotsav Puja Rules: ಇಂದು ಹನುಮಾನ್ ಜನ್ಮೋತ್ಸವದ ಹಿನ್ನೆಲೆಯಲ್ಲಿ ಆಂಜನೇಯನಿಗೆ ಪೂಜೆ ಸಲ್ಲಿಸಲಾಗುತ್ತದೆ.  ಆಂಜನೇಯನಿಗೆ ಇಷ್ಟವಾದ ಭೋಗವನ್ನು ಅರ್ಪಿಸಲಾಗುತ್ತದೆ.  ಆಂಜನೇಯ ಸಂತೋಷಗೊಂಡರೆ, ಅವನ ಅನುಗ್ರಹದಿಂದ ಜೀವನದ ಎಲ್ಲಾ ದುಃಖಗಳು ದೂರವಾಗುತ್ತವೆ. ಆದರೆ, ಆಂಜನೇಯನ ಪೂಜೆ ವೇಳೆ  ಕೆಲವು ತಪ್ಪುಗಳನ್ನು ಮಾಡಲೇಬಾರದು.  ಆಂಜನೇಯನ ಪೂಜೆಯ ವೇಳೆ,   ಕೆಲವು ನಿಯಮಗಳನ್ನು ಪಾಲಿಸಬೇಕು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

1 /5

ಹಿಂದೂ ಧರ್ಮದ ಹೊರತಾಗಿ, ಜ್ಯೋತಿಷ್ಯದಲ್ಲಿ ಹನುಮಾನ್ ಜಿ ಪೂಜೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ, ಹನುಮಂತನ ಕೃಪೆಗೆ ಪಾತ್ರರಾದರೆ,  ಅಶುಭ ಗ್ರಹಗಳ ಪ್ರಭಾವವೂ ದೂರವಾಗುತ್ತದೆ. ಆದರೆ ಹನುಮಾನ್ ಜೀ ಪೂಜೆಯ ವೇಳೆ ತಪ್ಪುಗಳಾಗದಂತೆ ನೋಡಿಕೊಳ್ಳಬೇಕು. 

2 /5

ಮಂಗಳವಾರ ಮತ್ತು ಶನಿವಾರದಂದು ಮಾಂಸಾಹಾರ ಮದ್ಯಪಾನದಿಂದ ದೂರವಿರಿ.  ಆಂಜನೇಯ ಪೂಜೆ ವೇಳೆ ಯಾವುದೇ ಕಾರಣಕ್ಕೂ ಮಾಂಸಾಹಾರ-ಮದ್ಯ ಸೇವಿಸಬಾರದು. 

3 /5

ಹನುಮಾನ್ ಜೀ ಪೂಜೆಯ ಸಮಯದಲ್ಲಿ ಶುಚಿತ್ವದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಪೂಜೆ ಮಾಡುವ ಸ್ಥಳವನ್ನು ಸ್ವಚ್ಛವಾಗಿಡಿ. 

4 /5

ಯಾವಾಗಲೂ ಬೆಳಿಗ್ಗೆ ಅಥವಾ ಸಂಜೆ ಆಂಜನೇಯನ ಪೂಜೆ ಮಾಡಬೇಕು. ಬಜರಂಗಬಲಿಯನ್ನು ಮಧ್ಯಾಹ್ನ ಅಥವಾ ರಾತ್ರಿಯ ವೇಳೆ ಪೂಜಿಸಬಾರದು. 

5 /5

ಹನುಮಾನ್ ಜೀ ಪೂಜೆ ಮಾಡುವಾಗ ಕಪ್ಪು ಬಣ್ಣದ ಬಟ್ಟೆಗಳನ್ನು ಎಂದಿಗೂ ಧರಿಸಬೇಡಿ. ಕೆಂಪು ಅಥವಾ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸುವುದು ಶುಭ . (ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಜ್ಞಾನ ಮತ್ತು ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)