Hair Care Tips: ಬಿಳಿಕೂದಲ ಸಮಸ್ಯೆಯಿಂದ ಮುಕ್ತಿ ಬೇಕಾದ್ರೆ ಈ ಜ್ಯೂಸ್‌ಗಳನ್ನು ಸೇವಿಸಿರಿ

Hair Care Tips: ನಿಂಬೆ‌ ಹಣ್ಣು ವಿಟಮಿನ್ ʼCʼಯಿಂದ ಸಮೃದ್ಧವಾಗಿದೆ. ನಿಂಬೆ ಕಾಲಜನ್ ಉತ್ಪಾದನೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಕಬ್ಬಿಣಾಂಶ ಹೀರಿಕೊಳ್ಳುವಿಕೆಯನ್ನು ಸುಧಾರಿಸುತ್ತದೆ. ಕೂದಲ ಆರೋಗ್ಯಕ್ಕೂ ಇದು ತುಂಬಾ ಸಹಕಾರಿಯಾಗಿದೆ.

Hair Care Tips: ಇತ್ತೀಚಿನ ದಿನಗಳಲ್ಲಿ ಯುವಕರು ಸೇರಿದಂತೆ ಅನೇಕರು ಬಿಳಿ ಕೂದಲ ಸಮಸ್ಯೆ ಎದುರಿಸುತ್ತಿದ್ದಾರೆ. ಕೂದಲು ಬೇಗ ಬಿಳಿಯಾಗುವುದು ಇಂದು ಪ್ರಮುಖ ಸಮಸ್ಯೆಯಾಗಿದೆ. ಜೆನೆಟಿಕ್ಸ್, ಹಾರ್ಮೋನ್ ಬದಲಾವಣೆ ಮತ್ತು ಜೀವನಶೈಲಿ ಸೇರಿದಂತೆ ಅನೇಕ ಕಾರಣಗಳಿಂದ ಈ ಸಮಸ್ಯೆ ಅನೇಕರನ್ನು ಕಾಡುತ್ತಿದೆ. ಬಿಳಿ ಕೂದಲಿನಿಂದ ಮುಜುಗರ ತಪ್ಪಿಸಿಕೊಳ್ಳಲು ಇಂದು ಬಹುತೇಕರು ಮಾರುಕಟ್ಟೆಯಲ್ಲಿ ಸಿಗುವ ರಸಾಯನಿಕಯುಕ್ತ ಪ್ರಾಡಕ್ಟ್‌ಗಳನ್ನು ಬಳಕೆ ಮಾಡುತ್ತಿದ್ದಾರೆ. ಇದರಿಂದ ಸಮಸ್ಯೆಗೆ ಪರಿಹಾರ ಸಿಗುವ ಬದಲು ಹೆಚ್ಚಾಗುತ್ತಿದೆ. ಕೂದಲು ಊದುರುವಿಕೆ, ಕೂದಲು ಬಿಳಿಯಾಗುವಿಕೆ ಹೀಗೆ ಅನೇಕ ಸಮಸ್ಯೆಗಳಿಗೆ ಮನೆಮದ್ದುಗಳಿವೆ. ಇವುಗಳನ್ನು ಟ್ರೈ ಮಾಡಿದ್ರೆ ನಿಮ್ಮ ಕೂದಲಿನ ಸಮಸ್ಯೆಯಿಂದ ಮುಕ್ತಿ ದೊರೆಯುತ್ತದೆ. ಇದರ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ನೆಲ್ಲಿಕಾಯಿ ವಿಟಮಿನ್ ʼCʼ ಮತ್ತು ಉತ್ಕರ್ಷಣ ನಿರೋಧಕಗಳ ಅತ್ಯುತ್ತಮ ಮೂಲವಾಗಿದೆ. ಕೂದಲಿನ ಆರೋಗ್ಯ ಉತ್ತೇಜಿಸಲು, ಅಕಾಲಿಕ ಬಿಳಿ ಬಣ್ಣವನ್ನು ತಡೆಗಟ್ಟಲು ಇದು ಸಹಕಾರಿಯಾಗಿದೆ. ಇದರಲ್ಲಿರುವ ಪೋಷಕಾಂಶಗಳು ಬಿಳಿ ಕೂದಲು ಆಗುವುದನ್ನು ತಡೆಯುವ ಜೊತೆಗೆ ಕೂದಲಿನ ಬುಡ ಗಟ್ಟಿಮಾಡಲು ಸಹಕಾರಿಯಾಗಿವೆ. ನಿಯಮಿತವಾಗಿ ನೆಲ್ಲಿಕಾಯಿ ಅಥವಾ ನೆಲ್ಲಿಕಾಯಿ ಜ್ಯೂಸ್‌ ಸೇವಿಸುವುದರಿಂದ ನೀವು ಆರೋಗ್ಯಕರ ಕೂದಲನ್ನು ಹೊಂದಬಹುದು.

2 /5

ಕಬ್ಬಿಣ ಮತ್ತು ವಿಟಮಿನ್ A, Cಯಿಂದ ಸಮೃದ್ಧವಾಗಿರುವ ಪಾಲಕ್ ಸೊಪ್ಪು ಆರೋಗ್ಯಕರ ಕೂದಲ ಬೆಳವಣಿಗೆಗೆ ಸಹಕಾರಿ. ಇದು ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ. ಕಬ್ಬಿಣಾಂಶ ಕೊರತೆಯು ಅಕಾಲಿಕ ಬಿಳಿ ಬಣ್ಣಕ್ಕೆ ಕಾರಣವಾಗಿರುತ್ತದೆ. ಹೀಗಾಗಿ ಪಾಲಕ್‌ನಲ್ಲಿರುವ ಕಬ್ಬಿಣಾಂಶವು ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ. ಹೀಗಾಗಿ ನೀವು ನಿಯಮಿತವಾಗಿ ಪಾಲಕ್‌ ಸೊಪ್ಪು ಸೇವಿಸಬೇಕು.

3 /5

ಆಂಟಿ ಆಕ್ಸಿಡೆಂಟ್‌ಗಳಲ್ಲಿ ‌ಸಮೃದ್ಧವಾಗಿರುವ ಬೀಟ್ರೂಟ್ ವಿಶೇಷವಾಗಿ ವಿಟಮಿನ್ ʼCʼ ಹೊಂದಿದೆ. ಇದು ಕಾಲಜನ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ಕೂದಲಿನ ಶಕ್ತಿ ಮತ್ತು ಕಪ್ಪು ಬಣ್ಣಕ್ಕೆ ಕಾಲಜನ್ ಅತ್ಯಗತ್ಯ. ಇದು ಬಿಳಿ ಕೂದಲು ಆಗುವುದನ್ನು ತಡೆಯುತ್ತದೆ. ಸದೃಢ ಕೂದಲಿಗೆ ನೀವು ನಿಯಮಿತವಾಗಿ ಬೀಟ್ರೂಟ್‌ ಜ್ಯೂಸ್‌ ಸೇವಿಸಬೇಕು. 

4 /5

ಕ್ಯಾರೆಟ್‌ನಲ್ಲಿ ಬೀಟಾ-ಕ್ಯಾರೋಟಿನ್ ಸಮೃದ್ಧವಾಗಿದ್ದು, ಇದು ದೇಹದಲ್ಲಿ ವಿಟಮಿನ್ ʼAʼ ಆಗಿ ಪರಿವರ್ತನೆಗೊಳ್ಳುತ್ತದೆ. ವಿಟಮಿನ್ ʼAʼ ಚರ್ಮದಲ್ಲಿ ಎಣ್ಣೆ ಉತ್ಪಾದನೆಗೆ ಮುಖ್ಯವಾಗಿದೆ. ಇದು ನೆತ್ತಿಯ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ಶುಷ್ಕತೆಯನ್ನು ತಡೆಯುತ್ತದೆ. ಇದು ಅಕಾಲಿಕ ಬಳಿ ಬಣ್ಣವನ್ನು ತಡೆಯಲು ಸಹಕಾರಿಯಾಗಿದೆ.   

5 /5

ನಿಂಬೆ‌ ಹಣ್ಣು ವಿಟಮಿನ್ ʼCʼಯಿಂದ ಸಮೃದ್ಧವಾಗಿದೆ. ನಿಂಬೆ ಕಾಲಜನ್ ಉತ್ಪಾದನೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಕಬ್ಬಿಣಾಂಶ ಹೀರಿಕೊಳ್ಳುವಿಕೆಯನ್ನು ಸುಧಾರಿಸುತ್ತದೆ. ನಿಯಮಿತವಾಗಿ ನಿಂಬೆ ಹಣ್ಣಿನ ಜ್ಯೂಸ್‌ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯುತ್ತೀರಿ. ಅದೇ ರೀತಿ ಕೂದಲ ಆರೋಗ್ಯಕ್ಕೂ ಇದು ತುಂಬಾ ಸಹಕಾರಿಯಾಗಿದೆ.