ಶೀಘ್ರದಲ್ಲೇ ಮಂಗಳನ ಅಂಗಳದಲ್ಲಿ ಗುರು-ಚಂದ್ರರ ಮೈತ್ರಿ, ಶ್ರೀಹರಿ ಲಕ್ಷ್ಮಿ ಕೃಪೆಯಿಂದ ಈ ಜನ ತಿಜೋರಿ ಹಣದಿಂದ ತುಂಬಿ ತುಳುಕಲಿದೆ!

Guru - Chandra Yuti In Aries: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಬರುವ ಅಕ್ಟೋಬರ್ 28 ರಂದು ಮಂಗಳನ ಮನೆಯಾಗಿರುವ ಮೇಷ ರಾಶಿಯಲ್ಲಿ ದೇವಗುರು ಬೃಹಸ್ಪತಿ ಹಾಗೂ ಚಂದ್ರರ ಮೈತ್ರಿ ನೆರವೇರಲಿದೆ. ಇದರಿಂದ ಗಜಕೇಸರಿ ರಾಜಯೋಗ ನಿರ್ಮಾಣಗೊಳ್ಳಲಿದ್ದು, ಇದು 3 ರಾಶಿಗಳ ಜನರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಅಪಾರ ಯಶಸ್ಸು ತಂದು ಕೊಡಲಿದೆ. (Spiritual News In Kannada)
 

ಬೆಂಗಳೂರು: ಗ್ರಹಗಳು ಒಂದು ನಿಶ್ಚಿತ ಕಾಲಾಂತರದಲ್ಲಿ ತಮ್ಮ ತಮ್ಮ ರಾಶಿಗಳನ್ನು ಪರಿವರ್ತಿಸಿ ಇತರ ಗ್ರಹಗಳ ಜೊತೆಗೆ ಮೈತ್ರಿಯನ್ನು ಮಾಡಿಕೊಳ್ಳುತ್ತವೆ ಮತ್ತು ಈ ಮೈತ್ರಿ ಕೆಲವರ ಪಾಲಿಗೆ ಶುಭ ಸಾಬೀತಾದರೇ, ಕೆಲವರ ಪಾಲಿಗೆ ಅಶುಭ ಸಾಬೀತಾಗುತ್ತವೆ. ಪ್ರಸ್ತುತ ಅಕ್ಟೋಬರ್ 28 ರಂದು  ಚಂದ್ರನ ಮೇಷ ರಾಶಿ ಪ್ರವೇಶ ನೆರವೇರಲಿದೆ. ಆದರೆ, ಈಗಾಗಲೇ ಮೇಷ ರಾಶಿಯಲ್ಲಿ ದೇವಗುರು ಬೃಹಸ್ಪತಿಯ ಸಂಚಾರ ಇರುವ ಕಾರಣ ಅಲ್ಲಿ ಗುರುವಿನ ಜೊತೆಗೆ ಚಂದ್ರನ ಮೈತ್ರಿ ನೆರವೇರಲಿದೆ. ಈ ಮೈತ್ರಿಯ ಕಾರಣ ಅಲ್ಲಿ ಗಜಕೇಸರಿ ರಾಜಯೋಗ ನಿರ್ಮಾಣಗೊಳ್ಳಲಿದ್ದು, ಈ ರಾಜಯೋಗ ಮೂರು ರಾಶಿಗಳ ಜನರ ಜಾತಕದವರಿಗೆ ಆಕಸ್ಮಿಕ ಧನಲಾಭ ಯೋಗದ ಜೊತೆಗೆ ಭಾಗ್ಯೋದಯ ಯೋಗ ಕೂಡ ದಯಪಾಲಿಸಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ, (Spiritual News In Kannada)

 

ಇದನ್ನೂ ಓದಿ-ಒಂದು ವರ್ಷದ ಬಳಿಕ ಶುಕ್ರನಿಂದ ನೀಚ್ ಭಂಗ್ ರಾಜಯೋಗ ರಚನೆ, ಶುಕ್ರದೆಸೆಯಿಂದ ಈ ಜನರ ಮೇಲೆ ಭಾರಿ ಕನಕವೃಷ್ಟಿ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

Guru - Chandra Yuti In Aries: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಬರುವ ಅಕ್ಟೋಬರ್ 28 ರಂದು ಮಂಗಳನ ಮನೆಯಾಗಿರುವ ಮೇಷ ರಾಶಿಯಲ್ಲಿ ದೇವಗುರು ಬೃಹಸ್ಪತಿ ಹಾಗೂ ಚಂದ್ರರ ಮೈತ್ರಿ ನೆರವೇರಲಿದೆ. ಇದರಿಂದ ಗಜಕೇಸರಿ ರಾಜಯೋಗ ನಿರ್ಮಾಣಗೊಳ್ಳಲಿದ್ದು, ಇದು 3 ರಾಶಿಗಳ ಜನರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಅಪಾರ ಯಶಸ್ಸು ತಂದು ಕೊಡಲಿದೆ. (Spiritual News In Kannada)

2 /5

ಮೇಷ ರಾಶಿ: ಈ ಯೋಗ ನಿಮ್ಮ ಗೋಚರ ಜಾತಕದ ಲಗ್ನ ಭಾವದಲ್ಲಿ ಏರ್ಪಡಲಿದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಕೆಲಸ ಕಾರ್ಯಗಳು ಭಾರಿ ಹೊಳಪನ್ನು ಪಡೆದುಕೊಳ್ಳಲಿವೆ. ನಿಮ್ಮ ವೈವಾಹಿಕ ಜೀವನ ಕೂಡ ಉತ್ತಮವಾಗಿರಲಿದೆ. ಧನಲಾಭ ಯೋಗ ಕೂಡ ನಿರ್ಮಾಣಗೊಳ್ಳುತ್ತಿದೆ. ಮಕ್ಕಳ ಕಡೆಯಿಂದ ಒಳ್ಳೆಯ ಸಮಾಚಾರ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ನಿಮ್ಮ ಎಲ್ಲಾ ಯೋಜನೆಗಳು ಯಶಸ್ವಿಯಾಗಲಿವೆ. ಹೊಸ ಹೂಡಿಕೆಯಿಂದ ನಿಮಗೆ ಅಪಾರ ಲಾಭ ಹರಿದುಬರಲಿದೆ. ಪಾರ್ಟ್ನರ್ ಶಿಪ್ ಕೆಲಸದಲ್ಲಿ ನಿಮಗೆ ಲಾಭ ಸಿಗಲಿದೆ. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ಯಾಸದಲ್ಲಿ ವೃದ್ಧಿಯನ್ನು ನೀವು ಕಾಣುವಿರಿ. 

3 /5

ಮಿಥುನ ರಾಶಿ: ಗುರು-ಚಂದ್ರರ ಮೈತ್ರಿಯಿಂದ ನಿಮ್ಮ ಗೋಚರ ಜಾತಕದ ಆದಾಯ ಮತ್ತು ಲಾಭದ ಸ್ಥಾನದಲ್ಲಿ ಗಜಕೇಸರಿ ರಾಜಯೋಗ ರಚನೆಯಾಗುತಿದ್ದು, ಇದು ನಿಮ್ಮ ಆದಾಯವನ್ನು ಸಾಕಷ್ಟು ಪಟ್ಟು ಹೆಚ್ಚಿಸಲಿದೆ. ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಜಬರ್ದಸ್ತ್ ಹೆಚ್ಚಳವನ್ನು ನೀವು ನೋಡಬಹುದು ಮತ್ತು ನಿಮ್ಮ ಪಾಲಿಗೆ ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ. ವ್ಯಾಪಾರಿಗಳಿಗೆ ಉತ್ತಮ ಲಾಭ ಉಂಟಾಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಧನಲಾಭದ ಯೋಗಗಳು ನಿರ್ಮಾಣಗೊಳ್ಳುತ್ತಿವೆ. ಹೊಸ ನೌಕರಿ ಸಿಗುವ ಸಾಧ್ಯತೆ ಇದೆ. ಮಕ್ಕಳ ಉನ್ನತಿಯ ಎಲ್ಲಾ ಸಂಕೇತಗಳಿವೆ. ಹಳೆ ಹೂಡಿಕೆಗಳಿಂದ ನಿಮಗೆ ಲಾಭ ಸಿಗಲಿದೆ. ಇಂಪೋರ್ಟ್-ಎಕ್ಸ್ಪೋರ್ಟ್ ವ್ಯವಹಾರದಲ್ಲಿರುವವರಿಗೆ ಉತ್ತಮ ಲಾಭ ಸಿಗಲಿದೆ. 

4 /5

ಕರ್ಕ ರಾಶಿ: ಗುರು-ಚಂದ್ರರ ಮೈತ್ರಿಯ ಕಾರಣ ನಿಮ್ಮ ಗೋಚರ ಜಾತಕದ ದಶಮ ಭಾವದಲ್ಲಿ ಗಜಕೇಸರಿ ರಾಜಯೋಗ ನಿರ್ಮಾಣಗೊಳ್ಳುತ್ತಿದೆ. ಇದರಿಂದ ನಿಮ್ಮ ವೃತ್ತಿ-ವ್ಯಾಪಾರದಲ್ಲಿ ಅಪಾರ ಉನ್ನತಿ ಪ್ರಾಪ್ತಿಯಾಗಲಿದೆ. ಇದರ ಜೊತೆಗೆ ನಿಮ್ಮ ಭಾಗ್ಯದಲ್ಲಿಯೂ ಕೂಡ ಹೊಸ ಹೊಳಪು ಕಾಣಲು ನಿಮಗೆ ಸಿಗಲಿದೆ. ಧನ-ಸಂಪತ್ತಿನ ಕೊರತೆ ನಿವಾರಣೆಯಾಗಲಿದೆ. ನೌಕರಿಯಲ್ಲಿ ಹೊಸ ಪ್ರಸ್ತಾಪಗಳು ಸಿಗುವ ಸಾಧ್ಯತೆಗಳಿವೆ. ಘನತೆ-ಗೌರವ-ಪ್ರತಿಷ್ಠೆ ಹೆಚ್ಚಾಗುವುದರ ಜೊತೆಗೆ ಮನಸ್ಸು ಪ್ರಸನ್ನಚಿತ್ತದಿಂದ ಕೂಡಿರಲಿದೆ. ಮನೆಯಲ್ಲಿ ಮಂಗಳ ಅಥವಾ ಧಾರ್ಮಿಕ ಕಾರ್ಯ ನೆರವೇರಲಿದೆ.  

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)