ಈಗ ಈ ಎಲ್ಲಾ ಕೆಲಸಗಳನ್ನು ಇಂಟರ್ನೆಟ್ ಸಂಪರ್ಕವಿಲ್ಲದೆ ಮಾಡಲಾಗುತ್ತದೆ. ಇದಕ್ಕಾಗಿ GOOGLE WiFiNanScan ಎಂಬ ಹೊಸ ಅಪ್ಲಿಕೇಶನ್ ಅನ್ನು ಲಾಂಚ್ ಮಾಡಿದೆ.
ನವದೆಹಲಿ : ಸರ್ಚ್ ಎಂಜಿನ್ ಕಂಪನಿ ಗೂಗಲ್ (Google) ಇತ್ತೀಚೆಗೆ ಹೊಸ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ಇದು ಇಂಟರ್ನೆಟ್ ಸಂಪರ್ಕವಿಲ್ಲದಿದ್ದರೂ (Internet Connection) ಸಹ ಡಿವೈಸ್ ಗಳನ್ನು ಸಂಪರ್ಕಿಸಲು ಸಹಾಯ ಮಾಡುತ್ತದೆ. ಅಂದರೆ, ಫೋನ್‌ನಲ್ಲಿ ನೆಟ್‌ವರ್ಕ್ ಇಲ್ಲದಿದ್ದರೂ, ವೈಫೈಗೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ಈ ಅಪ್ಲಿಕೇಶನ್‌ನ ಸಹಾಯದಿಂದ ಮಾಡಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
Wifi Aware ಪ್ರೋಟೋಕಾಲ್ ಬಳಸಿ ಇಂಟರ್ನೆಟ್ ಸಂಪರ್ಕವಿಲ್ಲದೆ ಯಾವುದೇ ರೆಸ್ಟೋರೆಂಟ್‌ನಲ್ಲಿ ಸೀಟ್ ಬುಕಿಂಗ್ ಮತ್ತು ಚಲನಚಿತ್ರ ಟಿಕೆಟ್‌ಗಳನ್ನು ಕಾಯ್ದಿರಿಸಬಹುದು ಎಂದು ಗೂಗಲ್ ಹೇಳಿದೆ. ದೊಡ್ಡ ಪ್ರಮಾಣದ ಡೇಟಾವನ್ನು ಶೇರ್ ಮಾಡಿಕೊಳ್ಳಲು ಕೂಡಾ ಈ ಅಪ್ಲಿಕೇಶನ್ ಅನ್ನು ಬಳಸಬಹುದು.
ಗೂಗಲ್ ಈ ಅಪ್ಲಿಕೇಶನ್ ಅನ್ನು WifiNanScan ಅನ್ನೋ ಹೆಸರಿನಲ್ಲಿ ಪ್ಲೇ ಸ್ಟೋರ್ ನಲ್ಲಿ ಲಾಂಚ್ ಮಾಡಿದೆ. ಇದನ್ನು ಡೆವಲಪರ್‌ಗಳು, ವೆಂಡರ್ಸ್ ಮತ್ತು ವಿಶ್ವವಿದ್ಯಾಲಯಗಳಿಗೆ ಸಂಶೋಧನೆ, ಡೆಮೋನ್ ಸ್ಟ್ರೆ ಶನ್ ಮತ್ತು ಟೆಸ್ಟಿಂಗ್ ಟೂಲ್ ತರಹ ಬಳಸಲು ಸಹಕಾರಿಯಾಗುವತೆ ವಿನ್ಯಾಸಗೊಳಿಸಲಾಗಿದೆ.
ಈ ಅಪ್ಲಿಕೇಶನ್‌ನೊಂದಿಗೆ ಎರಡು ಸ್ಮಾರ್ಟ್‌ಫೋನ್‌ಗಳ ನಡುವಿನ ನಿಖರವಾದ ಅಂತರವನ್ನು ಸಹ ಅಳೆಯಬಹುದು. ಎರಡೂ ಫೋನ್‌ಗಳು 1 ರಿಂದ 15 ಮೀಟರ್ ವ್ಯಾಪ್ತಿಯಲ್ಲಿರುವಾಗ ಮಾತ್ರ ಇದು ಸಾಧ್ಯ. ಇದು ಮಾತ್ರವಲ್ಲ, ಈ ಅಪ್ಲಿಕೇಶನ್‌ನ ಸಹಾಯದಿಂದ, ನೆಟ್ವರ್ಕ್ ಇಲ್ಲದೆ ಡಾಕ್ಯುಮೆಂಟ್‌ಗಳನ್ನು ಪ್ರಿಂಟರ್‌ಗೆ ಕಳುಹಿಸಬಹುದು.
ಈ ಅಪ್ಲಿಕೇಶನ್ ಆಂಡ್ರಾಯ್ಡ್ 8.0 ಮತ್ತು ಅದಕ್ಕಿಂತ ಹೆಚ್ಚಿನ OS ಆವೃತ್ತಿಯ ಎಲ್ಲಾ ಡಿವೈಸ್ ನಲ್ಲಿ ಕಾರ್ಯನಿರ್ವಹಿಸುತ್ತದೆ. ಮ ಯಾವುದೇ ರೀತಿಯ ಸಂಪರ್ಕವಿಲ್ಲದಿದ್ದರು ಸರ್ಚ್ ಮಾಡಲು ಮತ್ತು ನೇರ ಸಂಪರ್ಕ ಕಲ್ಪಿಸಲು ಅವಕಾಶ ನೀಡುತ್ತದೆ.
ಗೂಗಲ್‌ನ ಪ್ರಕಾರ, ಈ ಅಪ್ಲಿಕೇಶನ್ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಈ ಅಪ್ಲಿಕೇಶನ್‌ನ ಸಹಾಯದಿಂದ, ಬಳಕೆದಾರರು ಬ್ಲೂಟೂತ್ ಮತ್ತು ವೈಫೈ ಸಂಪರ್ಕವಿಲ್ಲದೆ ಸಂದೇಶಗಳು ಮತ್ತು ಡೇಟಾವನ್ನು ಶೇರ್ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ.