Garuda Purana: ಈ ಜನರು ತಮ್ಮ ಜೀವನದಲ್ಲಿ ಎಂದಿಗೂ ದುಃಖಿತರಾಗುವುದಿಲ್ಲ, ಇವರ ಮೇಲೆ ಯಾವಾಗಲು ಲಕ್ಷ್ಮಿಯ ಕೃಪೆ ಇರುತ್ತದೆ

Garuda Purana Niti - ಸನಾತನ ಧರ್ಮದಲ್ಲಿ ಗರುಡ ಪುರಾಣಕ್ಕೆ ವಿಶೇಷ ಮಹತ್ವವಿದೆ (Garuda Purana Knowledge). ಗರುಡ ಪುರಾಣವನ್ನು ಸಾಮಾನ್ಯವಾಗಿ ಒಬ್ಬರ ಮರಣದ ನಂತರ ಅನುಸರಿಸಲಾಗುತ್ತದೆ. ಈ ಪುರಾಣದಲ್ಲಿ ಮರಣ ಮತ್ತು ಅದರ ನಂತರ ಮುಂದಿನ ಜನ್ಮದ ಬಗ್ಗೆ ಹೇಳಲಾಗಿದೆ.

Garuda Purana Niti - ಸನಾತನ ಧರ್ಮದಲ್ಲಿ ಗರುಡ ಪುರಾಣಕ್ಕೆ ವಿಶೇಷ ಮಹತ್ವವಿದೆ (Garuda Purana Knowledge). ಗರುಡ ಪುರಾಣವನ್ನು ಸಾಮಾನ್ಯವಾಗಿ ಒಬ್ಬರ ಮರಣದ ನಂತರ ಅನುಸರಿಸಲಾಗುತ್ತದೆ. ಈ ಪುರಾಣದಲ್ಲಿ ಮರಣ ಮತ್ತು ಅದರ ನಂತರ ಮುಂದಿನ ಜನ್ಮದ ಬಗ್ಗೆ ಹೇಳಲಾಗಿದೆ. ಇದಲ್ಲದೇ ಜೀವನದ ಹಲವು ನಿಗೂಢ ಸಂಗತಿಗಳನ್ನೂ ಸಹ ಇದರಲ್ಲಿ ಉಲ್ಲೇಖಿಸಲಾಗಿದೆ. ಅದರ ಪ್ರಕಾರ ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು (Garuda Purana For Money) ತರುವ 5 ಅಂತಹ ಕೆಲಸಗಳ ಕುರಿತು ಕೂಡ ಇದರಲ್ಲಿ ಉಲ್ಲೇಖಿಸಲಾಗಿದೆ. ಈ ಕರ್ಮಗಳನ್ನು ಅನುಸರಿಸುವ ಮೂಲಕ ಜೀವನದಲ್ಲಿ ಸುಖದಿಂದ ಇರಬಹುದು. ಆ ಐದು ಕರ್ಮಗಳು ಯಾವುವು ತಿಳಿಯೋಣ ಬನ್ನಿ.


ಇದನ್ನೂ ಓದಿ-Alum Vastu Tips: ಪಟಕಕ್ಕೆ ಸಂಬಂಧಿಸಿದ ಈ ಉಪಾಯಗಳನ್ನು ಅನುಸರಿಸಿ, ಜೀವನದಲ್ಲಿನ ಕಷ್ಟಗಳಿಗೆ ಮುಕ್ತಿ ಹೇಳಿ

 

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆಯಿರಿ. ಝೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

 

ಇದನ್ನೂ ಓದಿ-Spiritual Meditation: ಆಧ್ಯಾತ್ಮಿಕ ಧ್ಯಾನ ಎಂದರೇನು? ಅದರ ಪ್ರಯೋಜನ ಮತ್ತು ಅಭ್ಯಾಸದ ಬಗೆ ಹೇಗೆ ಗೊತ್ತೇ?

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ಅನ್ನದಾನ - ದಾನದ ವಿಶೇಷ ಮಹತ್ವವನ್ನು ಶಾಸ್ತ್ರಗಳಲ್ಲಿ ಹೇಳಲಾಗಿದೆ. ನಿರ್ಗತಿಕರಿಗೆ ಅನ್ನ ನೀಡುವುದರಿಂದ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ, ಅಗತ್ಯವಿರುವವರಿಗೆ ದಾನ ಮಾಡಿ.

2 /5

2. ಪ್ರತಿನಿತ್ಯ ಮನೆಯಲ್ಲಿ ದೇವರಿಗೆ ನೈವೇದ್ಯ ಅರ್ಪಿಸಿ - ಗರುಡ ಪುರಾಣದ ಪ್ರಕಾರ, ಭೋಜನದ ಮೊದಲು ದೇವರಿಗೆ ಆಹಾರವನ್ನು ಅರ್ಪಿಸುವ ಮನೆಯಲ್ಲಿ ಆಹಾರ ಮತ್ತು ಹಣದ (Godess Lakshmi ) ಕೊರತೆ ಎಂದಿಗೂ ಇರುವುದಿಲ್ಲ. ಹೀಗೆ ಮಾಡಿ ತಾಯಿ ಅನ್ನಪೂರ್ಣೆಯ ಆಶೀರ್ವಾದವನ್ನು ಪಡೆಯಲು, ಪ್ರತಿದಿನ ಭೋಗ್ ವನ್ನು ಅರ್ಪಿಸಿ.

3 /5

3. ಗ್ರಂಥಗಳ ಪಠಣ - ಗರುಡ ಪುರಾಣದ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯು ತನ್ನ ಗ್ರಂಥದಲ್ಲಿ ಅಡಗಿರುವ ಜ್ಞಾನ ಪಡೆಯಲು ಅವುಗಳ ಪಠಣ ಮಾಡಬೇಕು. ಹೀಗಾಗಿ ಆದಷ್ಟು ಹೆಚ್ಚು ಧಾರ್ಮಿಕ ಗ್ರಂಥಗಳನ್ನು ಪಠಿಸಬೇಕು.

4 /5

4 ದೇವರ ಭಜನೆ ನಡೆಸಬೇಕು -ಗರುಡ ಪುರಾಣದ ಪ್ರಕಾರ, ತಪಸ್ಸು, ಧ್ಯಾನ, ಭಜನೆ  ಇತ್ಯಾದಿಗಳನ್ನು ಮಾಡುವುದರಿಂದ ಮನಸ್ಸು ಶಾಂತವಾಗಿರುತ್ತದೆ. ಇದರಿಂದ ಕೋಪವನ್ನು  ನಿಯಂತ್ರಿಸಬಹುದು. ಹೀಗಾಗಿ ಪ್ರತಿಯೊಬ್ಬರೂ ಧ್ಯಾನವನ್ನು ಮಾಡಲೇಬೇಕು.

5 /5

5. ಕುಲದೇವರು ಅಥವಾ ಕುಲದೆವತೆಯ ಪೂಜೆ - ಗರುಡ ಪುರಾಣದ ಪ್ರಕಾರ, ಕುಲದೇವಿ ಅಥವಾ ಕುಲದೇವರ ಆರಾಧನೆಯು ಅತ್ಯುತ್ತಮವಾಗಿದೆ. ಅವರ ಪೂಜೆಯಿಂದ ಏಳು ನಮ್ಮ ತಲೆಮಾರುಗಳು  ಸುಖ ಸಂತೋಷದಿಂದ ಬಾಳುತ್ತವೆ.