Ganesh Mantra: ಅಪಾರ ಸುಖ-ಸಮೃದ್ಧಿಗಾಗಿ ಶ್ರೀಗಣೇಶನ ಈ ಅದ್ಭುತ ಮಂತ್ರ ಪಠಿಸಿ

Ganesh Mantra: ಗಣೇಶ ಚತುರ್ಥಿ ಹಬ್ಬವನ್ನು ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ನಾಳೆ ಅಂದರೆ ಬುಧವಾರ ಗಣೇಶ ಪ್ರತಿಷ್ಠಾಪನೆಯಾಗಿ ಒಂದು ವಾರ ಪೂರ್ಣಗೊಂಡಿದೆ. ಸೆಪ್ಟೆಂಬರ್ 9ರಂದು ಅನಂತ ಚತುರ್ದಶಿಯ ದಿನ ಗಣೇಶ ವಿಸರ್ಜನೆ ನೆರವೇರಲಿದೆ. 

Ganesh Mantra: ಗಣೇಶ ಚತುರ್ಥಿ ಹಬ್ಬವನ್ನು ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ನಾಳೆ ಅಂದರೆ ಬುಧವಾರ ಗಣೇಶ ಪ್ರತಿಷ್ಠಾಪನೆಯಾಗಿ ಒಂದು ವಾರ ಪೂರ್ಣಗೊಂಡಿದೆ. ಸೆಪ್ಟೆಂಬರ್ 9ರಂದು ಅನಂತ ಚತುರ್ದಶಿಯ ದಿನ ಗಣೇಶ ವಿಸರ್ಜನೆ ನೆರವೇರಲಿದೆ. ಈ ವರ್ಷ ಶ್ರೀಗಣೇಶನಿಗೆ ಸಮರ್ಪಿತವಾಗಿರುವ ಬುಧವಾರದಿಂದ ಗಣೇಶ ಚತುರ್ಥಿ ಹಬ್ಬ ಆರಂಭಗೊಂಡಿದೆ. ನಾಳೆಯೂ ಕೂಡ ಬುಧವಾರವಿದೆ ಹಾಗೂ ಗಣೇಶ ಪರ್ವ ಮುಕ್ತಾಯಗೊಳ್ಳಲು 3 ದಿನ ಬಾಕಿ ಉಳಿದಿವೆ. ಈ ಅವಧಿಯಲ್ಲಿ ಕೆಲ ವಿಶೇಷ ಗಣೇಶನ ಮಂತ್ರಗಳನ್ನು ಜಪಿಸಿದರೆ, ವಿಘ್ನವಿನಾಶಕ ಗಣೇಶ ಎಲ್ಲಾ ಸಂಕಷ್ಟಗಳನ್ನು ದೂರಗೊಳಿಸಿ, ಜೀವನವನ್ನು ಸುಖ-ಸಮೃದ್ಧಿಯಿಂದ ತುಂಬುತ್ತಾನೆ. ಹಾಗಾದರೆ, ಬನ್ನಿ ಗಣೇಶನ ಕೆಲ ಅದ್ಭುತ ಮಂತ್ರಗಳನ್ನು ತಿಳಿದುಕೊಳ್ಳೋಣ ಬನ್ನಿ,

 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

 

ಇದನ್ನೂ ಓದಿ-Shukra Asta 2022: ಸಿಂಹ ರಾಶಿಯಲ್ಲಿ ಶುಕ್ರ ಅಸ್ತನಗಲಿದ್ದಾನೆ, 4 ರಾಶಿಗಳ ಜನರು ಜಾಗ್ರತೆವಹಿಸಿ

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ಈ ಪ್ರಭಾವಶಾಲಿ ಮಂತ್ರಗಳನ್ನು ಪಠಿಸುವುದರಿಂದ ಹಾಗೂ ಮೋದಕ-ಕರಿಕೆ ಅರ್ಪಿಸುವುದರಿಂದ ಶ್ರೀ ಗಣೇಶ ಬೇಗನೆ ಪ್ರಸನ್ನನಾಗುತ್ತಾನೆ. ಗಣೇಶ ಕೃಪೆ ತೋರಿದರೆ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ ಮತ್ತು ಜೀವನ ಸುಖ ಸಮೃದ್ಧಿಯಿಂದ ತುಂಬಿರುತ್ತದೆ.  

2 /5

2. ಗಣೇಶನ 'ಓಂ ಗಂ ಗಣಪತಯೇನಮಃ' ಒಂದು ಅದ್ಭುತ ಮಂತ್ರವಾಗಿದೆ, ಜೀವನ ಸಮಸ್ಯೆಗಳಿಂದ ಕೂಡಿದ್ದರೆ, ನಿತ್ಯ ಸಾಧ್ಯವಾಗದಿದ್ದರು, ಬುಧವಾರಕ್ಕೊಮ್ಮೆಯಾದರು ಈ ಮಂತ್ರವನ್ನು ಜಪಿಸಿ. ಇದರಿಂದ ಜೀವನದಲ್ಲಿ ಎದುರಾಗುವ ಎಲ್ಲಾ ಅಡೆತಡೆಗಳು ನಿವಾರಣೆಯಾಗುತ್ತವೆ ಮತ್ತು ಶೀಘ್ರದಲ್ಲಿಯೇ ಇದರ ಪರಿಣಾಮ ಗೋಚರಿಸಲಾರಂಭಿಸುತ್ತದೆ.  

3 /5

3. ಗಣೇಶನ 'ಗಣಪೂಜ್ಯೋ ವಕ್ರತುಂಡ ಏಕದಂಷ್ಟ್ರೀ ತ್ರಯಂಬಕ:. ನೀಲಗ್ರೀವೋ ಲಂಬೋದರೋ ವಿಕ್ಟೋ ವಿಘ್ರರಾಜಕ:.. ಧೂಮ್ರವರ್ಣೋ ಭಾಲಚಂದ್ರೋ ದಶಮಸ್ತು ವಿನಾಯಕ:. ಗಣಪರ್ತಿಹಸ್ತಿಮುಕೋ ದ್ವಾದಶರೇ ಯಜೇದ್ಗಣಮ್.' ಮಂತ್ರವು ಕೂಡ ತುಂಬಾ ಪರಿಣಾಮಕಾರಿ ಮಂತ್ರವಾಗಿದೆ. ಇದು ಜಾತಕದ ಗ್ರಹ ದೋಷಗಳನ್ನು ನಿವಾರಿಸುತ್ತದೆ ಮತ್ತು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಶುಭ ಫಲಿತಾಂಶಗಳನ್ನು ನೀಡುತ್ತದೆ. ಪ್ರತಿ ಬುಧವಾರ ಕನಿಷ್ಠ 21 ಬಾರಿ ಜಪಿಸಿ. ಗಣೇಶ ದೇವಸ್ಥಾನದಲ್ಲಿ ಕುಳಿತು ಜಪ ಮಾಡುವುದು ಉತ್ತಮ.  

4 /5

4. 'ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ. ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ' ಮಂತ್ರವು ಕೂಡ ತುಂಬಾ ಪ್ರಭಾವಶಾಲಿ ಮಂತ್ರವಾಗಿದೆ. ಯಾವುದೇ ಶುಭ ಕಾರ್ಯ ಆರಂಭಕ್ಕೂ ಮುನ್ನ ಈ ಮಂತ್ರವನ್ನು ಪಠಿಸಲಾಗುತ್ತದೆ. ಈ ಮಂತ್ರವನ್ನು ಪಠಿಸುವುದರಿಂದ ಶ್ರೀಗಣೇಶ ಬೇಗನೆ ಪ್ರಸನ್ನನಾಗುತ್ತಾನೆ.  

5 /5

5. ಒಂದು ವೇಳೆ ನೀವು ಮಾಡುತ್ತಿರುವ ಕೆಲಸದಲ್ಲಿ ಪದೇ ಪದೇ ಅಡೆತಡೆಗಳು ಎದುರಾಗುತ್ತಿದ್ದರೆ, 'ತ್ರಯಮಯಯಾಖಿಲ್ಬುದ್ಧಿದಾತ್ರೇ ಬುದ್ಧಿಪ್ರದೀಪಾಯ ಸುರಾಧಿಪಃ, ನಿತ್ಯಾಯ ಸತ್ಯಾಯ ಚ ನಿತ್ಯಬುದ್ಧಿ ನಿತ್ಯಂ ನಿರೀಹಯ ನಮೋಸ್ತು ನಿತ್ಯಮ್' ಮಂತ್ರವನ್ನು ಜಪಿಸಿ. ಇದರಿಂದ ನೆನೆಗುದಿಗೆ ಬಿದ್ದ ಕೆಲಸಗಳು ಕೂಡ ಪೂರ್ಣಗೊಳ್ಳುತ್ತವೆ. ಪ್ರತಿ ಬುಧವಾರ 21 ಬಾರಿ ಈ ಮಂತ್ರವನ್ನು ಪಠಿಸಿ.