White Hair Remedies : ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿರುವವರು ಹೆಚ್ಚಾಗಿ ಹೇರ್ ಡೈಗಳನ್ನು ಬಳಸುತ್ತಾರೆ. ಇಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೆಮಿಕಲ್ ಗಳಿರುವ ಹೇರ್ ಪ್ರಾಡಕ್ಟ್ ಗಳನ್ನು ಹಲವರು ಬಳಸುತ್ತಿದ್ದಾರೆ. ಇದರ ಬಳಕೆಯಿಂದ ಹಲವಾರು ರೀತಿಯ ಕೂದಲು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ತೆಂಗಿನೆಣ್ಣೆ ಮತ್ತು ಸೋಂಪು ಕಾಳಿನ ಮಿಶ್ರಣವು ಇಂತಹ ಸಮಸ್ಯೆಗಳಿಂದ ಸುಲಭವಾಗಿ ಪರಿಹಾರವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಈ ಮಿಶ್ರಣವನ್ನು ತಯಾರಿಸಿ ಕೂದಲಿಗೆ ಹಚ್ಚುವುದರಿಂದ ಹಲವಾರು ರೀತಿಯ ಕೂದಲಿನ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು ಎನ್ನುತ್ತಾರೆ ಆಯುರ್ವೇದ ತಜ್ಞರು.
ಅನೇಕ ಜನರು ವಯಸ್ಸಾದಂತೆ ಬೂದು ಕೂದಲಿನ ಸಮಸ್ಯೆಗಳನ್ನು ಎದುರಿಸುತ್ತಾರೆ. ಆದರೆ ಇಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಉತ್ಪನ್ನಗಳ ಬದಲು ಮನೆಮದ್ದು ಬಳಸಬೇಕು.
ಬಿಳಿ ಕೂದಲಿನ ಸಮಸ್ಯೆ ಇರುವವರು ಸೋಂಪು ಮತ್ತು ತೆಂಗಿನೆಣ್ಣೆ ಮಿಶ್ರಣವನ್ನು ಬಳಸಬೇಕು. ಇದರ ಔಷಧೀಯ ಗುಣಗಳು ಎಲ್ಲಾ ರೀತಿಯ ಕೂದಲಿನ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸುತ್ತದೆ.
ಇದಕ್ಕಾಗಿ ಮೊದಲು ನೀವು ಸೋಂಪು ಕಾಳಿನ ಪುಡಿಯನ್ನು ಮಾಡಬೇಕಾಗುತ್ತದೆ. ಅದರ ನಂತರ ಎಣ್ಣೆಗೆ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಹೀಗೆ ಮಾಡಿದ ನಂತರ ಕೂದಲಿಗೆ ಹಚ್ಚಿ 25 ರಿಂದ 30 ನಿಮಿಷ ಬಿಡಿ. ಬಳಿಕ ತಲೆಸ್ನಾನ ಮಾಡಿ. ಹೀಗೆ ಮಾಡುವುದರಿಂದ ಬಿಳಿ ಕೂದಲು ಸುಲಭವಾಗಿ ಕಪ್ಪಾಗಬಹುದು.