Venus transit april 2023: ಜ್ಯೋತಿಷ್ಯ ಶಾಸ್ತ್ರದ ಇಂದು 11 .10 ಕ್ಕೆ ಶುಕ್ರ ತನ್ನದೇ ರಾಶಿಯಾದ ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರಿಂದ ಮಾಲವ್ಯ ರಾಜಯೋಗ ನಿರ್ಮಾಣವಾಗುತ್ತಿದೆ.
ಬೆಂಗಳೂರು : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅನೇಕ ಬಾರಿ ಗ್ರಹಗಳ ವಿಶೇಷ ಸ್ಥಿತಿಗಳು ಅನೇಕ ಮಂಗಳಕರ ರಾಜಯೋಗಗಳನ್ನು ಸೃಷ್ಟಿಸುತ್ತವೆ. ರಾಜಯೋಗ ಎಂದರೆ ಈ ಅವಧಿಯಲ್ಲಿ ವ್ಯಕ್ತಿ ಶುಭ ಫಲಗಳನ್ನು ಪಡೆಯುತ್ತಾನೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ಯೋಗ ವ್ಯಕ್ತಿಯನ್ನು ಸಿರಿವಂತರನ್ನಾಗಿಸುತ್ತದೆ. ಸಂಪತ್ತು ಮತ್ತು ಸಮೃದ್ಧಿಯನ್ನು ನೀಡುವ ಶುಕ್ರನು ಇನ್ನು ಕೆಲವೇ ಕ್ಷಣಗಳಲ್ಲಿ ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾನೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಜ್ಯೋತಿಷ್ಯ ಶಾಸ್ತ್ರದ ಇಂದು 11 .10 ಕ್ಕೆ ಶುಕ್ರ ತನ್ನದೇ ರಾಶಿಯಾದ ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರಿಂದ ಮಾಲವ್ಯ ರಾಜಯೋಗ ನಿರ್ಮಾಣವಾಗುತ್ತಿದೆ. ಈ ಯೋಗವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಯೋಗದ ಕಾರಣ ಅನೇಕ ರಾಶಿಯವರ ಜೀವನದಲ್ಲಿ ಮಂಗಳಕರ ಫಲಿತಾಂಶಗಳು ಕಂಡು ಬರುತ್ತವೆ. ಮಾಲವ್ಯ ಯೋಗವು ಕೆಲ ರಾಶಿಯವರಿಗೆ ಬಹಳ ಪ್ರಯೋಜನಕಾರಿಯಾಗಲಿದೆ.
ಶುಕ್ರ ಸಂಕ್ರಮಣದಿಂದ ಈ ರಾಶಿಯಲ್ಲಿ ಮಾಲವ್ಯ ರಾಜಯೋಗ ಉಂಟಾಗುತ್ತದೆ. ಈ ರಾಶಿಯ ಲಗ್ನದ ಮನೆಯಲ್ಲಿ ಶುಕ್ರ ಸಂಚಾರ ಆಗಲಿದೆ. ಈ ಸಮಯದಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಯಾವುದೇ ಕೆಲಸವನ್ನು ಆತ್ಮವಿಶ್ವಾಸದಿಂದ ಮಾಡಿ ಮುಗಿಸುವುದು ಸಾಧ್ಯವಾಗುತ್ತದೆ. ಶುಕ್ರನ ಸಂಚಾರವು ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ. ಈ ಸಮಯದಲ್ಲಿ, ವಿತ್ತೀಯ ಲಾಭಕ್ಕಾಗಿ ಅನೇಕ ಅವಕಾಶಗಳಿವೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ಸಮಯವು ನಿಮ್ಮ ರಾಶಿಯವರಿಗೆ ತುಂಬಾ ಒಳ್ಳೆಯದು. ನಿಮ್ಮ ರಾಶಿಯ ಹತ್ತನೇ ಮನೆಯಲ್ಲಿ ಮಾಲವ್ಯ ರಾಜಯೋಗವು ರೂಪುಗೊಳ್ಳುತ್ತಿದೆ. ಕೆಲಸ ಹುಡುಕುತ್ತಿರುವ ಜನರು ಈ ಅವಧಿಯಲ್ಲಿ ಕೆಲಸ ಪಡೆಯಬಹುದು. ವ್ಯಾಪಾರಸ್ಥರು ಹೆಚ್ಚಿನ ಲಾಭವನ್ನು ಗಳಿಸುವರು. ಕೆಲಸ ಮಾಡುವವರಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ. ಸಂಬಳದಲ್ಲಿ ಹೆಚ್ಚಳವಾಗಲಿದೆ. ಆಸ್ತಿ ಅಥವಾ ವಾಹನವನ್ನು ಖರೀದಿಸುವ ಯೋಗವಿದೆ. ಹೊಸ ಕೆಲಸವನ್ನು ಪ್ರಾರಂಭಿಸಲು ಈ ಸಮಯ ಅನುಕೂಲಕರವಾಗಿದೆ.
ಮಾಲವ್ಯ ರಾಜಯೋಗವು ಕುಂಭ ರಾಶಿಯ ನಾಲ್ಕನೇ ಮನೆಯಲ್ಲಿ ರೂಪುಗೊಳ್ಳುತ್ತಿದೆ. ಇದು ಸೌಕರ್ಯಗಳು ಮತ್ತು ವಾಹನಗಳ ಅಂಶ. ವಾಹನ ಖರೀದಿಗೆ ಇದು ಶುಭ ಸಮಯ. ಮನೆ, ಫ್ಲಾಟ್, ಪೀಠೋಪಕರಣ ಇತ್ಯಾದಿಗಳನ್ನು ಖರೀದಿಸುವ ಎಲ್ಲಾ ಸಾಧ್ಯತೆಗಳೂ ಇವೆ. ಕುಟುಂಬದಲ್ಲಿ ಶಾಂತಿಯ ವಾತಾವರಣ ಇರುತ್ತದೆ. ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)