IPL Mega Auction 2022: ಈ ಬಾರಿ ದುಬಾರಿ ಮೊತ್ತಕ್ಕೆ ಹರಾಜಾದ ಆಟಗಾರರಿವರು

IPL Mega Auction 2022: IPL 2022 ಮೆಗಾ ಹರಾಜಿನಲ್ಲಿ ನಾವು ಟಾಪ್ 10 ದುಬಾರಿ ಆಟಗಾರರನ್ನು ನೋಡೋಣ.

IPL Mega Auction 2022: ಎರಡು ದಿನಗಳ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2022 ರ ಮೆಗಾ ಹರಾಜು ಬೆಂಗಳೂರಿನಲ್ಲಿ ಭಾನುವಾರ (ಫೆಬ್ರವರಿ 13) ಕೊನೆಗೊಂಡಿತು. 204 ಆಟಗಾರರನ್ನು ಖರೀದಿಸಲು 10 ತಂಡಗಳು 551 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದು, ಅವರಲ್ಲಿ 67 ವಿದೇಶಿಯರನ್ನು ಖರೀದಿಸಲಾಗಿದೆ. ಇಶಾನ್ ಕಿಶನ್ (Ishan Kishan) ಅವರನ್ನು 15.25 ಕೋಟಿ ರೂಪಾಯಿಗೆ ಮುಂಬೈ ಇಂಡಿಯನ್ಸ್‌ ಖರೀದಿಸಿದೆ. IPL 2022 ಮೆಗಾ ಹರಾಜಿನಲ್ಲಿ ನಾವು ಟಾಪ್ 10 ದುಬಾರಿ ಆಟಗಾರರನ್ನು ನೋಡೋಣ.

1 /10

ಟೀಂ ಇಂಡಿಯಾ ವೇಗಿ ಪ್ರಸಿದ್ಧ್ ಕೃಷ್ಣ 10 ಕೋಟಿ ರೂ.ಗೆ ರಾಜಸ್ಥಾನ್ ರಾಯಲ್ಸ್ ಪಾಲಾದರು. ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕೃಷ್ಣ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. (ಫೋಟೋ: ANI)

2 /10

IPL 2022 ಹರಾಜಿನಲ್ಲಿ ನ್ಯೂಜಿಲೆಂಡ್ ವೇಗಿ ಲಾಕಿ ಫರ್ಗುಸನ್ ಗುಜರಾತ್ ಟೈಟಾನ್ಸ್‌ಗೆ ಮಾರಾಟವಾಗಿದ್ದಾರೆ. ಲಾಕಿ ಫರ್ಗುಸನ್ ಅವರನ್ನು ರೂ.10 ಕೋಟಿಗೆ ಖರೀದಿಸಲಾಯಿತು. (ಫೋಟೋ: BCCI/IPL)

3 /10

ವೆಸ್ಟ್ ಇಂಡೀಸ್ ODI ನಾಯಕ ನಿಕೋಲಸ್ ಪೂರನ್ ಸನ್‌ರೈಸರ್ಸ್ ಹೈದರಾಬಾದ್‌ ತಂಡ ಸೇರಿದ್ದಾರೆ. ನಿಕೋಲಸ್ ಪೂರನ್ ಅವರನ್ನು 10.75 ಕೋಟಿ ರೂ.ಗೆ ಖರೀದಿಸಲಾಗಿದೆ. (ಮೂಲ: Twitter)

4 /10

ಶ್ರೀಲಂಕಾದ ಆಲ್ ರೌಂಡರ್ ವನಿಂದು ಹಸರಂಗ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಮರಳಿದ್ದಾರೆ. ಹಸರಂಗ 10.75 ಕೋಟಿ ರೂ. (ಮೂಲ: Twitter)

5 /10

ಆಲ್ ರೌಂಡರ್ ಮತ್ತು ಐಪಿಎಲ್ 2021 ರ ಪರ್ಪಲ್ ಕ್ಯಾಪ್ ವಿಜೇತ ಹರ್ಷಲ್ ಪಟೇಲ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು 10.75 ಕೋಟಿ ರೂ.ಗೆ ಖರೀದಿಸಿದೆ. (ಫೋಟೋ: IANS)

6 /10

ಟೀಂ ಇಂಡಿಯಾ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ದೆಹಲಿ ತಂಡ ಸೇರಿದ್ದಾರೆ. ಠಾಕೂರ್ ಅವರನ್ನು 10.75 ಕೋಟಿ ರೂ.ಗೆ ಖರೀದಿಸಲಾಯಿತು.  (ಫೋಟೋ: BCCI/IPL)

7 /10

ಇಂಗ್ಲೆಂಡ್ ಆಲ್ ರೌಂಡರ್ ಲಿಯಾಮ್ ಲಿವಿಂಗ್ ಸ್ಟೋನ್ ಅವರನ್ನು ಪಂಜಾಬ್ ಕಿಂಗ್ಸ್ 11.5 ಕೋಟಿ ರೂ.ಗೆ ಖರೀದಿಸಿದೆ. ಲಿವಿಂಗ್‌ಸ್ಟೋನ್ ಹರಾಜಿನ 2 ನೇ ದಿನದಂದು ಅತ್ಯಂತ ದುಬಾರಿ ಖರೀದಿಯಾಗಿದೆ. (ಫೋಟೋ: IANS)

8 /10

ಟೀಮ್ ಇಂಡಿಯಾ ಮತ್ತು ಮುಂಬೈ ಬ್ಯಾಟರ್ ಶ್ರೇಯಸ್ ಅಯ್ಯರ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸೇರಿದ್ದಾರೆ. ಅಯ್ಯರ್ ಅವರನ್ನು 12.25 ಕೋಟಿ ರೂ.ಗೆ ಖರೀದಿಸಲಾಗಿದೆ. (ಫೋಟೋ: BCCI/IPL)

9 /10

ಟೀಂ ಇಂಡಿಯಾ ಆಲ್‌ರೌಂಡರ್ ದೀಪಕ್ ಚಾಹರ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 14 ಕೋಟಿ ರೂ.ಗೆ ವಾಪಸ್ ಖರೀದಿಸಿದೆ. (ಮೂಲ: Twitter)

10 /10

ಜಾರ್ಖಂಡ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಎರಡು ದಿನಗಳ ಐಪಿಎಲ್ 2022 ಮೆಗಾ ಹರಾಜಿನಲ್ಲಿ ಅತ್ಯಂತ ದುಬಾರಿ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಮುಂಬೈ ಇಂಡಿಯನ್ಸ್ 15.25 ಕೋಟಿ ರೂ.ಗೆ ಕಿಶನ್ ಖರೀದಿಸಿದೆ. (ಫೋಟೋ: BCCI/IPL)