Leslie Hilton Was Hanged for Murder: ಅನೇಕ ಆಟಗಾರರ ಮೇಲೆ ಅದೆಷ್ಟೋ ಅಪರಾಧದ ಪ್ರಕರಣಗಳು ದಾಖಲಾಗಿವೆ. ಈ ಕಾರಣದಿಂದ ಜೈಲು ಶಿಕ್ಷೆ, ದಂಡ ಹೀಗೆ ಅನೇಕ ರೀತಿಯಲ್ಲಿ ಶಿಕ್ಷೆಗೆ ಒಳಗಾಗಿದ್ದಾರೆ. ಆದರೆ ಎಂದಾದರೂ ಕೊಲೆ ಮಾಡಿ ಸಿಕ್ಕಿಬಿದ್ದ ಆಟಗಾರನ ಬಗ್ಗೆ ಕೇಳಿದ್ದೀರಾ?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಈ ಆಟಗಾರನನ್ನು ಆ ಕಾಲದ ಅತ್ಯುತ್ತಮ ಆಲ್’ರೌಂಡರ್ ಆಟಗಾರರಲ್ಲಿ ಒಬ್ಬನೆಂದು ಪರಿಗಣಿಸಲಾಗಿದೆ. ಆದರೆ ಇಲ್ಲೊಬ್ಬ ಆಟಗಾರ ಕಾನೂನನ್ನು ಕೈಗೆ ತೆಗೆದುಕೊಂಡಿದ್ದು, ತನ್ನ ಪತ್ನಿಯನ್ನೇ ಕೊಲೆಗೈದಿದ್ದಾನೆ.
ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಲೆಸ್ಲಿ ಹಿಲ್ಟನ್’ಯನ್ನು 50ನೇ ವಯಸ್ಸಿನಲ್ಲಿ ಹೆಂಡತಿಯನ್ನು ಕೊಂದ ಆರೋಪದ ಮೇಲೆ ಗಲ್ಲಿಗೇರಿಸಲಾಯಿತು. ಲೆಸ್ಲಿ ಹಿಲ್ಟನ್ ಮೂಲತಃ ಜಮೈಕಾದವರು. ಇವರು ಗಲ್ಲಿಗೇರಿದ ವಿಶ್ವದ ಏಕೈಕ ಕ್ರಿಕೆಟಿಗ.
1955 ರಲ್ಲಿ ಹಿಲ್ಟನ್ ತನ್ನ ಹೆಂಡತಿಯನ್ನು ಕೊಲೆಗೈದ ಪ್ರಕರಣದಲ್ಲಿ ಅವರನ್ನು ಗಲ್ಲಿಗೇರಿಸಲಾಯಿತು. 29 ಮಾರ್ಚ್ 1905 ರಂದು ಜಮೈಕಾದ ಕಿಂಗ್’ಸ್ಟನ್’ನಲ್ಲಿ ಜನಿಸಿದ ಲೆಸ್ಲಿ ಬಲಗೈ ವೇಗದ ಬೌಲರ್ ಆಗಿದ್ದರು.
ಲೆಸ್ಲಿ ಹಿಲ್ಟನ್ 1942 ರಲ್ಲಿ ಲುರ್ಲೀನ್ ರೋಸ್ ಅವರನ್ನು ವಿವಾಹವಾದರು. ಮದುವೆಯಾದ 12 ವರ್ಷಗಳ ನಂತರ ಅಂದರೆ 1954ರಲ್ಲಿ, ಈ ದಂಪತಿ ನಡುವಿನ ಸಂಬಂಧದಲ್ಲಿ ಬಿರುಕು ಉಂಟಾಗಿತ್ತು. ಏಪ್ರಿಲ್ 1954 ರಲ್ಲಿ ಒಂದು ದಿನ, ಹಿಲ್ಟನ್ ಅನಾಮಧೇಯ ಪತ್ರವನ್ನು ಸ್ವೀಕರಿಸಿದರು. ಅದರಲ್ಲಿ ಬ್ರೂಕ್ಲಿನ್ ಅವೆನ್ಯೂದಲ್ಲಿ ವಾಸಿಸುತ್ತಿದ್ದ ಅವರ ಪತ್ನಿ ಮತ್ತು ರಾಯ್ ಫ್ರಾನ್ಸಿಸ್ ಎಂಬವರ ನಡುವೆ ಅಕ್ರಮ ಸಂಬಂಧವಿದೆ ಎಂದು ಬರೆಯಲಾಗಿತ್ತು.
ಈ ಪತ್ರ ಓದುತ್ತಿದ್ದಂತೆ ಕೋಪಗೊಂಡ ಲೆಸ್ಲಿ ಹಿಲ್ಟನ್, ಕಿಟಕಿಯ ಬಳಿ ಬಿದ್ದಿದ್ದ ಬಂದೂಕನ್ನು ಹಿಡಿದು ಗುಂಡು ಹಾರಿಸಿದನು. ಲುರ್ಲೀನ್ ರೋಸ್ ಅವರ ದೇಹದಲ್ಲಿ ಒಂದಲ್ಲ 7 ಗುಂಡುಗಳು ಪತ್ತೆಯಾಗಿತ್ತು.
ಲೆಸ್ಲಿ ಹಿಲ್ಟನ್ 1935 ಮತ್ತು 1939 ರ ನಡುವೆ ವೆಸ್ಟ್ ಇಂಡೀಸ್’ಗಾಗಿ ಆರು ಟೆಸ್ಟ್ ಪಂದ್ಯಗಳನ್ನು ಆಡಿದ್ದರು. 1935 ರಲ್ಲಿ ಇಂಗ್ಲೆಂಡ್ ವಿರುದ್ಧ ಬ್ರಿಡ್ಜ್ ಟೌನ್’ನಲ್ಲಿ ಟೆಸ್ಟ್ಗೆ ಪಾದಾರ್ಪಣೆ ಮಾಡಿದ ಹಿಲ್ಟನ್, ತಮ್ಮ ವೃತ್ತಿಜೀವನದಲ್ಲಿ 6 ಟೆಸ್ಟ್ ಮತ್ತು 40 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ.
6 ಟೆಸ್ಟ್ಗಳ 12 ಇನ್ನಿಂಗ್ಸ್ಗಳಲ್ಲಿ 26.12 ಸರಾಸರಿ ಮತ್ತು 2.59 ರ ಆರ್ಥಿಕತೆಯೊಂದಿಗೆ 16 ವಿಕೆಟ್’ಗಳನ್ನು ಪಡೆದರು. 27 ರನ್ಗಳಿಗೆ 4 ವಿಕೆಟ್ ಕಬಳಿಸಿದ್ದು ಅವರ ಅತ್ಯುತ್ತಮ ಪ್ರದರ್ಶನ. ಪ್ರಥಮ ದರ್ಜೆ ವೃತ್ತಿಜೀವನದಲ್ಲಿ, 40 ಪಂದ್ಯಗಳಲ್ಲಿ 25.62 ಸರಾಸರಿಯಲ್ಲಿ 120 ವಿಕೆಟ್’ಗಳನ್ನು ಪಡೆದಿದ್ದರು. ಅವರ ಅತ್ಯುತ್ತಮ ಪ್ರದರ್ಶನವೆಂದರೆ 24 ರನ್ಗಳಿಗೆ 5 ವಿಕೆಟ್.