ನೆನಪಿರಲಿ !ನೆಲ್ಲಿಕಾಯಿಯನ್ನು ಹಚ್ಚುವ ಮೊದಲು ಈ ರೀತಿ ಮಾಡಿದರೆ ಮಾತ್ರ ಬಿಳಿ ಕೂದಲು ಕಪ್ಪಾಗುವುದು !

ಬಿಳಿ ಕೂದಲನ್ನು ಕಪ್ಪಾಗಿಸಲು ರಾಸಾಯನಿಕ ಬಣ್ಣವನ್ನು ಬಳಸುವ ಬದಲು,  ನೈಸರ್ಗಿಕ ಪರಿಹಾರಗಳ ಸಹಾಯವನ್ನು ತೆಗೆದುಕೊಳ್ಳಬಹುದು. 

ಬೆಂಗಳೂರು : ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸಲು ನಾವು ಅನೇಕ ರೀತಿಯ ಪ್ರಯತ್ನಕ್ಕೆ ಇಳಿಯುತ್ತೇವೆ. ಬಿಳಿ ಕೂದಲು ಕಂಡ ತಕ್ಷಣ ಕೆಲವರು ಹೇರ್ ಕಲರ್ ಹಚ್ಚಲು ಮುಂದಾಗುತ್ತಾರೆ.ಇದರಿಂದಾಗಿ ಕಪ್ಪು ಕೂದಲು ಕೂಡಾ ಬಿಳಿಯಾಗುವ ಅಪಾಯ ಹೆಚ್ಚಿರುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

1 /6

ಬಿಳಿ ಕೂದಲನ್ನು ಕಪ್ಪಾಗಿಸಲು ರಾಸಾಯನಿಕ ಬಣ್ಣವನ್ನು ಬಳಸುವ ಬದಲು,  ನೈಸರ್ಗಿಕ ಪರಿಹಾರಗಳ ಸಹಾಯವನ್ನು ತೆಗೆದುಕೊಳ್ಳಬಹುದು.ಈ ನೈಸರ್ಗಿಕ ಪರಿಹಾರಗಳಲ್ಲಿ ನೆಲ್ಲಿಕಾಯಿ ಕೂಡಾ ಸೇರಿದೆ.ಕೂದಲನ್ನು ಕಪ್ಪಾಗಿಸುವಲ್ಲಿ ನೆಲ್ಲಿಕಾಯಿ ತುಂಬಾ ಪ್ರಯೋಜನಕಾರಿಯಾಗಿದೆ.

2 /6

ನೆಲ್ಲಿಕಾಯಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದ ಗುಣಲಕ್ಷಣಗಳು ಕೂದಲಿನ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದು ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ. ಆದರೆ ಬಿಳಿ ಕೂದಲನ್ನು ಕಪ್ಪಾಗಿಸಲು ನೆಲ್ಲಿಕಾಯಿಯನ್ನು ಹೇಗೆ ಬಳಸುವುದು ಎನ್ನುವುದು ತಿಳಿದಿರಬೇಕು.

3 /6

100 ಗ್ರಾಂ ನೆಲ್ಲಿಕಾಯಿಯನ್ನು ತೆಗೆದುಕೊಂಡು ಕಬ್ಬಿಣದ ಬಾಣಲೆಯಲ್ಲಿ ಹಾಕಿ.  ಈಗ ಅದಕ್ಕೆ 1 ಕಪ್ ನೀರು ಸೇರಿಸಿ ಬಿಸಿ ಮಾಡಿ.ನೀರು ಕುದಿಯಲು ಪ್ರಾರಂಭಿಸಿದಾಗ, ಬೆಂಕಿಯನ್ನು ನಿಧಾನಗೊಳಿಸಿ.ಕಂದು ಬಣ್ಣದಿಂದ ಕಪ್ಪು ಬಣ್ಣಕ್ಕೆ ಬದಲಾಗುವವರೆಗೆ ನೀರು ಮತ್ತು ನೆಲ್ಲಿಕಾಯಿಯನ್ನು ಬಿಸಿ ಮಾಡಿ.ಈ ಪ್ರಕ್ರಿಯೆಯು ಪೂರ್ಣಗೊಳ್ಳಲು 20 ರಿಂದ 30 ನಿಮಿಷಗಳನ್ನು ತೆಗೆದುಕೊಳ್ಳಬಹುದು.

4 /6

ನಂತರ, ರಾತ್ರಿಯಿಡೀ ಈ ಮಿಶ್ರಣವನ್ನು ಹಾಗೆಯೇ ಬಿಡಬೇಕು. ನಂತರ ಬೆಳಿಗ್ಗೆ ಈ ನೆಲ್ಲಿಕಾಯಿಯನ್ನು ರುಬ್ಬಿಕೊಂಡು ಅದರ ಪೇಸ್ಟ್ ತಯಾರಿಸಿ.ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ.ಸುಮಾರು 2 ಗಂಟೆಗಳ ನಂತರ, ಕೂದಲನ್ನು ಸರಳ ನೀರಿನಿಂದ ತೊಳೆಯಿರಿ.

5 /6

ಈ ಪೇಸ್ಟ್ ಅನ್ನು ಹಚ್ಚುವ ಮೊದಲು ನೀವು ಮಾಡಲೇ ಬೇಕಾದ ಒಂದು ಕೆಲಸವಿದೆ.  ಅದೇನೆಂದರೆ ಈ ಪೇಸ್ಟ್ ಹಚ್ಚುವ ಮೊದಲು ಕೂದಲನ್ನು ಚೆನ್ನಾಗಿ ತೊಳೆಯಿರಿ. ಇದರಿಂದ ನಿಮ್ಮ ಕೂದಲಿನಲ್ಲಿ ಎಣ್ಣೆ ಅಥವಾ ಕೊಳೆ ಉಳಿಯುವುದಿಲ್ಲ. ಕೂದಲು ಸಂಪೂರ್ಣವಾಗಿ ಒಣಗಿಸಿದ ನಂತರವೇ ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ. 

6 /6

ಹೀಗೆ ಕೂದಲಿಗೆ ಹಚ್ಚಿದ ಪೇಸ್ಟ್ ಅನ್ನು 2 ಗಂಟೆಗಳ ಕಾಲ ಹಾಗೆಯೇ ಬಿಡಿ. ನಂತರ ಕೂದಲಿಗೆ ಸ್ನಾನ ಮಾಡಿ. ಆದರೆ ಶಾಂಪೂ ಅಥವಾ ಇತರ ಯಾವುದೇ  ಹೇರ್ ಕೇರ್ ಪ್ರಾಡಕ್ಟ್ ಬಳಸಬೇಡಿ. ಹೀಗೆ ಮಾಡುತ್ತಾ ಬಂದರೆ ಬಿಳಿ ಕೂದಲು ಕಪ್ಪಾಗುತ್ತದೆ.  (ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)