LPG Saving Tips Hacks:ಕೆಲವು ತಂತ್ರಗಳನ್ನು ಬಳಸುವ ಮೂಲಕ ಮ ಸಿಲಿಂಡರ್ ಅನ್ನು ಹೆಚ್ಚು ಸಮಯದವರೆಗೆ ಬಳಸುವುದು ಸಾಧ್ಯವಾಗುತ್ತದೆ.
LPG Saving Tips Hacks : ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಅಂದರೆ LPG ಸಿಲಿಂಡರ್ ಬಲು ದುಬಾರಿಯಾಗಿದೆ. ಎಷ್ಟು ಇತಿ ಮಿತಿಯಾಗಿ ಖರ್ಚು ಮಾಡಿದರೂ ಬೇಗೆ ಖಾಲಿಯಾಗುತ್ತದೆ. ಅಲ್ಲದೆ ಅಗತ್ಯವಿರುವಾಗಲೇ ಸಿಲಿಂಡರ್ ಖಾಲಿಯಾಗಿ ಬಿಡುತ್ತದೆ. ಕೆಲವು ತಂತ್ರಗಳನ್ನು ಬಳಸುವ ಮೂಲಕ ಮ ಸಿಲಿಂಡರ್ ಅನ್ನು ಹೆಚ್ಚು ಸಮಯದವರೆಗೆ ಬಳಸುವುದು ಸಾಧ್ಯವಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಒದ್ದೆಯಾದ ಪಾತ್ರೆಗಳನ್ನು ಬಳಸಬಾರದು. ಪಾತ್ರೆಗಳನ್ನು ಒಲೆಯ ಮೇಲೆ ಇಡುವ ಮೊದಲು, ಅದನ್ನು ಸ್ವಚ್ಛವಾದ ಬಟ್ಟೆಯಿಂದ ಒರೆಸಬೇಕು. ಇದರಿಂದ ಪಾತ್ರೆಯನ್ನು ಒಣಗಿಸಲು ಗ್ಯಾಸ್ ಖರ್ಚಾಗುವುದಿಲ್ಲ.
ಅಡುಗೆ ಮಾಡಲು ಹೊರಡುವಾಗ ಅಗತ್ಯವಿರುವ ಎಲ್ಲಾ ಸಾಮಗ್ರಿಗಳನ್ನು ನಿಮ್ಮೊಂದಿಗೆ ಇಟ್ಟುಕೊಂಡು ನಂತರ ಗ್ಯಾಸ್ ಆನ್ ಮಾಡಿ. ಗ್ಯಾಸ್ ಆನ್ ಮಾಡಿ ನಟರ ಸಾಮಗ್ರಿಗಳನ್ನು ಹುಡುಕಲು ಆರಂಭಿಸಿದರೆ ಸುಖಾ ಸುಮ್ಮನೆ ಗ್ಯಾಸ್ ನಷ್ಟವಾಗುತ್ತದೆ.
ಫ್ರಿಡ್ಜ್‌ನಿಂದ ಯಾವುದೇ ವಸ್ತುವನ್ನು ಹೊರತೆಗೆದ ತಕ್ಷಣ ಅದನ್ನು ಗ್ಯಾಸ್ ಮೇಲೆ ಹಾಕಬೇಡಿ. ಮೊದಲೇ ಅದನ್ನು ಹೊರಗಿಟ್ಟು, ರೂಂ ಟೆಂಪರೇಚರ್ ಗೆ ಬಂದ್ ನಂತರ ಅಡುಗೆಗೆ ಬಳಸಿ. ಇದರಿಂದ ಗ್ಯಾಸ್ ಉಳಿತಾಯವೂ ಆಗುತ್ತದೆ.
ಆಹಾರವನ್ನು ಹೆಚ್ಚಾಗಿ ಮುಚ್ಚಿಟ್ಟು ಬೇಯಿಸಬೇಕು. ಆಹಾರವನ್ನು ತೆರೆದಿಟ್ಟು, ಬೇಯಿಸಿದರೆ, ಅಸದು ಬೇಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಗ್ಯಾಸ್ ನಷ್ಟವಾಗುತ್ತದೆ.
ಅಡುಗೆಗೆ ಯಾವಾಗಲೂ ಪ್ರೆಶರ್ ಕುಕ್ಕರ್ ಅನ್ನು ಬಳಸಬೇಕು. ಏಕೆಂದರೆ ಸಾಮಾನ್ಯ ಪಾತ್ರೆಗಳಿಗೆ ಹೋಲಿಸಿದರೆ ಪ್ರೆಶರ್ ಕುಕ್ಕರ್ ನಲ್ಲಿ ಅಕ್ಕಿ ಬೆಲೆ ಬೇಗ ಬೇಯುತ್ತದೆ. ಇದರಿಂದ ಗ್ಯಾಸ್ ಬಳಕೆ ಕಡಿಮೆಯಾಗುತ್ತದೆ.
ಬಿಸಿನೀರು ಅಥವಾ ಚಹಾವನ್ನು ಕುಡಿಯಬೇಕಾದರೆ ಒಮ್ಮೆ ಕುದಿಸಿ ಥರ್ಮೋಸ್‌ನಲ್ಲಿ ಹಾಕಿಡಿ. ಆಗ ಪದೇ ಪದೇ ಬಿಸಿ ಮಾಡುವ ಕೆಲಸ ತಪ್ಪುತ್ತದೆ. ಗ್ಯಾಸ್ ಕೂಡಾ ಉಳಿತಾಯವಾಗುತ್ತದೆ.
ಪ್ರತಿ ತಿಂಗಳು ಅಥವಾ ಕಾಲಕಾಲಕ್ಕೆ ಗ್ಯಾಸ್, ರೆಗ್ಯುಲೇಟರ್ ಮತ್ತು ಪೈಪ್ ಅನ್ನು ಪರಿಶೀಲಿಸುತ್ತಿರಬೇಕು. ಇದರೊಂದಿಗೆ ಸುರಕ್ಷತೆಯ ಜೊತೆಗೆ ಗ್ಯಾಸ್ ಉಳಿತಾಯ ಕೂಡಾ ಸಾಧ್ಯ.
ಹಾನಿಗೊಳಗಾದ ಅಥವಾ ಸುಟ್ಟ ಪಾತ್ರೆಯಲ್ಲಿ ಅಡುಗೆ ಮಾಡಿದರೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ, ಪಾತ್ರೆಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ.
ಯಾವುದೇ ಅಡುಗೆ ಮಾಡುವಾಗ, ಪಾತ್ರೆಯ ಪ್ರಕಾರ ಜ್ವಾಲೆಯನ್ನು ಇರಿಸಿ. ಪಾತ್ರೆ ಚಿಕ್ಕದಾಗಿದ್ದರೆ ಉರಿಯನ್ನು ಕಡಿಮೆ ಮಾಡಿ. ಸಣ್ಣ ಪಾತ್ರೆಯಲ್ಲಿ ಜ್ವಾಲೆಯನ್ನು ಹೆಚ್ಚು ಇಟ್ಟುಕೊಳ್ಳುವುದರಿಂದ, ಗ್ಯಾಸ್ ಬೇಗ ಖಾಲಿಯಾಗುತ್ತದೆ. ಪಾತ್ರೆಗಳು ಸಹ ಸುಟ್ಟುಹೋಗುತ್ತವೆ.
ಅನಿಲದ ಬಣ್ಣವು ಹಳದಿ, ಕೆಂಪು-ಕಿತ್ತಳೆ ಬಣ್ಣದಲ್ಲಿದ್ದರೆ, ಗ್ಯಾಸ್ ಪೈಪ್, ಟ್ಯೂಬ್ ಮತ್ತು ಮೆಶ್ ಅನ್ನು ಸ್ವಚ್ಛವಾಗಿಡಿ. ಇದು ಶುಚಿಯಾಗಿ ಇರದಿದ್ದರೆ, ಗ್ಯಾಸ್ ಬೇಗ ಖಾಲಿಯಾಗುತ್ತದೆ.