ಮೆಹಂದಿ ರಂಗು ಬರ್ತಾ ಇಲ್ವಾ ಹಾಗಾದರೆ, ಈ ಟಿಪ್ಸ್‌ ಫಾಲೋ ಮಾಡಿ...

Tips for Dark Mehendhi: ಇನ್ನೇನು ಸಂಕ್ರಾಂತಿ ಹಬ್ಬ ಬಂದೇ ಬಿಡ್ತು. ಹೆಣ್ಣು ಮಕ್ಕಳಲ್ಲಿ ಹಬ್ಬ ಅಂದ್ರೆ ಅಲಂಕಾರ ಮಾಡಿಕೊಳ್ಳುವುದರಲ್ಲಿ ಏನೋ ಸಂತೋಷ. ಅದರಲ್ಲಿ ಅಂತೂ ಯಾವುದೇ ಹಬ್ಬ ಹರಿದಿನ ಬಂದರೂ ಮೆಹಂದಿ ಹಚ್ಚಿಕೊಳ್ಳದೇ ಅದು ಪರಿಪೂರ್ಣ ಅನಿಸೋದೇ ಇಲ್ಲ. ಅದ್ರೆ ಕೆಲವರಿಗೆ ಮೆಹಂದಿ ಹಚ್ಚಿ ಎಷ್ಟೇ ಗಂಟೆಗಳು ಬಿಟ್ರು ರಂಗು ಬರೋದೇ ಇಲ್ಲ. ಹಾಗಾದರೆ ಗಾಡ ಬಣ್ಣ ಬೇಕು ಅಂದರೆ ಏನು ಮಾಡಬೇಕು. ಈ ಟಿಪ್ಸ್‌ ಫಾಲೋ ಮಾಡಿ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ಮೆಹಂದಿ ಹಚ್ಚುವ ಮುನ್ನ ನಿಮ್ಮ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ಕೈಯಲ್ಲಿರುವ ಕೊಳಕೆಲ್ಲ ಹೋಗಿ ಕೈ ಚೆನ್ನಾಗಿ ಒಣಗಬೇಕು. ನಂತರ ಮೆಹಂದಿ ಹಚ್ಚಿದರೆ ಅದು ಚೆನ್ನಾಗಿ ಕಾಣುತ್ತದೆ.  

2 /5

ಕೈ ತೊಳೆದ ನಂತರ ಮಾಯಿಶ್ಚರೈಸರ್ ಬಳಸಬೇಡಿ. ನೇರವಾಗಿ ಕಾಲಿ ಕೈಗಳ ಮೇಲೆ ಮೆಹಂದಿ ಹಚ್ಚಿ. ಮಾಯಿಶ್ಚರೈಸರ್‌ಗಳಲ್ಲಿ ಇರುವ ರಾಸಾಯನಿಕಗಳು ಮೆಹಂದಿ ಕೆಂಪಾಗುವುದರಿಂದ ತಡೆಗಟ್ಟುತ್ತದೆ.   

3 /5

ಮೆಹಂದಿ ಹಚ್ಚಿದ ನಂತರ ಅದು ಒಣಗುವುದು ತುಂಬಾ ಮುಖ್ಯ. ಸಕ್ಕರೆ ನೀರು, ಕೊಬ್ಬರಿ ಎಣ್ಣೆ ಏನನ್ನೇ ಬಳಸಿದರೂ ಕೂಡಾ ಅದನ್ನು ಒಣಗಿಸುವುದು ತುಂಬಾ ಮುಖ್ಯ.

4 /5

ಸಕ್ಕರೆ ಮತ್ತು ನಿಂಬೆರಸ ಮಿಶ್ರಣ ಮಾಡಿ ಒಣಗಿದ ಮೆಹಂದಿಯ ಮೇಲೆ ಲೇಪಿಸಿ. ಇದು ಮೆಹಂದಿಗೆ ಬಣ್ಣ ನೀಡುವುದರಲ್ಲಿ ಸಹಾಯ ಮಾಡುತ್ತದೆ.

5 /5

ಲವಂಗವನ್ನು ತವಾದ ಮೇಲೆ ಹಾಕಿ ಹೊಗೆ ಆಡಲು ಬಿಡಿ ನಂತರ ಆ ಹೊಗೆಯ ಶಾಕದಲ್ಲಿ ನಿಮ್ಮ ಕೈ ಅನ್ನು ತೋರಿಸಿ. ನಿಮ್ಮ ಮೆಹಂದಿ ಹಚ್ಚಿದ ಕೈಗಳನ್ನ ಲವಂಗದ ಶಾಕಕ್ಕೆ ಒಡ್ಡುವುದರಿಂದ ನಿಮ್ಮ ಕೈಗಳಿಗೆ ಇದು ಗಾಡ ಬಣ್ಣವನ್ನು ನೀಡುತ್ತದೆ.