Garuda Purana: ಗರುಡ ಪುರಾಣದಲ್ಲಿ ಮಾನವ ಜೀವನದ ಬಗ್ಗೆ ಹಲವು ವಿಷಯಗಳನ್ನು ಉಲ್ಲೇಖಿಸಲಾಗಿದೆ. ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಹೇಳಲಾಗುತ್ತದೆ.
Garuda Purana: ಹಿಂದೂ ಧರ್ಮದಾಲ್ಲಿ ಗರುಡ ಪುರಾಣ ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಗರುಡ ಪುರಾಣವನ್ನು ಸನಾತನ ಧರ್ಮದ 18 ಮಹಾಪುರಾಣಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಗರುಡ ಪುರಾಣವು ಭಗವಾನ್ ವಿಷ್ಣು ಮತ್ತು ಅವನ ವಾಹನ ಗರುಡನ ನಡುವಿನ ಸಂಭಾಷಣೆಯನ್ನು ವಿವರಿಸುವ ಪುರಾಣ ಎಂದು ನಂಬಲಾಗಿದೆ. ಗರುಡ ಪುರಾಣದಲ್ಲಿ ಮಾನವ ಜೀವನದ ಬಗ್ಗೆ ಹಲವು ವಿಷಯಗಳನ್ನು ಉಲ್ಲೇಖಿಸಲಾಗಿದೆ. ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಹೇಳಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಏಕಾದಶಿ ವ್ರತ: ಗರುಡ ಪುರಾಣದ ಪ್ರಕಾರ, ವಿಧಿ-ವಿಧಾನಗಳಿಂದ ಏಕಾದಶಿ ಉಪವಾಸ, ವ್ರತವನ್ನು ಆಚರಿಸುವ ವ್ಯಕ್ತಿಗೆ ಜನ್ಮ ಜನ್ಮಾಂತರದ ಪಾಪಗಳಿಂದ ವಿಮೋಚನೆ ದೊರೆತು ವ್ಯಕ್ತಿ ಜೀವನದಲ್ಲಿ ಯಶಸ್ಸನ್ನು ಗಳಿಸುತ್ತಾನೆ ಎಂಬ ನಂಬಿಕೆ ಇದೆ.
ತುಳಸಿ ಪರಿಹಾರ: ಹಿಂದೂ ಧರ್ಮದಲ್ಲಿ ಪವಿತ್ರ ಸಸ್ಯವೆಂದು ಪರಿಗಣಿಸಲ್ಪಟ್ಟಿರುವ ತುಳಸಿಯು ವಿಷ್ಣು ಪ್ರಿಯೆ ಎಂದು ಪರಿಗಣಿಸಲಾಗಿದೆ. ಇಂತಹ ತುಳಸಿ ಸಸ್ಯದ ಎಲೆಗಳನ್ನು ನಿತ್ಯ ವಿಷ್ಣುವಿಗೆ ಅರ್ಪಿಸಿ ನಂತರ ಅದನ್ನು ಸೇವಿಸಿ. ಈ ರೀತಿ ಮಾಡುವುದರಿಂದ ನಿಮ್ಮ ಪ್ರತಿ ಕೆಲಸದಲ್ಲೂ ಭಗವಾನ್ ವಿಷ್ಣುವಿನ ಆಶೀರ್ವಾದ ದೊರೆತು ಯಶಸ್ಸು ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.
ಶುಚಿತ್ವದ ಬಗ್ಗೆ ವಿಶೇಷ ಕಾಳಜಿ: ಸಂಪತ್ತಿನ ಅಧಿದೇವತೆಯಾದ ಮಹಾಲಕ್ಷ್ಮಿ ಸ್ವಚ್ಚತೆಯನ್ನು ಇಷ್ಟಪಡುತ್ತಾಳೆ. ಹಾಗಾಗಿ, ಮನಃ ಶುದ್ದಿಯ ಜೊತಗೆ ದೈಹಿಕ ಶುಚಿತ್ವವೂ ಬಹಳ ಮುಖ್ಯ. ತಾಯಿ ಲಕ್ಷ್ಮಿಯನ್ನು ಮೆಚ್ಚಿಸಿ ಯಶಸ್ಸಿನ ಉತ್ತುಂಗವನ್ನು ಏರಲು ನಿತ್ಯ ತಪ್ಪದೇ ಸ್ನಾನ ಮಾಡಿ, ಶುದ್ಧ ಉಡುಪನ್ನು ಧರಿಸುವ ಅಭ್ಯಾಸ ರೂಢಿಸಿಕೊಳ್ಳಿ.
ಸಕಾರಾತ್ಮಕ ಚಿಂತನೆ: ಗರುಡ ಪುರಾಣದ ಪ್ರಕಾರ, ಸಕಾರಾತ್ಮಕ ಚಿಂತನೆಯೊಂದಿಗೆ ಪ್ರಾರಂಭವಾಗುವ ಯಾವುದೇ ಕೆಲಸದಲ್ಲೂ ದೇವರ ಆಶೀರ್ವಾದ ಇದ್ದೇ ಇರುತ್ತದೆ. ಇದರಿಂದ ಜೀವನದಲ್ಲಿ ಯಶಸ್ಸನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ.
ಸಮತೋಲಿತ ಆಹಾರ: ಗರುಡ ಪುರಾಣದ ಪ್ರಕಾರ, ಸಮತೋಲಿತ ಆಹಾರ ಸೇವನೆಯಿಂದ ಜೀರ್ಣಾಂಗ ವ್ಯವಸ್ಥೆ ಆರೋಗ್ಯವಾಗಿರುತ್ತದೆ. ಮಾತ್ರವಲ್ಲ, ಹೊಟ್ಟೆ ಬಿರಿಯುವ ಹಾಗೆ ತಿನ್ನುವ ಬದಲು ಸ್ವಲ್ಪ ಕಡಿಮೆ ಆಹಾರ ಸೇವನೆಯು ವ್ಯಕ್ತಿಯನ್ನು ಆರೋಗ್ಯವಾಗಿರಿಸಲು ಸಹಾಯಕ. ಇದರಿಂದ ವ್ಯಕ್ತಿ ಕೆಲಸದಲ್ಲಿ ಏಕಾಗ್ರತೆ ವಹಿಸುವುದರ ಜೊತೆಗೆ ಹಿಡಿದ ಕೆಲಸದಲ್ಲಿ ಯಶಸ್ಸನ್ನು ಗಳಿಸುತ್ತಾನೆ ಎಂದು ನಂಬಲಾಗಿದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.