2023 ರ ಅರ್ಧದಲ್ಲೆ ಪ್ರೇಕ್ಷಕರನ್ನು ಮೆಚ್ಚಿಸಲು ವಿಫಲವಾದ 5 ಸೂಪರ್ ಸ್ಟಾರ್‌ಗಳ ಸಿನಿಮಾಗಳಿವು

Latest released Movies list : ಇತ್ತೀಚಿಗೆ ಬಿಡುಗಡೆಯಾದ ಟಾಲಿವುಡ್‌ ನಟ ಪ್ರಭಾಸ್‌ ನಟನೆಯ ಆದಿಪುರುಷ ಚಿತ್ರದಿಂದ ಹಿಡಿದು 2023ರ ಮೊದಲಿಗೆ ತೆರೆಕಂಡ ಕೆಲವು ಸಿನಿಮಾಗಳು ಗಲ್ಲಾಪೆಟ್ಟಿಯಲ್ಲಿ ಸದ್ದು ಮಾಡಲಿಲ್ಲ. 2023ರ ಅರ್ಧಾವಧಿಗೆ ಪ್ರೇಕ್ಷಕರ ಮಹಾಶಯನನ್ನು ಮೆಚ್ಚಿಸಲು ವಿಫಲವಾದ ಸ್ಟಾರ್‌ ನಟರ ಸಿನಿಮಾಗಳಿವು..
 

2023 flop movies list : 2023 ರ ವರ್ಷವು ಶಾರುಖ್ ಖಾನ್ ಅಭಿನಯದ 'ಪಠಾಣ್' ಬಿಡುಗಡೆಯೊಂದಿಗೆ ಅಬ್ಬರದಿಂದ ಪ್ರಾರಂಭವಾಯಿತು, ಇದು ಬಾಲಿವುಡ್‌ನ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿತ್ತು. ಇದರ ನಂತರ, ಹೆಚ್ಚಿನ ನಿರೀಕ್ಷೆಯೊಂದಿಗೆ ಅನೇಕ ಚಿತ್ರಗಳು ತೆರೆಗೆ ಬಂದವು. ಆದರೆ, ಕೆಲವೇ ಕೆಲವು ಚಿತ್ರಗಳು ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಯಶಸ್ವಿಯಾದವು. ಆದರೆ ಸ್ಟಾರ್ ನಟರ ಸಿನಿಮಾಗಳೇ ನೆಲಕಚ್ಚಿದ್ದು ಹೆಚ್ಚು.

1 /6

ಕಾರ್ತಿಕ್ ಆರ್ಯನ್ ಅಭಿನಯದ 'ಶೆಹಜಾದಾ' ದಿಂದ ಪ್ರಭಾಸ್ ಅವರ 'ಆದಿಪುರುಷ' ವರೆಗೆ, 2023 ರ ಮೊದಲಾರ್ಧದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಕುಸಿದ ಕಂಡ ಚಿತ್ರಗಳನ್ನು ನಾವು ಇಲ್ಲಿ ನೋಡೋಣ.

2 /6

'ಆದಿಪುರುಷ' : ಈ ಸಿನಿಮಾ ಟೀಸರ್ ಮತ್ತು ಟ್ರೇಲರ್‌ಗೆ ಪ್ರೇಕ್ಷಕರಿಂದ ಟೀಕೆಗಳು ವ್ಯಕ್ತವಾಗಿದ್ದವು. ಕೆಟ್ಟ ವಿಎಫ್‌ಎಕ್ಸ್‌ ಎಂಬ ಮಾತುಗಳು ಕೇಳಿ ಬಂದಿದ್ದವು. ಕೆಲವೊಂದಿಷ್ಟು ಬದಲಾವಣೆ ಮಾಡಿದ ನಂತರ 'ಆದಿಪುರುಷ' ಚಿತ್ರ ಬಿಡುಗಡೆ ಕಂಡಿತ್ತು. ಆದರೂ ಸಹ ಸಂಭಾಷಣೆ ಮತ್ತು ಕೆಟ್ಟ ವಿಎಫ್‌ಎಕ್ಸ್‌ನಿಂದಾಗಿ ರಿಲೀಸ್‌ ನಂತರ ಟ್ರೋಲ್‌ಗೆ ಗುರಿಯಾಗಿ ಭಾರೀ ಹಿನ್ನಡೆ ಪಡೆಯಿತು. ಓಂ ರಾವುತ್‌ ನಿರ್ದೇಶನಕ ಈ ಸಿನಿಮಾ ‘ರಾಮಾಯಣ ಮಹಾಕಾವ್ಯಕ್ಕೆ ಅಗೌರವ ತೋರುತ್ತಿದೆ’ ಎಂದು ಅಭಿಮಾನಿಗಳು ಆರೋಪಿಸಿದ್ದರು. ಈ ಚಿತ್ರದಲ್ಲಿ ಪ್ರಭಾಸ್, ಕೃತಿ ಸನೋನ್, ಸನ್ನಿ ಸಿಂಗ್ ಮತ್ತು ಸೈಫ್ ಅಲಿ ಖಾನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

3 /6

'ಕಿಸಿ ಕಾ ಭಾಯಿ ಕಿಸಿ ಕಿ ಜಾನ್' : ಸಲ್ಮಾನ್ ಖಾನ್ ನಟನೆಯ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ವರ್ಷದ ದೊಡ್ಡ ಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರದ ಮೇಲೆ ಬಹುನಿರೀಕ್ಷೆ ಇತ್ತು. ಇದು ಶೆಹನಾಜ್ ಗಿಲ್ ಮತ್ತು ಪಾಲಕ್ ತಿವಾರಿಯಂತಹ ಜನಪ್ರಿಯ ಯುವ ನಟರ ಚೊಚ್ಚಲ ಚಿತ್ರ. ಈ ಕಾರಣಕ್ಕಾಗಿ ಕುತೂಹಲ ಹೆಚ್ಚಿಸಿತ್ತು. ಅಲ್ಲದೆ, ಈ ಸಿನಿಮಾದಲ್ಲಿ ವೆಂಕಟೇಶ್ ದಗ್ಗುಬಾಟಿ ಮತ್ತು ಜಗಪತಿ ಬಾಬು ಅವರಂತಹ ದಕ್ಷಿಣದ ಸೂಪರ್‌ಸ್ಟಾರ್‌ ನಟಿಸಿದ್ದರು. ಆದರೆ, ಚಿತ್ರ ಬಿಡುಗಡೆಯಾದ ಮೇಲೆ ನೆಲಕಚ್ಚಿತು. ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆಯಿತು.

4 /6

'ಭೋಲಾ' : ಅಜಯ್ ದೇವಗನ್ ನಿರ್ದೇಶನದ 'ಭೋಲಾ' 2019 ರ ತಮಿಳು ಚಲನಚಿತ್ರ ಕೈಥಿಯ ಅಧಿಕೃತ ರಿಮೇಕ್ ಆಗಿದೆ. ಕಥಾಹಂದರವು ಒಂದೇ ಆಗಿದ್ದರೂ, ಪ್ರೇಕ್ಷಕರಿಗೆ ಹೆಚ್ಚು ಮನರಂಜನೆ ನೀಡಲು ಅಜಯ್ ಕೆಲವು ವಿಶಿಷ್ಟವಾದ ಆಕ್ಷನ್ ಸೀಕ್ವೆನ್ಸ್‌ಗಳನ್ನು ಸಂಯೋಜಿಸಿದ್ದರು. ಆದರೆ, ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆಯುವಲ್ಲಿ ಚಿತ್ರ ವಿಫಲವಾಯಿತು. ಇದರಲ್ಲಿ ಟಬು ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

5 /6

'ಸೆಲ್ಫಿ' : ಅಕ್ಷಯ್‌ ಕುಮಾರ್‌ ನಟನೆಯ 'ರಾಮ್ ಸೇತು' ಸೋಲಿನ ನಂತರ, ಈ ವರ್ಷ ಬಿಡುಗಡೆಯಾದ 'ಸೆಲ್ಫಿ' ಕೂಡ ಪ್ರೇಕ್ಷಕರನ್ನು ಮೆಚ್ಚಿಸಲು ವಿಫಲವಾಗಿದೆ. 2019 ರ ಮಲಯಾಳಂ ಚಲನಚಿತ್ರ 'ಡ್ರೈವಿಂಗ್ ಲೈಸೆನ್ಸ್' ನ ಅಧಿಕೃತ ಹಿಂದಿ ರಿಮೇಕ್ ಆಗಿರುವ ಈ ಚಿತ್ರದಲ್ಲಿ ಇಮ್ರಾನ್ ಹಶ್ಮಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಡಯಾನಾ ಪೆಂಟಿ ಮತ್ತು ನುಶ್ರತ್ ಭರುಚ್ಚಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

6 /6

'ಶೆಹಜಾದಾ' : ಕಾರ್ತಿಕ್ ಆರ್ಯನ್ ಮತ್ತು ಕೃತಿ ಸನೋನ್ ಅಭಿನಯದ 'ಶೆಹಜಾದಾ'ಗೆ ಭಾರೀ ಪ್ರಚಾರ ಮಾಡಲಾಯಿತು. ವಿಶೇಷವಾಗಿ 'ಭೂಲ್ ಭುಲೈಯಾ 2' ರ ಸೂಪರ್ ಯಶಸ್ಸಿನ ನಂತರ ಅಭಿಮಾನಿಗಳು ಕಾರ್ತಿಕ್‌ ಸಿನಿಮಾಗಳ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ, ಈ ಸಿನಿಮಾ ಪ್ರೇಕ್ಷಕರನ್ನು ಮೆಚ್ಚಿಸಲು ವಿಫಲವಾಯಿತು. ವಿಮರ್ಶಕರಿಂದಲೂ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆಯಿತು. 'ಶೆಹಜಾದಾ' ಅಲ್ಲು ಅರ್ಜುನ್ ಅಭಿನಯದ 'ಅಲ್ಲಾ ವೈಕುಂಠಪುರಮುಲೂ' ಚಿತ್ರದ ಅಧಿಕೃತ ಹಿಂದಿ ರಿಮೇಕ್ ಆಗಿದೆ.