Flight Safety Rules: ವಿಶ್ವದ ಲಕ್ಷಾಂತರ ಜನರು ಸಮಯವನ್ನು ಉಳಿಸಲು ಪ್ರತಿದಿನ ವಿಮಾನದಲ್ಲಿ ಪ್ರಯಾಣಿಸುತ್ತಾರೆ. ನೀವೂ ಯಾವುದೋ ಒಂದು ಹಂತದಲ್ಲಿ ವಿಮಾನದಲ್ಲಿ ಕುಳಿತುಕೊಂಡಿರಬೇಕು. ಆದರೆ, ಮರೆತರೂ ಫ್ಲೈಟ್ ಅಟೆಂಡೆಂಟ್ಗೆ ನಾಲ್ಕು ಮಾತು ಹೇಳಬೇಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
ವಿಮಾನಯಾನದಲ್ಲಿ ನೀವು ಈ ಪದಗಳನ್ನು ಬಳಸಿದರೆ ತೊಂದರೆಗೆ ಸಿಲುಕಬಹುದು: ಫ್ಲೈಟ್ ಸುರಕ್ಷತಾ ನಿಯಮಗಳ ಪ್ರಕಾರ, ವಿಮಾನಯಾನದಲ್ಲಿ ಕೆಲವು ಚಟುವಟಿಕೆಗಳು ಮತ್ತು ಪದಗಳನ್ನು ಬಹಳ ಗಂಭೀರವಾಗಿ ಪರಿಗಣಿಸಲಾಗುತ್ತದೆ. ಆ ನಾಲ್ಕು ಮಾತುಗಳನ್ನು ನೀವು ವಿಮಾನ ಸಿಬ್ಬಂದಿಗೆ ತಮಾಷೆಯಾಗಿ ಹೇಳಿದರೂ, ನೀವು ದೊಡ್ಡ ತೊಂದರೆಗೆ ಸಿಲುಕಬಹುದು. ಹಾಗೆ ಮಾಡಿದರೆ ಲಕ್ಷ ರೂಪಾಯಿ ದಂಡ (ವಿಮಾನ ಸುರಕ್ಷತಾ ನಿಯಮಗಳು) ಜೊತೆಗೆ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಇದರೊಂದಿಗೆ, ನೀವು ಶಾಶ್ವತವಾಗಿ ಬ್ಲಾಕ್ ಲಿಸ್ಟ್ ಕೂಡ ಸೇರಬಹುದು.
ಮದ್ಯಪಾನ ಸೇವಿಸಿ ವಿಮಾನ ಹತ್ತುವಂತಿಲ್ಲ : ಡೈಲಿ ಸ್ಟಾರ್ ವರದಿಯ ಪ್ರಕಾರ, ವಿಮಾನದ ಸಿಬ್ಬಂದಿಗೆ ವಿನಂತಿಸಿದ ನಂತರ ವಿಮಾನದಲ್ಲಿ ಮದ್ಯ ಸೇವಿಸಬಹುದು, ಆದರೆ ಮದ್ಯಪಾನ ಸೇವಿಸಿ ನಂತರ ವಿಮಾನ ಹತ್ತುವಂತಿಲ್ಲ. ಈ ಬಗ್ಗೆ ಏರ್ ಲೈನ್ಸ್ ಎಷ್ಟು ಗಂಭೀರವಾಗಿದೆ ಎಂದರೆ ಅಟೆಂಡರ್ ಗೆ ‘ನಾನು ಕುಡಿದಿದ್ದೇನೆ’ ಎಂದು ತಮಾಷೆಗೆ ಹೇಳಿದರೂ ನಿಮಗೆ ತೊಂದರೆ ಆಗಬಹುದು. ಮದ್ಯಪಾನ ಮಾಡಿದ ಪ್ರಯಾಣಿಕರು ಇತರ ಪ್ರಯಾಣಿಕರ ಸುರಕ್ಷತೆಗೆ ಅಪಾಯವನ್ನುಂಟುಮಾಡುವುದು ಇದಕ್ಕೆ ಕಾರಣ.
ಇಂತಹ ಪ್ರಯಾಣಿಕರನ್ನು ವಿಮಾನ ಸಿಬ್ಬಂದಿ ಕೆಳಗಿಳಿಸಬಹುದು: ಮದ್ಯ ಸೇವನೆ ಮಾಡಿ ಸಹ ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆ ನೀಡುವ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಲು ಕ್ಯಾಬಿನ್ ಸಿಬ್ಬಂದಿ ಮತ್ತು ಫ್ಲೈಟ್ ಅಟೆಂಡೆಂಟ್ಗಳಿಗೆ ಎಲ್ಲಾ ವಿಮಾನಯಾನ ಸಂಸ್ಥೆಗಳು ವಿಶೇಷ ಹಕ್ಕುಗಳನ್ನು ನೀಡಿವೆ. ಅವರು ಅಮಲೇರಿದ ಪ್ರಯಾಣಿಕರನ್ನು ವಿಮಾನ ಹತ್ತುವುದನ್ನು ನಿಲ್ಲಿಸಬಹುದು. ವಿಮಾನವನ್ನು ಹಾರಿಸಿದ ನಂತರ, ಪ್ರಯಾಣಿಕರು ಪ್ರಜ್ಞಾಹೀನರಾಗಿದ್ದಾರೆ ಎಂದು ಅವರಿಗೆ ತಿಳಿದರೆ, ಅವರು ಪ್ರಯಾಣಿಕರನ್ನು ಹತ್ತಿರದ ವಿಮಾನ ನಿಲ್ದಾಣದಲ್ಲಿ ಇಳಿಸಬಹುದು ಮತ್ತು ಪ್ರಯಾಣಿಕರನ್ನು ವಿಮಾನದಿಂದ ಇಳಿಸಬಹುದು. ಇದನ್ನೂ ಓದಿ- COP26 Summit Trending Video: 'ನಮ್ಮ ದೇಶದಲ್ಲಿ ನೀವು ತುಂಬಾ ಜನಪ್ರೀಯರು, ನನ್ನ ಪಕ್ಷ ಸೇರಿ', ಹೀಗಂತ ಯಾವ ದೇಶದ ಪ್ರಧಾನಿ PM Modiಗೆ ಹೇಳಿದ್ದು ಗೊತ್ತಾ?
ಇಂತಹ ಪ್ರಯಾಣಿಕರನ್ನು ಶಾಶ್ವತವಾಗಿ ಕಪ್ಪುಪಟ್ಟಿಗೆ ಸೇರಿಸಬಹುದು: ಇಷ್ಟೇ ಅಲ್ಲ, ಕುಡಿದ ಅಮಲಿನಲ್ಲಿ ಪ್ರಯಾಣಿಸುವವರು ಅವರೊಂದಿಗೆ ಜಗಳವಾಡಲು ಅಥವಾ ಗಲಾಟೆ ಮಾಡಲು ಪ್ರಯತ್ನಿಸಿದರೆ, ಅವರ ವಿರುದ್ಧವೂ ಪ್ರಕರಣ ದಾಖಲಿಸಬಹುದು. ತಪ್ಪಿತಸ್ಥರೆಂದು ಕಂಡುಬಂದರೆ, 8,000 ಪೌಂಡ್ಗಳ ದಂಡ ಮತ್ತು 3 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದು. ಇದರೊಂದಿಗೆ, ಆ ಪ್ರಯಾಣಿಕರನ್ನು ಕಪ್ಪುಪಟ್ಟಿಗೆ ಸೇರಿಸಬಹುದು. ಇದನ್ನೂ ಓದಿ- Covid Vaccine for Children: 5-11 ವರ್ಷದ ಮಕ್ಕಳಿಗೆ ಫಿಜರ್ ಲಸಿಕೆ ನೀಡಲು ಮುಂದಾದ ಅಮೆರಿಕ
ತಮಾಷೆಯಲ್ಲಿಯೂ ಈ ಪದಗಳನ್ನು ಹೇಳಬೇಡಿ: ಹಾಗಾಗಿ ಈಗ ನೀವು ವಿಮಾನದಲ್ಲಿ ಕುಳಿತಾಗಲೆಲ್ಲ 'ನಾನು ಕುಡಿದಿದ್ದೇನೆ' ಅಥವಾ 'ನಾನು ನಶೆಯಲಿದ್ದೇನೆ' ಎಂದು ತಮಾಷೆಯಾಗಿಯೂ ಹೇಳಬೇಡಿ. ವಿಮಾನ ಸಿಬ್ಬಂದಿ ನಿಮ್ಮ ಹಾಸ್ಯವನ್ನು ಗಂಭೀರವಾಗಿ ಪರಿಗಣಿಸಬಹುದು. ಜೊತೆಗೆ ಕುಡಿದು ವಿಮಾನದಲ್ಲಿನ ಇತರ ಪ್ರಯಾಣಿಕರ ಜೀವಕ್ಕೆ ಅಪಾಯವನ್ನುಂಟುಮಾಡುವುದಕ್ಕಾಗಿ ನಿಮ್ಮ ವಿರುದ್ಧ ಪ್ರಕರಣವನ್ನು ದಾಖಲಿಸಬಹುದು. ಹೀಗೆ ಮಾಡುವುದರಿಂದ ನೀವು ಶಾಶ್ವತವಾಗಿ ವಿಮಾನದಲ್ಲಿ ಕುಳಿತುಕೊಳ್ಳಲು ಅನರ್ಹರಾಗಬಹುದು. (ಎಲ್ಲಾ ಫೋಟೋಗಳು ಸಾಂಕೇತಿಕ, ಕ್ರೆಡಿಟ್: ವಿಕಿಮೀಡಿಯಾ ಕಾಮನ್ಸ್)