Akshaya Tritiya 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿ ಏಪ್ರಿಲ್ 22, 2023 ರಂದು ಅಕ್ಷಯ ತೃತಿಯ ಬೀಳುತ್ತಿದೆ. ಹಿಂದೂ ಧರ್ಮ ಶಾಸ್ತ್ರಗಳಲ್ಲಿ ಅಕ್ಷಯ ತೃತೀಯಾಗೆ ವಿಶೇಷ ಮಹತ್ವ ಕಲ್ಪಿಸಲಾಗಿದೆ. ಈ ಬಾರಿಯ ಅಕ್ಷಯ ತೃತೀಯಾ ದಿನ ಮಂಗಳನ ರಾಶಿಯಾಗಿರುವ ಮೇಷ ರಾಶಿಯಲ್ಲಿ 5 ಗ್ರಹಗಳ ಮಹಾಮೈತ್ರಿಯಿಂದ ಪಂಚಗ್ರಹಿ ಯೋಗ ನಿರ್ಮಾಣಗೊಳ್ಳುತ್ತಿದೆ ಇದರಿಂದ ಒಟ್ಟು 4 ರಾಶಿಗಳ ಜಾತಕದವರ ಜೀವನದಲ್ಲಿ ಅಪಾರ ಧನಸಂಪತ್ತು ಪ್ರಾಪ್ತಿ ಹಾಗೂ ಉನ್ನತಿಯ ಯೋಗ ನಿರ್ಮಾಣಗೊಳ್ಳುತ್ತಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,
Horoscope Akshay Tritiya 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿ ಏಪ್ರಿಲ್ 22, 2023 ರಂದು ಅಕ್ಷಯ ತೃತೀಯಾ ಆಚರಿಸಲಾಗುತ್ತಿದೆ, ಹಿಂದೂ ಧರ್ಮ ಶಾಸ್ತ್ರಗಳಲ್ಲಿ ಅಕ್ಷಯ ತೃತೀಯಾಗೆ ವಿಶೇಷ ಮಹತ್ವವನ್ನು ಕಲ್ಪಿಸಲಾಗಿದೆ. ವೈದಿಕ ಪಂಚಾಂಗದ ಪ್ರಕಾರ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯಾ ತಿಥಿಯಂದು ಅಕ್ಷಯ ತೃತೀಯಾ ಆಚರಿಸಲಾಗುತ್ತದೆ. ಹೊಸ ಕಾರ್ಯಗಳು, ಶುಭ ಕಾರ್ಯಗಳು ಹಾಗೂ ಖರೀದಿಗೆ ಅಕ್ಷಯ ತೃತಿಯ ತಿಥಿ ತುಂಬಾ ಒಳ್ಳೆಯದು ಎಂದು ಭಾವಿಸಲಾಗುತ್ತಿದೆ. ಈ ಬಾರಿಯ ಅಕ್ಷಯ ತೃತೀಯಾ ದಿನ ಮೇಷ ರಾಶಿಯಲ್ಲಿ ಒಟ್ಟು 5 ಗ್ರಹಗಳು ವಿರಾಜಮಾನನಾಗಿರಲಿವೆ. ಇದಲ್ಲದೆ ವೃಷಭ ರಾಶಿಯಲ್ಲಿ 2 ಗ್ರಹಗಳು ಇರಲಿವೆ. ಮೇಷ ರಾಶಿಯಲ್ಲಿ ಸೂರ್ಯ, ಗುರು, ಬುಧ, ಗುರು ಹಾಗೂ ಯುರೇನಸ್ ಗ್ರಹಗಳ ಮೈತ್ರಿ ನೆರವೇರಲಿದೆ. ಈ ಮಹಾಮೈತ್ರಿಯಿಂದ ಅಲ್ಲಿ ಪಂಚಗ್ರಹಿ ಯೋಗ ನಿರ್ಮಾಣಗೊಳ್ಳುತ್ತಿದೆ. ಇದರ ಜೊತೆಗೆ ವೃಷಭ ರಾಶಿಯಲ್ಲಿ ಚಂದ್ರ ಹಾಗೂ ಶುಕ್ರರ ಮೈತ್ರಿ ಕೂಡ ನಿರ್ಮಾಣಗೊಳ್ಳುತ್ತಿದೆ. ಈ ಮಹಾ ಮೈತ್ರಿಗಳು ಯಾವ ರಾಶಿಗಳ ಪಾಲಿಗೆ ಅದೃಷ್ಟವನ್ನು ತರಲಿವೆ ತಿಳಿದುಕೊಳ್ಳೋಣ ಬನ್ನಿ,
ಇದನ್ನೂ ಓದಿ-Surya Gochar 2023: ಕೆಲವೇ ಗಂಟೆಗಳಲ್ಲಿ 'ಬಲಶಾಲಿ' ಸ್ಥಿತಿಗೆ ಸೂರ್ಯನ ಪ್ರವೇಶ, ಈ ಜನರ ಮೇಲೆ ಅಪಾರ ಧನವೃಷ್ಟಿ!
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ವೃಷಭ ರಾಶಿ: ನಿಮ್ಮ ರಾಶಿಯ ವಿಶೇಷತೆ ಎಂದರೆ ನಿಮ್ಮ ರಾಶಿಯಲ್ಲಿಯೇ ಚಂದ್ರ ಹಾಗೂ ಶುಕ್ರರ ಮೈತ್ರಿ ನೆರವೇರುತ್ತಿದೆ. ಇದಲ್ಲದೆ ಪಂಚಗ್ರಹಿ ಯೋಗದ ಕಾರಣ ನಿಮ್ಮ ಗೋಚರ ಜಾತಕದಲ್ಲಿ ರಾಜಯೋಗ ಕೂಡ ರೂಪುಗೊಳ್ಳುತ್ತಲಿದೆ. ಇದರಿಂದ ಕಾರ್ಯಸ್ಥಳದಲ್ಲಿ ನೀವು ಮಾಡುವ ಕೆಲಸ ಕಾರ್ಯಗಳಿಗೆ ಭಾರಿ ಪ್ರಶಂಸೆ ವ್ಯಕ್ತವಾಗಲಿದೆ. ಈ ಅವಧಿಯಲ್ಲಿ ನಿಮಗೆ ಅಪಾರ ಧನ-ಸಂಪತ್ತಿನ ಜೊತೆಗೆ ಸುಖ-ಸಮೃದ್ಧಿ ಪ್ರಾಪ್ತಿಯಾಗಲಿದೆ. ಕುಟುಂಬದ ಸದಸ್ಯರ ಜೊತೆಗೆ ಉತ್ತಮ ಕಾಲ ಕಳೆಯುವಿರಿ.
ಕರ್ಕ ರಾಶಿ: ಕರ್ಕ ರಾಶಿಯ ಜನರ ಪಾಲಿಗೆ ಈ ಬಾರಿಯ ಅಕ್ಷಯ ತೃತೀಯ ತಿಥಿ ತುಂಬಾ ವಿಶೇಷವಾಗಿರಲಿದೆ. ಏಕೆಂದರೆ ಈ ರಾಶಿಗಳ ಜನರ ಜಾತಕದ ದಶಮೇಶ ಭಾವದಲ್ಲಿ ಈ ಮಹಾಮೈತ್ರಿ ಯೋಗ ನಿರ್ಮಾಣಗೊಳ್ಳುತ್ತಲಿದೆ. ಇನ್ನೊಂದೆಡೆ ನಿಮ್ಮ ಜಾತಕದ ಏಕಾದಶ ಭಾವದಲ್ಲಿ ಈಗಾಗಲೇ ಶುಕ್ರ ವಿರಾಜಮಾನನಾಗಿದ್ದಾನೆ. ಹೀಗಿರುವಾಗ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ನಿಮ್ಮದಾಗಲಿದೆ. ಈ ದಿನ ಚಿನ್ನ ಬೆಳ್ಳಿ ಖರೀದಿಸುವುದರಿಂದ ಭವಿಷ್ಯದಲ್ಲಿ ನಿಮಗೆ ಅಪಾರ ಧನಲಾಭವಾಗುವ ಎಲ್ಲಾ ಸಾಧ್ಯತೆಗಳಿವೆ. ವ್ಯಾಪಾರದಲ್ಲಿಯೂ ಕೂಡ ನಿಮಗೆ ಅಧಿಕ ಲಾಭದ ಲಕ್ಷಣಗಳು ಗೋಚರಿಸುತ್ತಿವೆ.
ಮೇಷ ರಾಶಿ: ಈ ರಾಶಿಗೆ ಮಂಗಳ ಅಧಿಪತಿ ಹೀಗಾಗಿ ಈ ರಾಶಿಯ ಜನರ ಪಾಲಿಗೆ ಅಕ್ಷಯ ತೃತೀಯಾ ಅತ್ಯಂತ ಶುಭ ಫಲಪ್ರದಾಯಿ ಸಾಬೀತಾಗಲಿದೆ. ಏಕೆಂದರೆ ನಿಮ್ಮ ರಾಶಿಯಲ್ಲೇ ಈ ಪಂಚಗ್ರಹಿ ಯೋಗ ನಿರ್ಮಾಣಗೊಳ್ಳುತ್ತಿದೆ. ಸಮಾಜದಲ್ಲಿ ಘನತೆ-ಗೌರವ ಹೆಚ್ಚಾಗಲಿದೆ. ಇದರ ಜೊತೆಗೆ ನೌಕರಿಯಲ್ಲಿ ಹಾಗೂ ವ್ಯಾಪಾರದಲ್ಲಿ ನಿಮಗೆ ಅಪಾರ ಲಾಭ ಸಿಗಲಿದೆ. ಈ ದಿನ ದಾನ ಮಾಡುವುದರಿಂದ ಹಲವು ಪಟ್ಟು ಹೆಚ್ಚು ಶುಭ ಫಲಗಳನ್ನು ಪಡೆದುಕೊಳ್ಳಬಹುದು.
ಸಿಂಹ ರಾಶಿ: ಸಿಂಹ ರಾಶಿಯ ಜನರ ಪಾಲಿಗೂ ಕೂಡ ಈ ಬಾರಿಯ ಅಕ್ಷಯ ತೃತಿಯ ತುಂಬಾ ವಿಶೇಷವಾಗಿರಲಿದೆ. ಏಕೆಂದರೆ ನಿಮ್ಮ ಜಾತಕದ ಪಂಚಮ ಭಾವದಲ್ಲಿ ಗ್ರಹಗಳ ರಾಜ ಸೂರ್ಯನ ಸಂಚಾರ ನಡೆಯುತ್ತಿದೆ. ಹೀಗಾಗಿ ದೀರ್ಘ ಕಾಲದಿಂದ ನೆನೆಗುದಿಗೆ ಬಿದ್ದ ಕಾರ್ಯಗಳು ಪೂರ್ಣಗೊಳ್ಳಲಿವೆ. ದೇವ ದೇವತೆಗಳ ಕೃಪಾವೃಷ್ಟಿಯ ಕಾರಣ ಎಲ್ಲಾ ಕ್ಷೇತ್ರಗಳಲ್ಲಿ ನಿಮಗೆ ಅಪಾರ ಧನಲಾಭವಾಗುವ ಸಾಧ್ಯತೆಗಳಿವೆ. ಕುಟುಂಬದ ಸದಸ್ಯರ ಜೊತೆಗೆ ಒಳ್ಳೆಯ ಕಾಲ ಕಳೆಯುವಲ್ಲಿ ನೀವು ಯಶಸ್ಸನ್ನು ಕಾಣಬಹುದು. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)