ಮ್ಯೂಚುಯಲ್ ಫಂಡ್‌ನ 5 ಬಹು ದೊಡ್ಡ ಪ್ರಯೋಜನಗಳಿವು

ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಮಾರುಕಟ್ಟೆಯ ಏರಿಳಿತದಿಂದ ಪ್ರಭಾವಿತವಾಗಿರುತ್ತದೆ. ಅಂದರೆ, ಹೂಡಿಕೆಯಲ್ಲಿ ಅಪಾಯವೂ ಇರುತ್ತದೆ. ಇದರ ಹೊರತಾಗಿಯೂ, ಈ ಯೋಜನೆಯಲ್ಲಿ ಅನೇಕ ಪ್ರಯೋಜನಗಳಿವೆ. 

ಬೆಂಗಳೂರು : ಮ್ಯೂಚುವಲ್ ಫಂಡ್‌ಗಳು ಇಂದಿನ ಕಾಲದಲ್ಲಿ ಹೆಚ್ಚು ಜನಪ್ರಿಯವಾಗುತ್ತಿವೆ. ಯುವಕರಲ್ಲಿ ಇದರ ಬಗ್ಗೆ ಕ್ರೇಜ್ ಕೂಡಾ ಹೆಚ್ಚುತ್ತಿದೆ.  ಇದರಲ್ಲಿ ಹೂಡಿಕೆದಾರನು ತನ್ನ ಅನುಕೂಲಕ್ಕೆ ಅನುಗುಣವಾಗಿ ಹೂಡಿಕೆಯ ಆಯ್ಕೆಯನ್ನು ಪಡೆಯುತ್ತಾನೆ. ಅವರು ವ್ಯವಸ್ಥಿತ ಹೂಡಿಕೆ ಯೋಜನೆ ಮೂಲಕ ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡಬಹುದು.  ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆಯಲ್ಲಿ ಸಂಪೂರ್ಣ ಪಾರದರ್ಶಕತೆ ಇರುತ್ತದೆ. ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಮಾರುಕಟ್ಟೆಯ ಏರಿಳಿತದಿಂದ ಪ್ರಭಾವಿತವಾಗಿರುತ್ತದೆ. ಅಂದರೆ, ಹೂಡಿಕೆಯಲ್ಲಿ ಅಪಾಯವೂ ಇರುತ್ತದೆ. ಇದರ ಹೊರತಾಗಿಯೂ, ಈ ಯೋಜನೆಯಲ್ಲಿ ಅನೇಕ ಪ್ರಯೋಜನಗಳಿವೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ನೀವು ಕೇವಲ 100 ರೂಪಾಯಿಗಳ SIP ಯೊಂದಿಗೆ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆಯನ್ನು ಪ್ರಾರಂಭಿಸಬಹುದು. SIP ನಲ್ಲಿ ದೀರ್ಘಾವಧಿಯ ಹೂಡಿಕೆ ಮಾಡಿದರೆ, ಅದರಲ್ಲಿ ಕಂಪೌನ್ಡಿಂಗ್ ಬೆನಿಫಿಟ್ಸ್ ಇರುತ್ತದೆ. 

2 /5

ಮ್ಯೂಚುಯಲ್ ಫಂಡ್ ಗಳು ಯಾವುದೇ ಆಸ್ತಿ ವರ್ಗದಲ್ಲಿ ಹೂಡಿಕೆ ಮಾಡಬಹುದಾದ ಒಂದು ಮಾರ್ಗವಾಗಿದೆ. ಚಿನ್ನವನ್ನು ಖರೀದಿಸುವ ಯೋಜನೆ ಇದ್ದರೆ,  ಗೋಲ್ಡ್ ಫಂಡ್ ಆಪ್ಷನ್ ಪಡೆಯಬಹುದು. ಸ್ಥಿರ ಠೇವಣಿಗಳಿಗೆ debt fund, ರಿಯಲ್ ಎಸ್ಟೇಟ್‌ಗಾಗಿ ಇನ್‌ಫ್ರಾ ಫಂಡ್‌ಗಳಂತಹ ಆಯ್ಕೆಗಳು ಕೂಡಾ ಸಿಗುತ್ತವೆ. 

3 /5

ಕೆವೈಸಿ ಪೂರ್ಣಗೊಳಿಸುವ ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆಯನ್ನು ಪ್ರಾರಂಭಿಸಬಹುದು. KYC ಗಾಗಿ ವಿಳಾಸ ಪುರಾವೆ ಮತ್ತು ಗುರುತಿನ ಪುರಾವೆ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಮೊಬೈಲ್ ಆಪ್‌ಗಳ ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದಾಗಿದೆ.  

4 /5

ನಿಮ್ಮ ಹೂಡಿಕೆಗಳನ್ನು ನಿರ್ವಹಿಸುವ ಯೋಜನೆಗಾಗಿ ಮೀಸಲಾದ ಫಂಡ್ ಮ್ಯಾನೇಜರ್‌ಗಳಿದ್ದಾರೆ. ಅಂದರೆ, ನಿಮ್ಮ ಹಣವನ್ನು ಎಲ್ಲಿ, ಯಾವಾಗ ಮತ್ತು ಎಷ್ಟು ಹೂಡಿಕೆ ಮಾಡಬೇಕೆಂದು ವೃತ್ತಿಪರ ವ್ಯಕ್ತಿ ನಿರ್ಧರಿಸುತ್ತಾನೆ. ಇದರಿಂದ ಹೂಡಿಕೆದಾರರು ಗರಿಷ್ಠ ಆದಾಯ ಪಡೆಯಬಹುದು.

5 /5

ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಪೇಮೆಂಟ್ ಮೋಡ್ ಸಹ ತುಂಬಾ ಅನುಕೂಲಕರವಾಗಿದೆ. ಸಂಪೂರ್ಣ ಪ್ರಕ್ರಿಯೆಯು ಡಿಜಿಟಲ್ ಮತ್ತು ಕಾಂಟಾಕ್ಟ್ ಲೆಸ್ ಆಗಿರುತ್ತದೆ. ಇದಲ್ಲದೆ, ಮೊಬೈಲ್ ಅಪ್ಲಿಕೇಶನ್‌ನಿಂದ ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ನೀವು ಪಾವತಿಸಬಹುದು.  ( ಸೂಚನೆ : ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತದೆ. ಹೂಡಿಕೆ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ದಯವಿಟ್ಟು ಸಲಹೆಗಾರರನ್ನು ಸಂಪರ್ಕಿಸಿ.)