ಈ ಐದು ಸ್ಥಳಗಳಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತದ ದೃಶ್ಯ ಮನಮೋಹಕವಾಗಿರುತ್ತದೆ.. !

ಗಂಗಾ ಘಾಟ್‌ನಲ್ಲಿ ದೋಣಿ ವಿಹಾರ ಮಾಡುವಾಗ  ಸೂರ್ಯೋದಯ ಮತ್ತು ಸೂರ್ಯಾಸ್ತದ ಸುಂದರ ದೃಶ್ಯಗಳನ್ನು ನೋಡಬಹುದು.

Sunrise and Sunset Point in India : ಸೂರ್ಯೋದಯ ಮತ್ತು ಸೂರ್ಯಾಸ್ತದ ನೋಟವು ತುಂಬಾ ಸುಂದರವಾಗಿರುತ್ತದೆ. ಪರ್ವತದ ಎತ್ತರದ ಶಿಖರದಲ್ಲಿ ಅಥವಾ ಸಮುದ್ರದ ತೀರದಲ್ಲಿ ಈ ನೋಟ ಇನ್ನೂ ಅದ್ಬುತವಾಗಿರುತ್ತದೆ. ಈ ದೃಶ್ಯವನ್ನು ಕಣ್ತುಂಬಿ ಕೊಳ್ಳಲು ಜನರು ಮೈಲುಗಟ್ಟಲೆ ಪ್ರಯಾಣ ಬೆಳೆಸುತ್ತಾರೆ.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ವಾರಣಾಸಿಯ ಗಂಗಾ ಘಾಟ್‌ಗಳ ಸೊಬಗು ಎಲ್ಲರಿಗೂ ತಿಳಿದಿರುತ್ತದೆ. ಇಲ್ಲಿನ ಗಂಗಾ ಆರತಿಯ ನೋಟವು ಅದ್ಭುತವಾಗಿದೆ. ಗಂಗಾ ಘಾಟ್‌ನಲ್ಲಿ ದೋಣಿ ವಿಹಾರ ಮಾಡುವಾಗ  ಸೂರ್ಯೋದಯ ಮತ್ತು ಸೂರ್ಯಾಸ್ತದ ಸುಂದರ ದೃಶ್ಯಗಳನ್ನು ನೋಡಬಹುದು.

2 /5

ತಾಜ್ ಮಹಲ್ ನೋಡಲು ದೇಶ ಮಾತ್ರವಲ್ಲದೆ ವಿದೇಶಗಳಿಂದಲೂ ಲಕ್ಷಾಂತರ ಪ್ರವಾಸಿಗರು ಬರುತ್ತಾರೆ. ತಾಜ್‌ನ ಸೌಂದರ್ಯವು ಸೂರ್ಯಾಸ್ತದ ಬಣ್ಣಗಳಿಂದ ಇನ್ನಷ್ಟು ಹೆಚ್ಚುತ್ತದೆ. 

3 /5

ಕನ್ಯಾಕುಮಾರಿ ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದ ಸಂಗಮವಾಗಿರುವ ಭಾರತದ ದಕ್ಷಿಣ ತುದಿಯಲ್ಲಿರುವ ಅತ್ಯಂತ ಸುಂದರವಾದ ನಗರವಾಗಿದೆ. ಸೂರ್ಯಾಸ್ತದ ನೋಟವನ್ನು ನೋಡಲು ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಹುಣ್ಣಿಮೆಯಂದು ಸೂರ್ಯಾಸ್ತ ಮತ್ತು ಚಂದ್ರನ ಉದಯವನ್ನು ಏಕಕಾಲದಲ್ಲಿ ನೋಡಬಹುದಾದ ದೇಶದ ಏಕೈಕ ನಗರ ಇದಾಗಿದೆ. 

4 /5

ಅರಾವಳಿ ಬೆಟ್ಟಗಳಲ್ಲಿರುವ ಮೌಂಟ್ ಅಬು ರಾಜಸ್ಥಾನದ ಪ್ರಸಿದ್ಧ ಗಿರಿಧಾಮವಾಗಿದೆ. ಅರಾವಳಿಯ ಅತ್ಯುನ್ನತ ಶಿಖರವಾದ ಗುರು ಶಿಖರದಿಂದ ಮತ್ತು ನಕ್ಕಿ ಸರೋವರದ ಮೇಲೆ ದೋಣಿಯಲ್ಲಿ ಕುಳಿತು ಸೂರ್ಯಾಸ್ತಮಾನದ ಸೌಂದರ್ಯವನ್ನು ಸವಿಯಬಹುದು. 

5 /5

ಪರ್ವತಗಳು ಮತ್ತು ಸಮುದ್ರದ ಜೊತೆಗೆ ಮರುಭೂಮಿಯಲ್ಲಿಯೂ ಸಹ ಸೂರ್ಯೋದಯ ಮತ್ತು ಸೂರ್ಯಾಸ್ತದ ನೋಟವು ತುಂಬಾ ಸುಂದರವಾಗಿರುತ್ತದೆ. ದೂರದವರೆಗೆ ಹರಡಿರುವ ಮರಳಿನ ನಡುವೆ ಅಸ್ತಮಿಸುವ ಸೂರ್ಯನ ಕಿರಣವನ್ನು ಗುಜರಾತ್‌ನ ಕಚ್‌ ನಲ್ಲಿ ನೋಡಬಹುದು.