ನಿಮ್ಮ ಸಂಗಾತಿ ಸುಳ್ಳು ಹೇಳುತ್ತಿದ್ದಾರೆ ಎಂದನಿಸುತ್ತಿದೆಯೇ? ಹಾಗಾದ್ರೆ ಈ ಸಿಂಪಲ್ ಟ್ರಿಕ್ಸ್ ಮೂಲಕ ಪತ್ತೆಹಚ್ಚಿ

ಕೆಲವು ಸಂಬಂಧಗಳಲ್ಲಿ ಪ್ರೀತಿ, ಮಮತೆ, ಕರುಣೆಗಿಂತ ಹೆಚ್ಚಾಗಿ ಜಗಳ, ಮನಸ್ತಾಪಗಳು ಕಂಡುಬರುತ್ತವೆ. ಅದಕ್ಕೆ ಮುಖ್ಯ ಕಾರಣ ಅನುಮಾನ. ಈ ಒಂದು ಭಾವನೆ ಅದೆಷ್ಟೋ ಜನರ ಜೀವನವನ್ನು ಹಾಳು ಮಾಡಿದೆ. ಇನ್ನು ನಿಮ್ಮ ಸಂಗಾತಿ ಸುಳ್ಳು ಹೇಳುತ್ತಾರೆ ಎಂದು ನಿಮಗೆ ಅನಿಸಿದರೆ ಅದನ್ನು ಈ ಸಿಂಪಲ್ ಟ್ರಿಕ್ಸ್  ಮೂಲಕ ಕಂಡುಹಿಡಿಯಿರಿ

1 /6

ವಾದ ಮಾಡುವುದು: ನಿಮ್ಮ ಸಂಗಾತಿ ಸುಳ್ಳು ಹೇಳುತ್ತಿದ್ದರೆ ಅವರು ಮಾತಿಗೆ ಮಾತು ಬೆಳೆಯುವಂತೆ ಮಾಡುತ್ತಾರೆ. ಪ್ರತಿಯೊಂದು ವಿಚಾರದಲ್ಲೂ ವಾದ ಮಾಡುತ್ತಾರೆ.

2 /6

ಮೊಬೈಲ್ ಹೆಚ್ಚು ಬಳಕೆ: ಕೆಲ ಜನರು ತಮ್ಮ ತಪ್ಪು, ಸುಳ್ಳುಗಳನ್ನು ಮುಚ್ಚಿಡಲು ಮುಖ ಕೊಟ್ಟು ಮಾತನಾಡುವುದಿಲ್ಲ. ಅಷ್ಟೇ ಅಲ್ಲದೆ, ಹೆಚ್ಚಾಗಿ ಮೊಬೈಲ್ ಬಳಕೆ ಮಾಡುತ್ತಾರೆ. ಜನರೊಂದಿಗೆ ಅವರು ಮಾತನಾಡುವುದನ್ನು ಕಡಿಮೆ ಮಾಡುತ್ತಾರೆ

3 /6

ಜಗಳ ಮಾಡುವುದು: ಮಾತಿಗೆ ಮುಂಚೆ ನಿಮ್ಮ ಸಂಗಾತಿ ಜಗಳ ಮಾಡುತ್ತಿದ್ದರೆ, ಅವರು ಖಂಡಿತವಾಗಿಯೂ ನಿಮ್ಮಿಂದ ಏನನ್ನೋ ಮುಚ್ಚಿಡುತ್ತಿದ್ದಾರೆ ಎಂದರ್ಥ ನೀಡುತ್ತದೆ.

4 /6

ಗಮನ ನೀಡದಿರುವುದು: ನೀವು ಮಾತನಾಡುತ್ತಿದ್ದರೂ ಸಹ ಬೇರೆಡೆಗೆ ಗಮನ ಕೊಡುತ್ತಿದ್ದರೆ, ವಿಭಿನ್ನ ವರ್ತನೆ ತೋರಿದರೆ ಅವರು ನಿಮ್ಮ ಬಳಿ ಸುಳ್ಳು ಹೇಳುತ್ತಿದ್ದಾರೆ ಎನ್ನಬಹುದು.

5 /6

ಕೋಪ ಮಾಡಿಕೊಳ್ಳುವುದು: ಪ್ರತೀ ಮಾತಿನಲ್ಲೂ ಕೊಂಕು ಕಂಡುಹುಡುಕಿ ನಿಮ್ಮ ಜೊತೆ ಜಗಳವಾಡುತ್ತಿದ್ದರೆ, ಕೋಪ ಮಾಡಿಕೊಳ್ಳುತ್ತಿದ್ದರೆ ಅವರ ವರ್ತನೆಯಲ್ಲಿ ಬದಲಾವಣೆಯಾಗಿದೆ ಎನ್ನಬಹುದು.

6 /6

ಮಾತನ್ನು ಬೇರೆಡೆಗೆ ಸೆಳೆಯುವುದು: ನೀವು ಯಾವುದೋ ವಿಷಯದ ಬಗ್ಗೆ ಚರ್ಚಿಸುತ್ತಿದ್ದರೂ ಸಹ ಮಧ್ಯೆ ಪ್ರವೇಶಿಸಿ, ವಿಷಯವನ್ನು ಬೇರೆಡೆಗೆ ಕೊಂಡೊಯ್ಯುವುದು