Relationship Remedies - ಯಾವುದೇ ಸಂಬಂಧವಿರಲಿ ಪ್ರೀತಿ ಇದ್ದೆಡೆ ಜಗಳ ಕೂಡ ಕಾಮನ್ ಆಗಿರುತ್ತದೆ. ಆದ್ರೆ ಜಗಳ ಸಂಬಂಧ ಮುರಿಯುವ ಹಂತಕ್ಕೆ ಹೋಗಬಾರದು. ಅದರಿಂದ ಪಾರಾಗಲು ಕೆಲ ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಆವಶ್ಯಕ.
Relationship Suggestion - ನಾವು ಯಾವುದೇ ಒಂದು ಸಂಬಂಧದಲ್ಲಿ (Couples) ಇರುವಾಗ ಸಣ್ಣ-ಪುಟ್ಟ ಜಗಳಗಳು (Small Conflicts) ಸಂಭವಿಸುವುದು ಸಾಮಾನ್ಯ ಸಂಗತಿ. ಆದರೆ, ಕೆಲವೊಮ್ಮೆ ಈ ಜಗಳಗಳು ತೀರಾ ಕೆಟ್ಟ ಹಂತಕ್ಕೆ ತಲುಪುತ್ತವೆ. ಇದರಿಂದ ಸಂಬಂಧ ಹಾಳಾಗುವ ಅಥವಾ ಕೊನೆಗೊಳ್ಳುವ ಸಾಧ್ಯತೆ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಜಗಳ ಇಂತಹ ಕೆಟ್ಟ ಹಂತಕ್ಕೆ ತಲುಪದಿರಲು ಏನು ಮಾಡಬೇಕು ಎಂಬುದಕ್ಕೆ ಕೆಲ ಸಲಹೆಗಳು ಇಲ್ಲಿವೆ.
ಇದನ್ನೂ ಓದಿ-ಈ ದೇಶದಲ್ಲಿ ಕೇವಲ 40 ನಿಮಿಷಗಳವರೆಗೆ ಮಾತ್ರ ಕತ್ತಲಾಗುತ್ತದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. ಸುಮ್ನೆ ಒಂದು ಬ್ರೇಕ್ ತಗೊಳ್ಳಿ - ಯಾವುದೇ ಜಗಳದ ಸಮಯದಲ್ಲಿ ವಿಷಯ ಕೈ ತಪ್ಪುತ್ತಿವೆ ಮತ್ತು ಕೆಟ್ಟ ಮಟ್ಟವನ್ನು ತಲುಪುತ್ತಿದೆ ಅಂತ ನಿಮಗೆ ಅನ್ನಿಸಲು ಆರಂಭಿಸಿದ ನಂತರ ವಿರಾಮ ತೆಗೆದುಕೊಳ್ಳಿ. ಕೋಣೆಯಿಂದ ಹೊರನಡೆಯಿರಿ. ನೀರು ಕುಡಿಯಿರಿ . ಬೇರೆ ಕಡೆ ನೋಡಿ. ಆ ಬಿಸಿ ವಾತಾವರಣದಲ್ಲಿ, ನಿಮ್ಮ ಮೆದುಳಿನ ವಿಶ್ರಾಂತಿ ಬಟನ್ ಅನ್ನು ನೀವು ಒತ್ತಬೇಕಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ. ವಿಶ್ರಾಂತಿ ಬಟನ್ ಒತ್ತಿದ ನಂತರ ಅಥವಾ ವಿರಾಮ ತೆಗೆದುಕೊಂಡ ನಂತರ ನೀವು ಸ್ವಲ್ಪ ಸಮಯದ ನಂತರ ಮಾತನಾಡಲು ಪ್ರಾರಂಭಿಸಿದಾಗ, ನೀವು ಮತ್ತು ನಿಮ್ಮ ಸಂಗಾತಿ ಇಬ್ಬರೂ ಹೊಸ ದೃಷ್ಟಿಕೋನದಿಂದ ವಿಷಯಗಳನ್ನು ನೋಡಲು ಸಮಯವನ್ನು ಹೊಂದುವಿರಿ.
2. ನಿಮ್ಮ ಪಾಲಿನ ತಪ್ಪನ್ನು ಒಪ್ಪಿಕೊಳ್ಳಿ - ಜಗಳದ ಸಮಯದಲ್ಲಿ, ಯಾವಾಗಲೂ ನೀವು /ಅವಳು ಏನು ಮಾಡಿದ/ಳು ಎಂಬ ವಿಷಯ ಒಂದೇ ಇರಬಾರದು. ಅದು ನಿಮ್ಮ ವಿಷಯವೇ ಆಗಿರಲಿ ಅಥವಾ ಅವಳ ವಿಷಯವೇ ಆಗಿರಲಿ ಇಬ್ಬರು ತಮ್ಮ ತಮ್ಮ ತಪ್ಪುಗಳನ್ನು ಅರಿತು ಸಂಗಾತಿಗೆ ನೋಯಿಸಿದ್ದರೆ ತಕ್ಷಣ ಕ್ಷಮೆಯಾಚಿಸಬೇಕು. ಇಂತಹ ಕ್ಷಮೆಯಾಚನೆಗಳು ಸಾಮಾನ್ಯವಾಗಿ ಸಂಬಂಧಗಳ ಆಳದಲ್ಲಿ ಸುಂದರವಾದ ಮುಲಾಮುಗಳಾಗಿ ಕಾರ್ಯನಿರ್ವಹಿಸುತ್ತವೆ. ಏಕೆಂದರೆ, ನೀವಿಬ್ಬರು ನಿಮ್ಮ ಸಂಬಂಧವನ್ನು ಪ್ರೀತಿಸುತ್ತೀರಿ ಅಲ್ಲವೇ?
3. ಕಂಪ್ಲೀಟ್ ಮಾತನ್ನಾಡಿ - ಯಾವುದೇ ಒಂದು ದಿನ ನಿಮಗೆ ಮತ್ತು ನಿಮ್ಮ ಸಂಗಾತಿಯ ನಡುವೆ ಜಗಳವಾಗಿದೆ ಎಂದಿಟ್ಟುಕೊಳ್ಳಿ. ಇಬ್ಬರು ಪರಸ್ಪರ ಕೇಳುವ ಮನಸ್ಥಿತಿಯಲ್ಲಿಲ್ಲ. ಇಂತಹ ಸ್ಥಿತಿಗಳು ದಿನದ ಕೆಲ ಗಂಟೆಗಳನ್ನು ದಾಟಿ ಉಳಿಯಬಾರದು. ರಾತ್ರಿ ಕಿರಿಕಿರಿ ಇಲ್ಲದೆ ಮಲಗಲು, ಮಲಗುವ ಮುನ್ನ ನೀವು ನಿಮ್ಮ ನಡುವೆ ಇರುವ ದೂರುಗಳಿಗೆ ಅಂತ್ಯಹಾಡಬೇಕು. ಹಲವು ದಿನಗಳವರೆಗೆ ಒಂದೇ ವಿಷಯವನ್ನು ಎಳೆದಾಡುವುದು ಸಂಗಾತಿಯ ಜೊತೆಗಿನ ನಿಮ್ಮ ಸಂಬಂಧದಲ್ಲಿ ಅಂತರಕ್ಕೆ ಕಾರಣವಾಗುತ್ತದೆ.
4. ಮುದ್ದಾದ ಅಪ್ಪುಗೆ - ಪ್ರತಿಯೊಂದು ಜಗಳದಲ್ಲಿ ನಿಮ್ಮಲಿರುವ ಅಹಂ ಅನ್ನು ಮುಂದಕ್ಕೆ ತರಬೇಡಿ. ಯಾವುದೇ ಜಗಳವನ್ನು ತರ್ಕದಿಂದ ಗೆಲ್ಲಲು ನೀವು ಸಾಧ್ಯವಿಲ್ಲ. ಹಲವು ಬಾರಿ ಜಗಳ ಭಾವನೆಗಳು ಹಾಗೂ ಆತ್ಮೀಯತೆಯಿಂದ ಕೂಡ ನಿವಾರಣೆಯಾಗುತ್ತದೆ. ಇದಲ್ಲದೆ ನಿಮ್ಮ ಜಗಳಕ್ಕೆ ಕಾರಣ ಎಂದು ಎಂಬುದನ್ನೂ ಕೂಡ ಅರಿತುಕೊಳ್ಳಿ. ವಿಷಯ ಅಥವಾ ಕಾರಣದಿಂದ ದೂರಾಗಿದ್ದಲ್ಲಿ, ತಡಮಾಡದೆ ಅದನ್ನು ಮೊದಲು ಮಾಡಿ.
5. ಜಗಳವಾಡುವುದಕ್ಕು ಒಂದು ಪದ್ಧತಿ ಇರಲಿ - ಯಾವುದೇ ಸಂಗಾತಿಗಳ ನಡುವೆ ಜಗಳವೇ ನಡೆದಿಲ್ಲ ಎಂಬುದು ಸಾಧ್ಯವೇ ಇಲ್ಲ. ಒಂದು ವೇಳೆ ನಡೆಯುತ್ತಿದ್ದಲ್ಲಿ, ಕಾರಣವಿಲ್ಲದೆ ಅದನ್ನು ಎಳೆದಾಡದೆ, ನಿಮ್ಮ ಮಧ್ಯ ಏರ್ಪಟ್ಟಿರುವ ಪಾಯಿಂಟ್ಸ್ ಗಳನ್ನು ಕ್ಲಿಯರ್ ಮಾಡಿಕೊಳ್ಳಿ. ಅಂದರೆ ನಿಮ್ಮ ಅನಿಸಿಕೆ ಏನು, ನೀವು ಯಾವ ಕಾರಣಕ್ಕಾಗಿ ಅಸಮಾಧಾನಗೊಂಡಿರುವಿರಿ ಇತ್ಯಾದಿ. ಜಗಳವಾಡಲು ಆರಂಭಿಸುವ ಮುನ್ನ ಇದಕ್ಕಾಗಿ 15-20 ನಿಮಿಷಗಳ ಸಿದ್ಧತೆ ಮಾಡಿಕೊಳ್ಳಬೇಕಾದರೂ ಅದನ್ನು ಮಾಡಿ. ಅದರಲ್ಲಿ ಯಾವುದೇ ತಪ್ಪು ಇಲ್ಲ. ಏಕೆಂದರೆ ಜಗಳ ದೀರ್ಘಾವಧಿಗೆ ಎಳೆಯಬಾರದು ಅಷ್ಟೇ.