ಶನಿಯು ಕುಂಭ ರಾಶಿಯ ಅಧಿಪತಿಯಾಗಿದ್ದು, ಅದರಲ್ಲಿ ಶುಕ್ರನ ಪ್ರವೇಶವು ಬಹಳ ಮಹತ್ವ ಪಡೆದಿದೆ.
ಬೆಂಗಳೂರು : ಪ್ರೀತಿ, ಸೌಂದರ್ಯ, ಸಾಂಸಾರಿಕ ಸಂತೋಷ ನೀಡುವ ಶುಕ್ರ ಗ್ರಹವು ಇಂದು ತನ್ನ ರಾಶಿಯನ್ನು ಬದಲಿಸಿ ಕುಂಭ ರಾಶಿಯನ್ನು ಪ್ರವೇಶಿಸಿದೆ. ಶನಿಯು ಕುಂಭ ರಾಶಿಯ ಅಧಿಪತಿಯಾಗಿದ್ದು, ಅದರಲ್ಲಿ ಶುಕ್ರನ ಪ್ರವೇಶವು ಬಹಳ ಮಹತ್ವ ಪಡೆದಿದೆ. ಈ ಬದಲಾವಣೆಯ ಪರಿಣಾಮವು ಎಲ್ಲಾ 12 ರಾಶಿಗಳ ಜನರ ಮೇಲೆ ಬೀರಲಿದೆ. ಏಪ್ರಿಲ್ 27 ರವರೆಗೆ ಶುಕ್ರ ಈ ಸ್ಥಾನದಲ್ಲಿರುತ್ತಾನೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಶುಕ್ರನ ರಾಶಿಯ ಬದಲಾವಣೆಯು ಮೇಷ ರಾಶಿಯವರಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ. ಈ ಜನರು ಆಸ್ತಿಯಿಂದ ಲಾಭ ಪಡೆಯುತ್ತಾರೆ. ನೀವು ಕಾರನ್ನು ಖರೀದಿಸಬಹುದು. ಸ್ಥಗಿತಗೊಂಡ ಕೆಲಸಗಳು ಪ್ರಾರಂಭವಾಗುತ್ತವೆ.
ವೃಷಭ ರಾಶಿಯವರಿಗೆ ಈ ಬಾರಿ ಸ್ಥಾನಮಾನ, ಹಣ, ಪ್ರತಿಷ್ಠೆ ಎಲ್ಲವೂ ಹೆಚ್ಚಲಿದೆ. ಉದ್ಯೋಗ ಪಡೆಯಲು ಅಥವಾ ವಿದೇಶದಲ್ಲಿ ನೆಲೆಸಲು ಪ್ರಯತ್ನಿಸುತ್ತಿದ್ದವರು ಈಗ ಯಶಸ್ವಿಯಾಗುತ್ತಾರೆ. ಒಂದರ ನಂತರ ಒಂದರಂತೆ ಯಶಸ್ಸು ಸಿಗುತ್ತದೆ.
ಕುಂಭ ರಾಶಿಯಲ್ಲಿ ಶುಕ್ರನ ಪ್ರವೇಶವು ಮಿಥುನ ರಾಶಿಯವರಿಗೆ ಯಶಸ್ಸನ್ನು ನೀಡುತ್ತದೆ. ಅವರು ತಮ್ಮ ಶ್ರಮಕ್ಕೆ ಸಂಪೂರ್ಣ ಫಲವನ್ನು ಪಡೆಯುತ್ತಾರೆ. ಪರೀಕ್ಷೆ-ಸಂದರ್ಶನದಲ್ಲಿ ಉತ್ತೀರ್ಣರಾಗಲು ಎಲ್ಲಾ ಅವಕಾಶಗಳಿವೆ.
ಶುಕ್ರನ ರಾಶಿಚಕ್ರದ ಬದಲಾವಣೆಯು ತುಲಾ ರಾಶಿಯವರಿಗೆ ಲಾಭದಾಯಕವಾಗಿರುತ್ತದೆ. ಸಂಗಾತಿಯೊಂದಿಗಿನ ಸಂಬಂಧವು ಗಾಢವಾಗುತ್ತದೆ. ಪ್ರೇಮವಿವಾಹವಾಗಲು ಬಯಸುವವರಿಗೆ ಇದು ಉತ್ತಮ ಸಮಯ.
ಕುಂಭ ರಾಶಿಯಲ್ಲಿ ಶುಕ್ರನ ಪ್ರವೇಶದಿಂದ ಮಕರ ರಾಶಿಯವರಿಗೆ ಅನುಕೂಲವಾಗಲಿದೆ. ಇದು ಅವರ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ವಸ್ತು ಸೌಕರ್ಯಗಳು ಹೆಚ್ಚಾಗಲಿವೆ. ಕೆಲವರಿಗೆ ಮದುವೆ ನಿಶ್ಚಯವಾಗಬಹುದು.
ಶುಕ್ರನು ಕುಂಭ ರಾಶಿಯನ್ನೇ ಪ್ರವೇಶಿಸುತ್ತಿರುವುದರಿಂದ ಈ ರಾಶಿಯ ಜನರ ಮೇಲೆ ಅತಿ ಹೆಚ್ಚು ಪ್ರಭಾವ ಬೀರುತ್ತದೆ. ಈ ರಾಶಿಯವರಿಗೆ ಶುಕ್ರ ಸಂಕ್ರಮವು ತುಂಬಾ ಶುಭಕರವಾಗಿರುತ್ತದೆ. ಉದ್ಯೋಗವಿರಲಿ, ವ್ಯ್ವಹಾರವಿರಲಿ ಎರಡರಲ್ಲೂ ಪ್ರಗತಿ ಸಾಧಿಸುವ ಅವಕಾಶವಿರುತ್ತದೆ. (ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ನಂಬಿಕೆ ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)