2019 ರಲ್ಲಿ ಚಂದ್ರಶೇಖರನ್ ವೇತನವು 65 ಕೋಟಿ ರೂಪಾಯಿಗಳಾಗಿದ್ದು, 2021-2022 ರಲ್ಲಿ 109 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.
N Chandrasekaran Life Journey : ದೇಶದ ಅತಿದೊಡ್ಡ ಉದ್ಯಮ ಸಮೂಹವಾದ ಟಾಟಾ ಗ್ರೂಪ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದವರು ಎನ್ ಚಂದ್ರಶೇಖರನ್.ಟಿಸಿಎಸ್‌ನಲ್ಲಿ ಕೆಲಸ ಮಾಡುವ ಮೂಲಕ ನಡವಳಿಕೆ ಮತ್ತು ಪರಿಶ್ರಮದ ಆಧಾರದ ಮೇಲೆ,ರತನ್ ಟಾಟಾ ಅವರ ವಿಶೇಷ ವ್ಯಕ್ತಿಗಳಲ್ಲಿ ಸಾಲಿನಲ್ಲಿ ನಿಂತು ಕೊಂಡರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ರೈತ ಕುಟುಂಬದಲ್ಲಿ ಹುಟ್ಟಿದ ಇವರು ಹೊಲ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದವರು. ಬಡ ಕುಟುಂಬದ ಈ ವ್ಯಕ್ತಿ ಒಂದು ದಿನ ಏಷ್ಯಾದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ನಿವಾಸದ ಪಕ್ಕದಲ್ಲಿಯೇ ಬಂಗಲೆ ಖರೀದಿಸುವ ಮಟ್ಟಕ್ಕೆ ಬೆಳೆಯುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ.
ದೇಶದ ಅತಿದೊಡ್ಡ ಉದ್ಯಮ ಸಮೂಹವಾದ ಟಾಟಾ ಗ್ರೂಪ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದವರು ಎನ್ ಚಂದ್ರಶೇಖರನ್.ಟಿಸಿಎಸ್‌ನಲ್ಲಿ ಕೆಲಸ ಮಾಡುವ ಮೂಲಕ ನಡವಳಿಕೆ ಮತ್ತು ಪರಿಶ್ರಮದ ಆಧಾರದ ಮೇಲೆ,ರತನ್ ಟಾಟಾ ಅವರ ವಿಶೇಷ ವ್ಯಕ್ತಿಗಳಲ್ಲಿ ಸಾಲಿನಲ್ಲಿ ನಿಂತು ಕೊಂಡರು.
ಇಲ್ಲಿಂದ ಅವರ ಜೀವನದ ದಿಕ್ಕೇ ಬದಲಾಯಿತು. ಟಾಟಾ ಗ್ರೂಪ್ ನೀಡಿದ ದೊಡ್ಡ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದ ನಂತರ, ಅವರ ವೇತನದಲ್ಲಿ ಕೂಡಾ ದೊಡ್ಡ ಮಟ್ಟದ ಜಂಪ್ ಸಿಕ್ಕಿತು. ಇಂದು ಅವರು ಮತ್ತು ಅವರ ಕುಟುಂಬವು ಆಂಟಿಲಿಯಾ ಪಕ್ಕದಲ್ಲಿಯೇ ವಾಸಿಸುತ್ತಿದ್ದಾರೆ.
ವ್ಯಾಪಾರ ಜಗತ್ತಿನಲ್ಲಿ ಚಂದ್ರಶೇಖರನ್ ಅವರನ್ನು ಪ್ರೀತಿಯಿಂದ 'ಚಂದ್ರ' ಎಂದು ಕರೆಯುತ್ತಾರೆ.ತಮಿಳುನಾಡಿನ ಮೋಹನೂರಿನಲ್ಲಿ ಜನಿಸಿದ ಅವರ ಪೋಷಕರು ವೃತ್ತಿಯಲ್ಲಿ ಕೃಷಿಕರು. ಹಾಗಾಗಿ ಆರಂಭಿಕ ಶಿಕ್ಷಣ ಪೂರೈಸಿದ್ದು ಸರ್ಕಾರಿ ಶಾಲೆಯಲ್ಲಿ. ನಂತರ ಕೊಯಮತ್ತೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಧ್ಯಯನ.ಇದಾದ ನಂತರ ತಿರುಚಿರಾಪಳ್ಳಿಯ ಪ್ರಾದೇಶಿಕ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಂಸಿಎ ಮಾಡಿದರು.
ಚಂದ್ರಶೇಖರನ್ ಮೊದಲಿನಿಂದಲೂ ತುಂಬಾ ಕಠಿಣ ಪರಿಶ್ರಮ ಮತ್ತು ಬುದ್ಧಿವಂತರಾಗಿದ್ದರು.ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ನಲ್ಲಿ ಇಂಟರ್ನ್ ಆಗಿ ತಮ್ಮ ಕೆಲಸವನ್ನು ಪ್ರಾರಂಭಿಸಿದ ಇವರು ಇಂದು TCS ನ CEO ಪಟ್ಟಕ್ಕೆ ಏರಿದ್ದಾರೆ.
ಟಾಟಾ ಸನ್ಸ್ ಜವಾಬ್ದಾರಿಯನ್ನು ತೊರೆಯಲು ರತನ್ ಟಾಟಾ ನಿರ್ಧರಿಸಿದಾಗ, ಚಂದ್ರಶೇಖರನ್ ಅವರನ್ನು ಕಂಪನಿಯ ಅಧ್ಯಕ್ಷರನ್ನಾಗಿ ಮಾಡಿದರು.ರತನ್ ಟಾಟಾ ಅವರನ್ನು ಹೆಚ್ಚು ನಂಬಿರುವ ವ್ಯಕ್ತಿ ಚಂದ್ರ ಶೇಖರನ್ ಆಗಿರುವುದರಿಂದ ಈ ಜವಾಬ್ದಾರಿಯನ್ನು ನೀಡಲಾಗಿದೆ.
2019 ರಲ್ಲಿ ಚಂದ್ರಶೇಖರನ್ ವೇತನವು 65 ಕೋಟಿ ರೂಪಾಯಿಗಳಾಗಿದ್ದು, 2021-2022 ರಲ್ಲಿ 109 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.2020 ರಲ್ಲಿ ಅವರು ಮುಂಬೈನಲ್ಲಿ 98 ಕೋಟಿ ರೂಪಾಯಿ ಮೌಲ್ಯದ ದೊಡ್ಡ ಫ್ಲಾಟ್ ಖರೀದಿಸಿದರು.ಈ ಫ್ಲಾಟ್ ಮುಖೇಶ್ ಅಂಬಾನಿ ಮನೆ ಆಂಟಿಲಿಯಾ ಬಳಿ ಇದೆ.