ಇತ್ತೀಚಿನ ದಿನಗಳಲ್ಲಿ ಡೇಟಾ ಪ್ರೈವಿಸಿಗೆ ಸಂಬಂಧಪಟ್ಟಂತೆ ಚರ್ಚೆಗಳು ಎಲ್ಲೆಂದರಲ್ಲಿ ನಡೆಯುತ್ತಿದೆ. ಯಾವಾಗ ವ್ಯಾಟ್ಸ್ ಆಪ್ ಪ್ರೈವೆಸಿ ಪಾಲಿಸಿ ಬದಲಾಯಿಸುವ ಬಗ್ಗೆ ಹೇಳಿತ್ತೋ ಜನತೆ ಕಳವಳಗೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಡೇಟಾ ಪ್ರೈವಿಸಿಗೆ ಸಂಬಂಧಪಟ್ಟಂತೆ ಚರ್ಚೆಗಳು ಎಲ್ಲೆಂದರಲ್ಲಿ ನಡೆಯುತ್ತಿದೆ. ಯಾವಾಗ ವ್ಯಾಟ್ಸ್ ಆಪ್ (WhatsApp) ಪ್ರೈವೆಸಿ ಪಾಲಿಸಿ ಬದಲಾಯಿಸುವ ಬಗ್ಗೆ ಹೇಳಿತ್ತೋ ಜನತೆ ಕಳವಳಗೊಂಡಿದ್ದಾರೆ. ಅಲ್ಲದೆ ಡೇಟಾವನ್ನು ಫೇಸ್ ಬುಕ್ (Facebook) ಜೊತೆ ಹಂಚಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಕೂಡಾ ಚಿಂತೆಗೊಳಗಾಗಿದ್ದರು. ಆದರೆ ಈಗ ಫೇಸ್ ಬುಕ್ ನಿಮ್ಮ ಡೇಟಾವನ್ನು (Data) ತೆಗೆದುಕೊಳ್ಳದಂತೆ ಮಾಡುವುದು ಸಾಧ್ಯವಿದೆ. ಅದಕ್ಕಾಗಿ ನೀವು ಸಣ್ಣ ಕೆಲಸ ಮಾಡಬೇಕಾಗುತ್ತದೆ. ನಿಮ್ಮ ಕಾಂಟಾಕ್ಟ್ ಮತ್ತು ಡೇಟಾವನ್ನು ಫೇಸ್ ಬುಕ್ ತೆಗೆದುಕೊಳ್ಳದಂತೆ ಮಾಡಬೇಕಾದರೆ ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬ ಮಾಹಿತಿ ಇಲ್ಲಿದೆ..
ನಿಮಗೆ ತಿಳಿದಿರಬಹುದು ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂ ಪ್ ಗೆಲುವಿನ ಸಂದರ್ಭದಲ್ಲಿ ಫೇಸ್ ಬುಕ್ ಬಳಕೆದಾರರ ಡೇಟಾವನ್ನು ಬಳಸಲಾಗಿತ್ತು. ಕೇಂಬ್ರಿಡ್ಜ್ ಅನಾಲಿಟಿಕಾ ಪ್ರಕರಣದಲ್ಲಿಯೂ ಹೀಗೇ ಆಗಿತ್ತು..
ನಿಮ್ಮ ಮೊಬೈಲ್ ಫೋನ್ನಲ್ಲಿ off-Facebook activity-tracking feature ಅನ್ನುಸಕ್ರಿಯಗೊಳಿಸಲಾಗಿರುತ್ತದೆ. ಅದರ ಸಹಾಯದಿಂದ, ನಿಮ್ಮ ಮೊಬೈಲ್ ಫೋನ್‌ನಲ್ಲಿರುವ ವೆಬ್‌ಸೈಟ್‌ಗಳು ಮತ್ತು ಇತರ ಅಪ್ಲಿಕೇಶನ್‌ಗಳ ಮೇಲೆ ಫೇಸ್‌ಬುಕ್ ನಿಗಾ ಇಟ್ಟಿರುತ್ತದೆ.
ನಿಮ್ಮ ಮೊಬೈಲ್ ಫೋನ್ ಮತ್ತು ಡೆಸ್ಕ್ ಟಾಪ್ ನಿಂದ ಫೇಸ್‌ಬುಕ್ ಅನೇಕ ಪ್ರಮುಖ ಡೇಟಾವನ್ನು ತೆಗೆದುಕೊಳ್ಳುತ್ತದೆ. ಉದಾಹರಣೆಗೆ, ಇತರ ಅಪ್ಲಿಕೇಶನ್‌ಗಳಿಂದ ಖರೀದಿಸಿದ ಸರಕುಗಳ ವಿವರಗಳು, ಕಾರ್ಟ್‌ನಲ್ಲಿರುವ ವಸ್ತುಗಳು ಮತ್ತು ನೀವು ಸರ್ಚ್ ಮಾಡಿರುವ ವಿಷಯಗಳು ಎಲ್ಲದರ ಬಗ್ಗೆಯೂ ಫೇಸ್ ಬುಕ್ ಡೇಟಾವನ್ನು ತೆಗೆದುಕೊಳ್ಳುತ್ತದೆ. ಇದಲ್ಲದೆ, ನಿಮ್ಮ ಸಂಪರ್ಕಗಳು, ಜಾಹೀರಾತುಗಳು ಮತ್ತು ಸ್ಥಳದ ಡೇಟಾವನ್ನು ಕೂಡಾ ಪರಿಶೀಲಿಸುತ್ತಿರುತ್ತದೆ. ನಿಮ್ಮ ಮನೆಯ ವಿಳಾಸ ಯಾವುದು ಎನ್ನುವುದು ಕೂಡಾ ಫೇಸ್‌ಬುಕ್‌ಗೆ ಗೊತ್ತಿರುತ್ತದೆ.
ಮೊದಲು ಫೇಸ್‌ಬುಕ್ ಅಪ್ಲಿಕೇಶನ್ಗೆ ಹೋಗಿ. . ಈಗ ಇಲ್ಲಿ Option Menu ಗೆ ಹೋಗಿ. ಇಲ್ಲಿ Settings and Privacy ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಈಗ Permissions ಟ್ಯಾಬ್ ತೆರೆಯಿರಿ. ಇಲ್ಲಿ Refuse permissions for all settings ಅನ್ನು ಆಯ್ಕೆಮಾಡಿ.
ನಿಮ್ಮ ಫೇಸ್‌ಬುಕ್ ಅಪ್ಲಿಕೇಶನ್ ಸೆಟ್ಟಿಂಗ್‌ಗಳಲ್ಲಿ ಹ್ಯಾಂಬರ್ಗರ್ (hamburger )ಐಕಾನ್ ಕ್ಲಿಕ್ ಮಾಡಿ. ಇಲ್ಲಿ Settings and Privacy ತೆರೆಯಿರಿ. ಈಗ ಇಲ್ಲಿ off-Facebook Activity ಟ್ಯಾಪ್ ಮಾಡಿ. ಇದಲ್ಲದೆ, Clear History ಯನ್ನು ಆಯ್ಕೆ ಮಾಡುವುದನ್ನು ಮರೆಯಬೇಡಿ.