ನೌಕರನ ಅನಾರೋಗ್ಯ, ಅಪಘಾತ ಅಥವಾ ಸ್ವಾಭಾವಿಕ ಸಾವು ಸಂಭವಿಸಿದರೆ, ನೌಕರನ ಪರವಾಗಿ ನಾಮಿನಿಗೆ ಈ ವಿಮೆಯ ಹಕ್ಕು ನೀಡಲಾಗುತ್ತದೆ.
ನವದೆಹಲಿ : ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಸದಸ್ಯರಿಗೆ 7 ಲಕ್ಷ ರೂಪಾಯಿಗಳ ಜೀವ ವಿಮೆ ನೀಡುತ್ತಿದೆ. ಅಂದರೆ, ಯಾರ ಪಿಎಫ್ (PF) ಅನ್ನು ಕಡಿತಗೊಳಿಸಲಾಗುತ್ತದೆಯೋ, ಅವರು ಎಂಪ್ಲಾಯಿಸ್ ಡಿಪಾಸಿಟ್ ಲಿಂಕ್ಡ್ ಇನ್ಶುರೆನ್ಸ್ ಸ್ಕೀಮ್ (EDLI) 1976 ರ ಅಡಿಯಲ್ಲಿ ಈ ವಿಮೆಯನ್ನು ಪಡೆಯಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಮೊದಲ ವಿಮಾ ಮೊತ್ತ 6 ಲಕ್ಷ ರೂಗಳಾಗಿತ್ತು. ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ನೇತೃತ್ವದ ಇಪಿಎಫ್ಒನ ಕೇಂದ್ರೀಯ ಟ್ರಸ್ಟಿಗಳ ಮಂಡಳಿ (CBT) 2020 ರ ಸೆಪ್ಟೆಂಬರ್ 9 ರಂದು ಈ ಮೊತ್ತವನ್ನು 7 ಲಕ್ಷ ರೂ.ಗೆ ಹೆಚ್ಚಿಸಿದೆ.
ನೌಕರನ ಅನಾರೋಗ್ಯ, ಅಪಘಾತ ಅಥವಾ ಸ್ವಾಭಾವಿಕ ಸಾವು ಸಂಭವಿಸಿದರೆ, ನೌಕರನ ಪರವಾಗಿ ನಾಮಿನಿಗೆ ಈ ವಿಮೆಯ ಹಕ್ಕು ನೀಡಲಾಗುತ್ತದೆ. ಅಂದರೆ, ಕೋವಿಡ್ -19 ಕಾರಣದಿಂದಾಗಿ ಒಬ್ಬ ಉದ್ಯೋಗಿ ಮೃತಪಟ್ಟರೆ, EDLI ಅಡಿಯಲ್ಲಿ ಮೃತ ನೌಕರನ ಕುಟುಂಬಕ್ಕೆ ವಿಮೆಯ 7 ಲಕ್ಷ ರೂಗಳನ್ನು ನೀಡಲಾಗುವುದು. ವಿಮೆ ಪಡೆಯಲು ಇಪಿಎಫ್ಒ ಯಾವುದೇ ಗಡುವನ್ನು ನಿಗದಿಪಡಿಸಿಲ್ಲ.
ಈ ಮೊತ್ತವನ್ನು ಪಿಎಫ್ ಖಾತೆದಾರರ ಸಾವಿನ ನಂತರ ನಾಮಿನಿಗೆ ನೀಡಲಾಗುತ್ತದೆ. ಒಂದು ವೇಳೆ , ನಾಮಿನಿ ಹಾಕಿರದಿದ್ದಲ್ಲಿ, ಮೃತ ನೌಕರನ ಸಂಗಾತಿ, ಅಥವಾ ಮಕ್ಕಳಿಗೆ ನೀಡಲಾಗುತ್ತದೆ.
ನೌಕರನು ಈ ವಿಮೆಗೆ ಯಾವುದೇ ಮೊತ್ತವನ್ನು ಪಾವತಿಸಬೇಕಾಗಿಲ್ಲ. ಅಂದರೆ, ಈ ವಿಮಾ ಕವರ್ ನೌಕರನಿಗೆ ಉಚಿತವಾಗಿ ಸಿಗಲಿದೆ. ಇದು ಪಿಎಫ್ ಖಾತೆಯೊಂದಿಗೆ ಲಿಂಕ್ ಆಗಿರುತ್ತದೆ. ಕೋವಿಡ್ -19 ರ ಕಾರಣದಿಂದಾಗಿ ಸಾವು ಸಂಭವಿಸಿದರೆ, ಆ ಸಂದರ್ಭದಲ್ಲಿಯೂ ವಿಮೆಯ ಲಾಭ ಸಿಗಲಿದೆ.
ಉದ್ಯೋಗಿಯ ಸಾವಿನ ನಂತರ, ನಾಮಿನಿಯು ಹಕ್ಕಿಗಾಗಿ ಫಾರ್ಮ್ -5 ಐಎಫ್ ಅನ್ನು ಸಲ್ಲಿಸಬೇಕಾಗುತ್ತದೆ. ಅದನ್ನು ಉದ್ಯೋಗದಾತ ಪರಿಶೀಲಿಸುತ್ತಾನೆ. ಉದ್ಯೋಗದಾತ ಲಭ್ಯವಿಲ್ಲದಿದ್ದರೆ, ಗೆಜೆಟೆಡ್ ಅಧಿಕಾರಿ, ಮ್ಯಾಜಿಸ್ಟ್ರೇಟ್, ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಪುರಸಭೆ ಅಥವಾ ಜಿಲ್ಲಾ ಸ್ಥಳೀಯ ಮಂಡಳಿ ಪರಿಶೀಲಿಸುತ್ತದೆ.