ಚಳಿಗಾಲದಲ್ಲಿ ಅಧಿಕ ಮೊಟ್ಟೆ ಸೇವನೆಯಿಂದ ಆರೋಗ್ಯಕ್ಕೆ ಆಪತ್ತು

Winter Health: ಚಳಿಗಾಲದಲ್ಲಿ ಹೆಚ್ಚು ಮೊಟ್ಟೆ ಸೇವನೆಯಿಂದ ಉಂಟಾಗಬಹುದಾದ ಅಡ್ಡ ಪರಿಣಾಮಗಳ ಬಗ್ಗೆ ತಿಳಿಯಿರಿ.
 

Winter Health: ಮೊಟ್ಟೆಗಳು ಆರೋಗ್ಯಕ್ಕೆ ಒಳ್ಳೆಯದು. ಮೊಟ್ಟೆಯಲ್ಲಿ ಸಾಕಷ್ಟು ಪ್ರೋಟೀನ್ ಕಂಡು ಬರುತ್ತದೆ. ಇದಲ್ಲದೆ, ಇದರಲ್ಲಿ ಅನೇಕ ಉತ್ಕರ್ಷಣ ನಿರೋಧಕಗಳು, ವಿಟಮಿನ್ ಬಿ -12 ಸಹ ಇದೆ. ಆದರೆ, ಅತಿಯಾದರೆ ಯಾವುದೂ ಕೂಡ ಹಿತಕರವಲ್ಲ. ನಮ್ಮಲ್ಲಿ ಕೆಲವರು ಶೀತಕಾಲದಲ್ಲಿ ಹೆಚ್ಚು ಮೊಟ್ಟೆಗಳನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ, ಎಚ್ಚರ! ಚಳಿಗಾಲದಲ್ಲಿ ಅತಿಯಾದ ಮೊಟ್ಟೆ ಸೇವನೆ ನಿಮ್ಮ ಆರೋಗ್ಯಕ್ಕೆ ಆಪತ್ತನ್ನು ತರಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಬೇಧಿ: ಮೊಟ್ಟೆಯ ಹಳದಿ ಭಾಗವು ಅಧಿಕ ಕೊಲೆಸ್ಟ್ರಾಲ್ ಅನ್ನು ಹೊಂದಿರುತ್ತದೆ. ಹಾಗಾಗಿ, ಹೆಚ್ಚು ಮೊಟ್ಟೆ ಸೇವನೆಯಿಂದ ಹೊಟ್ಟೆ ನೋವು, ಲೂಸ್ ಮೋಷನ್ ಸಮಸ್ಯೆಯನ್ನು ಎದುರಿಸಬೇಕಾಗಬಹುದು.

2 /5

ಮಧುಮೇಹಿಗಳಿಗೆ ಅಪಾಯಕಾರಿ: ಸೂಪರ್‌ಫುಡ್ ಎಂದು ಪರಿಗಣಿಸಲಾಗಿರುವ ಮೊಟ್ಟೆ ಸೇವನೆಯಿಂದ ಬ್ಲಡ್ ಶುಗರ್ ಲೆವೆಲ್ ಹೆಚ್ಚಾಗುತ್ತದೆ. ಹಾಗಾಗಿ, ಮಧುಮೇಹಿಗಳು ಮಿತವಾಗಿ ಮೊಟ್ಟೆ ಸೇವಿಸುವುದು ಉತ್ತಮ.

3 /5

ಗ್ಯಾಸ್ಟ್ರಿಕ್:  ಕೆಲವರು ನಿತ್ಯ ಮೂರ್ನಾಲ್ಕು ಮೊಟ್ಟೆ ಜೊತೆಗೆ ಆಮ್ಲೆಟ್ ಅನ್ನು ತಿನ್ನುತ್ತಾರೆ. ಆದರೆ, ಇದು ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗಬಹುದು. ಮಾತ್ರವಲ್ಲ, ಇದು ಉದರ ಸಂಬಂಧಿತ ಇತರ ಸಮಸ್ಯೆಗಳನ್ನೂ ತಂದೊಡ್ಡಬಹುದು.

4 /5

ಹೃದಯಾಘಾತ:  ಹೆಚ್ಚು ಮೊಟ್ಟೆಗಳನ್ನು ತಿನ್ನುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ, ಹೃದಯಾಘಾತದ ಅಪಾಯವೂ ಹೆಚ್ಚು.

5 /5

ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ​​ಪ್ರಕಾರ, ಆರೋಗ್ಯವಂತ ಜನರು ದಿನಕ್ಕೆ ಎರಡು ಮೊಟ್ಟೆಗಳನ್ನು ಸೇವಿಸಬಹುದು. ಆದರೆ. ಅಧಿಕ ರಕ್ತದ ಕೊಲೆಸ್ಟ್ರಾಲ್ ಹೊಂದಿರುವವರು ನಿತ್ಯ ಒಂದಕ್ಕಿಂತ ಕಡಿಮೆ ಮೊಟ್ಟೆಯನ್ನು ತಿನ್ನಬೇಕು ಎಂದು ಹೇಳಲಾಗಿದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.