Health benefits of Coconut flower : ಅಧಿಕ ತೂಕ ಹೊಂದಿರುವ ಜನರು ತೆಂಗಿನಕಾಯಿಯನ್ನು ತಿನ್ನುವ ಮೂಲಕ ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಬಹಳ ವೇಗವಾಗಿ ಕಡಿಮೆ ಮಾಡಬಹುದು... ಅಷ್ಟೇ ಅಲ್ಲ... ಹೆಚ್ಚಿನ ಮಾಹಿತಿ ಈ ಕೆಳಗಿದೆ ನೋಡಿ...
ನಮ್ಮ ದೈನಂದಿನ ಆಹಾರದಲ್ಲಿ ತೆಂಗಿನಕಾಯಿಯನ್ನು ಸೇರಿಸುವುದರಿಂದ ಹಲವಾರು ಪ್ರಯೋಜನಗಳಿವೆ. ತೆಂಗಿನಕಾಯಿ ಮತ್ತು ಎಳನೀರು ಅನೇಕ ಉಪಯೋಗಗಳನ್ನು ಹೊಂದಿದೆ ಅಂತ ಎಲ್ಲಿರಗೂ ತಿಳಿದಿದೆ.. ಆದರೆ, ತೆಂಗಿನ ಹೂವು ತಿನ್ನುವುದರಿಂದ ಆಗುವ ಲಾಭಗಳನೇನು ಗೊತ್ತೆ...? ಇಲ್ಲಿವೆ ಇಂಟ್ರಸ್ಟಿಂಗ್ ವಿಚಾರಗಳು..
ತೆಂಗಿನ ಹೂವು ನಿಜವಾಗಿಯೂ ಹೂವಲ್ಲ, ತೆಂಗಿನಕಾಯಿಯ ಚಿಗುರು. ತೆಂಗಿನಕಾಯಿ ಮೊಳಕೆಯೊಡೆಯುವ ಈ ಭಾಗ ತಿನ್ನಲು ಸಿಹಿ ಮತ್ತು ಸ್ವಲ್ಪ ಉಪ್ಪು ಮಿಶ್ರಿತವಾಗಿರುತ್ತದೆ.. ಚಿಕ್ಕದಾಗಿ ಕಾಣುವ ಈ ತೆಂಗಿನ ಹೂವು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಇದರ ಔಷಧೀಯ ಗುಣಗಳನ್ನು ತಿಳಿದ್ರೆ, ಎಳನೀರು ಕುಡಿಯುವ ಬದಲು ನೀವು ಇದನ್ನೆ ತಿಂತೀರಾ..
ದೇವಾಲಯಗಳಂತಹ ಪವಿತ್ರ ಸ್ಥಳಗಳಲ್ಲಿ ತೆಂಗಿನಕಾಯಿ ಒಡೆಯುವಾಗ ತೆಂಗಿನಕಾಯಿಯಲ್ಲಿ ಹೂ ಬಂದರೆ ಅದನ್ನು ಶುಭ ಶಕುನವೆಂದು ಪರಿಗಣಿಸಲಾಗುತ್ತದೆ. ಅದೇ ರೀತಿ ಮಹಿಳೆಯರು ತೆಂಗಿನ ಹೂವು ತಿಂದರೆ ಸುಖ ಸಂಸಾರ, ಮದುವೆ ಭಾಗ್ಯ, ಉದ್ಯೋಗ ಇತ್ಯಾದಿ ಶುಭಕಾರ್ಯಗಳು ನಡೆಯುತ್ತವೆ ಎಂಬ ನಂಬಿಕೆಯಿದೆ. ತೆಂಗಿನ ಹೂವು ಗರ್ಭಿಣಿಯರಿಗೂ ತುಂಬಾ ಒಳ್ಳೆಯದು ಎನ್ನಲಾಗಿದೆ..
ತೆಂಗಿನ ಹೂವು ಸೋಡಿಯಂ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಖನಿಜಗಳು ಮತ್ತು ವಿಟಮಿನ್ ಇ ನಂತಹ ಪೋಷಕಾಂಶಗಳನ್ನು ಹೊಂದಿರುತ್ತದೆ. ಇದನ್ನು ತಿಂದರೆ ಗರ್ಭಿಣಿಯರಿಗೆ ಬೆನ್ನು ನೋವು ವಾಸಿಯಾಗುತ್ತದೆ. ಇದು ದೇಹವನ್ನು ಬಲಪಡಿಸುವುದು ಮಾತ್ರವಲ್ಲದೆ ದೇಹಕ್ಕೆ ರೋಗನಿರೋಧಕ ಶಕ್ತಿಯನ್ನು ನೀಡುತ್ತದೆ, ತೆಂಗಿನಕಾಯಿ ಹೃದ್ರೋಗವನ್ನು ಗುಣಪಡಿಸುತ್ತದೆ.
ಇದರಲ್ಲಿ ಫೈಬರ್ ಮತ್ತು ಪೊಟ್ಯಾಸಿಯಮ್ ಇರುವುದರಿಂದ ಹೃದಯಕ್ಕೆ ತುಂಬಾ ಒಳ್ಳೆಯದು. ಅಷ್ಟೇ ಅಲ್ಲ, ಅಧಿಕ ತೂಕ ಇರುವವರು ತೆಂಗಿನ ಹೂವನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಇದು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ ಮತ್ತು ಮೂತ್ರಪಿಂಡದ ಕಲ್ಲುಗಳ ರಚನೆಯನ್ನು ತಡೆಯುತ್ತದೆ.
ಆ್ಯಂಟಿಆಕ್ಸಿಡೆಂಟ್‌ಗಳು ಮುಖದ ಮೇಲಿನ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ತೆಂಗಿನ ಹೂವನ್ನು ಪ್ರತಿದಿನ ಸೇವಿಸುವುದರಿಂದ ಮಹಿಳೆಯರ ಋತುಚಕ್ರದ ಸಮಸ್ಯೆಯೂ ಪರಿಹಾರವಾಗುತ್ತದೆ. ಅಷ್ಟೇ ಅಲ್ಲ, ಇದು ಅತಿಸಾರ ಮತ್ತು ಭೇದಿಯಂತಹ ಹೊಟ್ಟೆಯ ಸಮಸ್ಯೆಗಳನ್ನು ಗುಣಪಡಿಸುತ್ತದೆ. ಬ್ಲೀಚಿಂಗ್ ಮಹಿಳೆಯರಿಗೆ ಬಹಳ ದೊಡ್ಡ ಸಮಸ್ಯೆಯಾಗಿದೆ. ತೆಂಗಿನ ಹೂವು ಈ ಸಮಸ್ಯೆಯನ್ನು ಹೋಗಲಾಡಿಸುತ್ತದೆ ಎಂಬುದು ಗಮನಾರ್ಹ
ತೆಂಗಿನ ಹೂವು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ. ತೆಂಗಿನ ಹೂವಿಗೆ ಕ್ಯಾನ್ಸರ್ ಕೋಶಗಳ ಮೇಲೆ ದಾಳಿ ಮಾಡಿ ನಾಶಪಡಿಸುವ ಶಕ್ತಿ ಇದೆ. ವರ್ಷಗಳಿಂದ ಥೈರಾಯ್ಡ್ ಸಮಸ್ಯೆ ಇದ್ದರೂ ತೆಂಗಿನಕಾಯಿ ಹೂವನ್ನು ಸೇವಿಸುತ್ತಾ ಬಂದರೆ ಥೈರಾಯ್ಡ್ ಸಮಸ್ಯೆ ಕಡಿಮೆಯಾಗುತ್ತದೆ.
ಅಲ್ಲದೆ ತೆಂಗಿನ ಹೂವು ಪುರುಷರಲ್ಲಿ ಪುರುಷತ್ವವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಒಂದು ತೆಂಗಿನಕಾಯಿ ರೂ.10ರಿಂದ ರೂ.15ಕ್ಕೆ ಮಾರಾಟವಾಗುತ್ತಿದೆ. ತೆಂಗಿನ ಹೂವು ಎಂದು 50 ರಿಂದ 70 ರೂ.ಗೆ ಮಾರಾಟ ಮಾಡುತ್ತಾರೆ. ತೆಂಗಿನ ಹೂವು ಹೆಚ್ಚಿನ ಪೌಷ್ಟಿಕಾಂಶದ ಕಾರಣದಿಂದ ಜನರು ಖರೀದಿಸಲು ಮತ್ತು ತಿನ್ನಲು ಇಷ್ಟಪಡುತ್ತಾರೆ.