Vegetables Rich in Vitamin C: ಉತ್ತಮ ಆರೋಗ್ಯಕ್ಕಾಗಿ ಹಣ್ಣು-ತರಕಾರಿಗಳ ಸೇವನೆ ಬಹಳ ಮುಖ್ಯ. ವಿಟಮಿನ್ ಸಿ ಸಮೃದ್ಧ ಆಹಾರಗಳ ಸೇವನೆಯಿಂದ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದರಿಂದ ಹಲವು ರೋಗಗಳ ವಿರುದ್ಧ ನಾವು ರಕ್ಷಣೆ ಪಡೆಯಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಇತರ ವಿಟಮಿನ್ ಗಳಂತೆ ವಿಟಮಿನ್ ಸಿ ನಮ್ಮ ದೇಹಕ್ಕೆ ಬೇಕಾದ ಅತ್ಯಗತ್ಯವಾದ ವಿಟಮಿನ್ ಆಗಿದೆ. ಕೆಲವು ಹಣ್ಣು ತರಕಾರಿಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇವುಗಳನ್ನು ಸೇವಿಸುವುದರಿಂದ ಕಾಲೋಚಿತ ರೋಗಗಳಿಂದ ರಕ್ಷಣೆ ಪಡೆಯಲು ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. ಈ ಫೋಟೋಗ್ಯಾಲರಿಯಲ್ಲಿ ವಿಟಮಿನ್ ಸಿ ಸಮೃದ್ಧ ಟಾಪ್ 5 ತರಕಾರಿಗಳ ಬಗ್ಗೆ ತಿಳಿಯೋಣ.
ದೊಡ್ಡ ಅಥವಾ ದಪ್ಪ ಮೆಣಸಿನಕಾಯಿಯಲ್ಲಿ ವಿಟಮಿನ್ ಸಿ ಹೆರಳವಾಗಿದೆ. ಇದನ್ನು ನಮ್ಮ ಆಹಾರದ ಭಾಗವಾಗಿಸುವುದರಿಂದ ಮೂಲೆ ಮತ್ತು ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ತುಂಬಾ ಪ್ರಯೋಜನಕಾರಿ ಆಗಿದೆ.
ಎಲ್ಲಾ ಋತುಮಾನಗಳಲ್ಲೂ ತುಂಬಾ ಸುಲಭವಾಗಿ ಲಭ್ಯವಿರುವ ತರಕಾರಿಗಳಲ್ಲಿ ಒಂದಾದ ಎಲೆಕೋಸು ಕೂಡ ವಿಟಮಿನ್ ಸಿ ಯ ಸಮೃದ್ಧ ಮೂಲವಾಗಿದೆ. ಇದರ ಸೇವನೆಯಿಂದ ದೇಹದ ಪ್ರತಿರಕ್ಷಣಾ ವ್ಯವಸ್ಥೆ ಬಲಗೊಳ್ಳುತ್ತದೆ.
ಬಹಳ ಸುಲಭವಾಗಿ ಮನೆಯಲ್ಲಿಯೇ ಬೆಳೆಸಬಹುದಾದ ಕೊತ್ತಂಬರಿ ಸೊಪ್ಪು ಸಹ ವಿಟಮಿನ್ ಸಿಯ ಅತ್ಯುತ್ತಮ ಮೂಲವಾಗಿದೆ. ಇದರ ಸೇವನೆಯಿಂದ ಹಲವು ಸೋಂಕುಗಳ ವಿರುದ್ಧ ಹೋರಾಡಲು ಸಹಕಾರಿ ಆಗಿದೆ.
ಬ್ರೊಕೊಲಿಯು ವಿಟಮಿನ್ ಸಿ, ವಿಟಮಿನ್ ಕೆ, ವಿಟಮಿನ್ ಎ ಮತ್ತು ಫೈಬರ್‌ನ ಉತ್ತಮ ಮೂಲವಾಗಿದ್ದು, ಇದನ್ನು ನಮ್ಮ ಡಯಟ್ ಭಾಗವಾಗಿಸುವುದರಿಂದ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿ ಆಗಿದೆ.
ಪ್ರತಿ ಮನೆಯ ಅಡುಗೆಮನೆಯಲ್ಲಿ ಬಹಳ ಸುಲಭವಾಗಿ ಲಭ್ಯವಿರುವ ನಿಂಬೆ ಹಣ್ಣಿನಲ್ಲಿ ನಮ್ಮ ದೈನಂದಿನ ಅವಶ್ಯಕತೆಯ ಶೇ. 51ರಷ್ಟು ವಿಟಮಿನ್ ಲಭ್ಯವಾಗಲಿದೆ. ನಿತ್ಯ ನಿಮ್ಮ ಆಹಾರದಲ್ಲಿ ನಿಂಬೆ ರಸವನ್ನು ಬಳಸುವುದರಿಂದ ರೋಗಗಳ ವಿರುದ್ಧ ಹೋರಾಡುವ ನಿಮ್ಮ ದೈಹಿಕ ಶಕ್ತಿ ಹೆಚ್ಚಾಗುತ್ತದೆ. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.