SBI Special Fixed Deposit: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 180 ದಿನಗಳ ಸ್ಥಿರ ಠೇವಣಿಯೊಂದಿಗೆ ಮೆಚ್ಯೂರಿಟಿಯಲ್ಲಿ 10 ಲಕ್ಷ ರೂ.ವನ್ನು ಠೇವಣಿ ಮಾಡುವ ಮೂಲಕ ಸಾಮಾನ್ಯ ನಾಗರಿಕರು ಒಟ್ಟು 10,29,804 ರೂ. ಪಡೆಯಬಹುದು.
SBI Special FD: ಕಡಿಮೆ ಸಮಯದ ಹೂಡಿಕೆ ಮಾಡಬೇಕು ಅಂದುಕೊಂಡಿದ್ದೀರಾ? ಹಾಗಿದ್ರೆ ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ. ಎಸ್‌ಬಿಐ ಬ್ಯಾಂಕ್ 444 ದಿನಗಳ ಸ್ಪೆಷಲ್ ಎಫ್‌ಡಿ ಯೋಜನೆ ನಿಮಗೆ ಸರಿಯಾದ ಆಯ್ಕೆ ಅನ್ನಬಹದು. ಈ ಯೋಜನೆಯ ಹೆಸರು ʼಅಮೃತ ವೃಷ್ಟಿ ಯೋಜನೆʼ. ಈ ಯೋಜನೆಯಡಿ ಸಾಮಾನ್ಯ ಜನರಿಗೆ 7.25% ಮತ್ತು ಹಿರಿಯ ನಾಗರಿಕರಿಗೆ 7.75% ಬಡ್ಡಿ ನೀಡಲಾಗುತ್ತಿದೆ. ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸಿದರೆ, ಇದೇ ಮಾರ್ಚ್ 31ರವರೆಗೆ ಮಾತ್ರ ಸಮಯವಿದೆ. ಈ ಯೋಜನೆಯಲ್ಲಿ ನೀವು 1,00,000 ರೂ.ನಿಂದ 5,00,000 ರೂ.ವರೆಗೆ ಹೂಡಿಕೆ ಮಾಡಿದರೆ ನಿಮಗೆ ಎಷ್ಟು ಲಾಭ ಸಿಗುತ್ತದೆ ಎಂಬುದರ ಮಾಹಿತಿಯನ್ನ ಇಂದು ನಾವು ನಿಮಗೆ ತಿಳಿಸಿಕೊಡಲಿದ್ದೇವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
1,00,000 ರೂ. ಹೂಡಿಕೆಯ ಮೇಲೆ ಹಿರಿಯ ನಾಗರಿಕರು 444 ದಿನಗಳಲ್ಲಿ 9,630 ರೂ. ಬಡ್ಡಿಯನ್ನು ಪಡೆಯುತ್ತಾರೆ. ಹೀಗಾಗಿ ಮೆಚ್ಯೂರಿಟಿ ಮೊತ್ತ 1,09,630 ರೂ. ಸಿಗುತ್ತದೆ. ಅದೇ ರೀತಿ ಸಾಮಾನ್ಯ ನಾಗರಿಕರು 9,280 ರೂ.ಗಳನ್ನು ಬಡ್ಡಿಯಾಗಿ ಪಡೆಯುತ್ತಾರೆ. ಹೀಗಾಗಿ ಮೆಚ್ಯೂರಿಟಿ ಮೊತ್ತ 1,09,280 ರೂ. ಆಗಿರುತ್ತೆ.
2,00,000 ರೂ. ಹೂಡಿಕೆಯ ಮೇಲೆ ಹಿರಿಯ ನಾಗರಿಕರು 444 ದಿನಗಳಲ್ಲಿ 19,574.08 ರೂ.ಗಳನ್ನು ಬಡ್ಡಿಯಾಗಿ ಪಡೆಯುತ್ತಾರೆ. ಹೀಗಾಗಿ ಮೆಚ್ಯೂರಿಟಿ ಮೊತ್ತ 2,195,74.08 ರೂ. ಆಗಿರುತ್ತದೆ. ಸಾಮಾನ್ಯ ನಾಗರಿಕರು 18,267.08 ರೂ.ಗಳನ್ನು ಬಡ್ಡಿಯಾಗಿ ಪಡೆಯುತ್ತಾರೆ. ಹೀಗಾಗಿ ಮೆಚ್ಯೂರಿಟಿ ಮೊತ್ತ 2,18,267.08 ರೂ. ಆಗಿರುತ್ತದೆ.
3,00,000 ರೂ. ಹೂಡಿಕೆಯ ಮೇಲೆ ಹಿರಿಯ ನಾಗರಿಕರು 444 ದಿನಗಳಲ್ಲಿ 29,361.13 ರೂ. ಬಡ್ಡಿಯನ್ನು ಪಡೆಯುತ್ತಾರೆ. ಹೀಗಾಗಿ ಮೆಚ್ಯೂರಿಟಿ ಮೊತ್ತ 3,29,361.13 ರೂ. ಆಗಿರುತ್ತದೆ. ಸಾಮಾನ್ಯ ನಾಗರಿಕರು 27,400.62 ರೂ.ಗಳನ್ನು ಬಡ್ಡಿಯಾಗಿ ಪಡೆಯುತ್ತಾರೆ. ಹೀಗಾಗಿ ಮೆಚ್ಯೂರಿಟಿ ಮೊತ್ತ 3,27,400.62 ರೂ. ಆಗಿರುತ್ತದೆ.
ಹಿರಿಯ ನಾಗರಿಕರು 444 ದಿನಗಳಲ್ಲಿ 39,148.17 ರೂ. ಬಡ್ಡಿಯನ್ನು ಪಡೆಯುತ್ತಾರೆ. ಹೀಗಾಗಿ ಮೆಚ್ಯೂರಿಟಿ ಮೊತ್ತ 4,39,148.17 ರೂ. ಆಗಿರುತ್ತದೆ. ಸಾಮಾನ್ಯ ನಾಗರಿಕರು 36,534.15 ರೂ.ಗಳನ್ನು ಬಡ್ಡಿಯಾಗಿ ಪಡೆಯುತ್ತಾರೆ. ಹೀಗಾಗಿ ಮೆಚ್ಯೂರಿಟಿ ಮೊತ್ತ 4,36,534.15 ರೂ. ಆಗಿರುತ್ತದೆ.
5,00,000 ಹೂಡಿಕೆಯ ಮೇಲೆ, ಹಿರಿಯ ನಾಗರಿಕರು 48935.21 ರೂ. ಬಡ್ಡಿ(7.75%)ಯನ್ನು ಪಡೆಯುತ್ತಾರೆ. ಮೆಚ್ಯೂರಿಟಿ ಮೊತ್ತವು 5,48,935.21 ರೂ. ಆಗಿರುತ್ತದೆ. ಸಾಮಾನ್ಯ ನಾಗರಿಕರು 7.25%ರಂತೆ 45,667.69 ರೂ. ಬಡ್ಡಿಯನ್ನು ಪಡೆಯುತ್ತಾರೆ. ಮೆಚ್ಯೂರಿಟಿ ಮೊತ್ತವು 5,45,667.69 ರೂ. ಆಗಿರುತ್ತದೆ.
SBIನಲ್ಲಿ 7 ದಿನಗಳಿಂದ 10 ವರ್ಷಗಳವರೆಗೆ ಸ್ಥಿರ ಠೇವಣಿಗಳನ್ನು ಮಾಡಬಹುದು. ಇದು ಉತ್ತಮ ಬಡ್ಡಿಯನ್ನು ನೀಡುತ್ತದೆ. ಕೆಲವು FD ಹೂಡಿಕೆಗಳು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ನೀಡುತ್ತವೆ. ಈಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಫಿಕ್ಸೆಡ್ ಡೆಪಾಸಿಟ್ ಯೋಜನೆಯಲ್ಲಿ 180 ದಿನಗಳವರೆಗೆ 10 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದರೆ, ಮೆಚ್ಯೂರಿಟಿಯಲ್ಲಿ ಎಷ್ಟು ಗಳಿಸಬಹುದು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 180 ದಿನಗಳ ಸ್ಥಿರ ಠೇವಣಿಯೊಂದಿಗೆ ಮೆಚ್ಯೂರಿಟಿಯಲ್ಲಿ 10 ಲಕ್ಷ ರೂ.ವನ್ನು ಠೇವಣಿ ಮಾಡುವ ಮೂಲಕ ಸಾಮಾನ್ಯ ನಾಗರಿಕರು ಒಟ್ಟು 10,29,804 ರೂ. ಪಡೆಯಬಹುದು. ಹಿರಿಯ ನಾಗರಿಕರು 180 ದಿನಗಳ ನಿಶ್ಚಿತ ಠೇವಣಿ ಮಾಡಿದರೆ 10 ಲಕ್ಷ ರೂ.ಗಳ ಮೆಚ್ಯೂರಿಟಿ ಅವಧಿಯಲ್ಲಿ ಒಟ್ಟು 10,34,814 ರೂ.ಗಳನ್ನು ಪಡೆಯಬಹುದು.
ಖರ್ಚು ಮಾಡುವುದನ್ನು ನಿಲ್ಲಿಸಲು ಖಂಡಿತ ಯಾರಿಂದಲೂ ಸಾಧ್ಯವಿಲ್ಲ. ಆದರೆ ಪ್ರತಿಯೊಬ್ಬರು ಹೂಡಿಕೆ ಮಾಡೋದು ಬಹಳ ಮುಖ್ಯ. ಹಲವು ಹೂಡಿಕೆ ಆಯ್ಕೆಗಳಿದ್ದರೂ ಅವೆಲ್ಲವೂ ಸುರಕ್ಷಿತವಲ್ಲ. ಹಣ ಕಳೆದುಕೊಳ್ಳುವ ಅಪಾಯ ಇರುವುದರಿಂದ ಸಾರ್ವಜನಿಕರು ಯಾವುದರಲ್ಲಿ ಹೂಡಿಕೆ ಮಾಡಬೇಕು ಎಂಬ ಹುಡುಕಾಟದಲ್ಲಿರುತ್ತಾರೆ. ಈ ಪೈಕಿ ಅತ್ಯಂತ ಸುರಕ್ಷಿತವಾದದ್ದು ಎಸ್‌ಬಿಐ ಬ್ಯಾಂಕ್‌ನ ಸ್ಥಿರ ಠೇವಣಿ ಯೋಜನೆ.