ನೀವು ಮಾಡುವ ಈ ಐದು ತಪ್ಪುಗಳಿಂದ ಲಕ್ಷ್ಮೀ ದೇವಿ ಮುನಿಸಿಕೊಳ್ಳಬಹುದು..!

ಈಗ ಎಲ್ಲರ ಜೀವನಶೈಲಿಯೇ ಬದಲಾಗಿದೆ. ತಡರಾತ್ರಿವರೆಗೆ ಎಚ್ಚರದಿಂದ ಇರುವುದು, ಬೆಳಿಗ್ಗೆ ಬಹಳ ಹೊತ್ತಿನವರೆಗೆ ಮಲಗಿಕೊಂಡಿರುವುದು. ಆದರೆ ಇದು ತಪ್ಪು, ಮುಂಜಾನೆ ಸೂರ್ಯೋದಯಕ್ಕೆ ಮುನ್ನವೇ ಏಳುವುದು ಒಳ್ಳೆಯದು ಎನ್ನುತ್ತದೆ ಶಾಸ್ತ್ರ ಪುರಾಣ..

ನವದೆಹಲಿ: ಲಕ್ಷ್ಮಿ ದೇವಿ ಅಂದರೆ ಸಂಪತ್ತಿನ ಅಧಿದೇವತೆ. ಲಕ್ಷ್ಮೀ ಸಂತುಷ್ಟಳಾಗಿದ್ದರೆ ಮನೆಯಲ್ಲಿ ಸುಖ ಶಾಂತಿ ನೆಲೆಸಿರುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಲಕ್ಷ್ಮೀ ದೇವಿಯನ್ನು (Goddess Lakshmi) ಸಂತೋಷವಾಗಿರಿಸಲು ಯತ್ನಿಸುತ್ತಾರೆ.  ಲಕ್ಷ್ಮಿ ಯಾವತ್ತೂ ಚಂಚಲೆ. ಒಂದೇ ಸ್ಥಳದಲ್ಲಿ ನೆಲೆಸುವುದಿಲ್ಲ. ಧರ್ಮ ಶಾಸ್ತ್ರಗಳ ಪ್ರಕಾರ ಕೆಲವೊಂದು ವಿಷಯಗಳು ಲಕ್ಷ್ಮಿಗೆ ಇಷ್ಟವಾಗುವುದೂ ಇಲ್ಲವಂತೆ. ಲಕ್ಷ್ಮೀಗೆ ಇಷ್ಟವಾಗದ ಈ ಕೆಲಸಗಳನ್ನು ಮಾಡಿದರೆ, ಲಕ್ಷ್ಮೀ ಮುನಿಸಿಕೊಂಡು ಹೊರಟು ಬಿಡುತ್ತಾಳೆ ಎನ್ನುತ್ತದೆ ಶಾಸ್ತ್ರ. ಹಾಗಾಗಿ ಈ ತಪ್ಪುಗಳ ಬಗ್ಗೆ ಜಾಗರೂಕರಾಗಿರಬೇಕು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಈಗ ಎಲ್ಲರ ಜೀವನಶೈಲಿಯೇ ಬದಲಾಗಿದೆ. ತಡರಾತ್ರಿವರೆಗೆ ಎಚ್ಚರದಿಂದ ಇರುವುದು, ಬೆಳಿಗ್ಗೆ ಬಹಳ ಹೊತ್ತಿನವರೆಗೆ ಮಲಗಿಕೊಂಡಿರುವುದು. ಆದರೆ ಇದು ತಪ್ಪು, ಮುಂಜಾನೆ ಸೂರ್ಯೋದಯಕ್ಕೆ ಮುನ್ನವೇ ಏಳುವುದು ಒಳ್ಳೆಯದು ಎನ್ನುತ್ತದೆ ಶಾಸ್ತ್ರ ಪುರಾಣ.. ಸೂರ್ಯೋದಯದ ನಂತರವೂ ಮಲಗಿಕೊಂಡಿರುವುದು ಲಕ್ಷ್ಮೀಗೆ ಹಿಡಿಸುವುದಿಲ್ಲವಂತೆ. ಹಗೆಯೇ ಮುಸ್ಸಂಜೆ ಹೊತ್ತು ಲಕ್ಷ್ಮೀ ಗೃಹ ಪ್ರವೇಶ ಮಾಡುವ ಹೊತ್ತು ಆಗಲೂ ಮಲಗಿರುವುದು ಲಕ್ಷ್ಮೀಗೆ ಇಷ್ಟವಾಗುವುದಿಲ್ಲವಂತೆ.    

2 /5

ಅನೇಕ ಜನರು ತಮ್ಮ ಬಿಡುವಿಲ್ಲದ ದಿನಚರಿಯಿಂದಾಗಿ ಕೆಲವು ಕೆಲಸ ಮಾಡಲು ಹೊತ್ತು ನೋಡುವುದೇ ಇಲ್ಲ, ರಾತ್ರಿ ವೇಳೆ ಉಗುರು ಕತ್ತರಿಸುವುದು ಯಾವತ್ತಿಗೂ ಅಶುಭ. ಹೀಗೆ ಮಾಡಿದರೆ ಲಕ್ಷ್ಮೀ ಮುನಿಸಿಕೊಳ್ಳುತ್ತಾಳಂತೆ. ಈ ಕಾರಣದಿಂದ ಹಣಕಾಸಿನ ಸಮಸ್ಯೆ ಕೂಡಾ ಎದುರಾಗುತ್ತದೆಯಂತೆ.   

3 /5

ಒಮ್ಮೆ ಊಟಕ್ಕೆ ಕುಳಿತರೆ ತಟ್ಟೆಯ ಊಟ ಖಾಲಿಯಾಗುವವರೆಗೆ ಎದ್ದೇಳಬಾರದಂತೆ. ಅರ್ಧದಿಂದ ೂಟ ಬಿಟ್ಟು ಏಳುವುದು ಎಂದರೆ ಅದು ಅನ್ನಕ್ಕೆ ಮಾಡುವ ಅಪಮಾನ. ಅನ್ನ ಅಂದರೆ ಅನ್ನಪೂರ್ಣೆ. ಅನ್ನಪೂರ್ಣೆ ಕೂಡಾ ಲಕ್ಷ್ಮೀಯ ರೂಪ. ಅನ್ನವನ್ನು ಅರ್ಧಕ್ಕೆ ಬಿಟ್ಟು ಏಳುವ ಜನರ ಮನೆಯಲ್ಲಿ ಎಂದಿಗೂ ಏಳಿಗೆ ಕಾಣುವುದಿಲ್ಲವಂತೆ. 

4 /5

ನಿಮ್ಮ  ಎಷ್ಟೇ ಒಳ್ಳೆಯ ಸ್ನೇಹಿತರಾಗಿರಲಿ ಅಥವಾ ನಿಮಗೆ ಎಷ್ಟೇ ಬೇಕಾಗಿದ್ದವರಾಗಿರಲಿ ಸಂಜೆಯ ಹೊತ್ತು ಮಾತ್ರ ಉಪ್ಪನ್ನು ಯಾರಿಗೂ ನೀಡಬೇಡಿ. ಸಂಜೆಯ ಹಿಒತ್ತು ಉಪ್ಪನ್ನು ಮನೆಯಿಂದ ಹೊರಗೆ ಕೊಟ್ಟರೆ ಸಾಲದ ಬಾಧೆ ಕಾಡುತ್ತದೆಯಂತೆ. 

5 /5

ರಾತ್ರಿಯಲ್ಲಿ ಊಟ ಮುಗಿಸಿದ ಕೂಡಲೇ ಪಾತ್ರೆಗಳನ್ನು ಶುಚಿಗೊಳಿಸಿ ಇಡಬೇಕು. ಎಂಜಲು ಪಾತ್ರೆಯನ್ನು ಹಾಗೆಯೇ ಬಿಡಬಾರದು. ಇದರಿಂದ ಮನೆಯೊಳಗೆ ನೆಗೆಟಿವ್ ಎನರ್ಜಿ ಹೆಚ್ಚುತ್ತದೆಯಂತೆ.  ತಾಯಿ ಲಕ್ಷ್ಮಿ ಕೂಡ ಕೋಪಗೊಳ್ಳುತ್ತಾಳಂತೆ. ಲಕ್ಷ್ಮೀಯ ಕೋಪ ಎಂದರೆ, ಆರ್ಥಿಕ ಬಿಕ್ಕಟ್ಟು ಎದುರಿಸಬೇಕಾಗುತ್ತದೆ