Darshan health update: ನಟ ದರ್ಶನ್ ಅವರ ಜಾಮೀನು ವಿಚರಣೆ ನಡೆಯುತ್ತಿದೆ, ನಟ ದರ್ಶನ್ ಅವರಿಗೆ ಜಾಮೀನು ಸಿಗುತ್ತಾ ಇಲ್ವಾ ಎನ್ನುವ ಟೆನ್ಶನ್ನಲ್ಲಿ ಅವರ ಅಭಿಮಾನಿಗೂ ಇದ್ದಾರೆ, ಹೀಗಿರುವಾಗ ದಾಸನ ಅಭಿಮಾನಿಗಳಿಗೆ ಮತ್ತೊಂದು ಆತಂಕ ಎದುರಾಗಿದೆ, ನಟನ ಆರೋಗ್ಯದಲ್ಲಿ ಏರುಪೇರಾಗಿದ್ದು, ತಪಾಸಣೆಗೆ ವೈದ್ಯರು ಧಾವಿಸಿದ್ದಾರೆ.

ಅಭಿಮಾನಿಗಳು ನಟ ದರ್ಶನ್ಗೆ ಬೇಲ್ ಸಿಗುತ್ತಾ ಇಲ್ವಾ ಎನುವ ಟೆನ್ಶನ್ನಲ್ಲಿದ್ದಾರೆ, ಹೀಗುರುವಾಗ ನಟ ದರ್ಶನ್ ಜೈಲಿನಲ್ಲಿ ಬೆನ್ನುನೋವಿನಿಂದ ಬಳಲುತ್ತಿದ್ದಾರೆ.
ಬಳ್ಳಾರಿ ಜೈಲಿನಲ್ಲಿ ದಾಸ ಕಾಲ ಕಳೆಯುತ್ತಿದ್ದು, ನಟ ರಾತ್ರಿಯಿಡೀ ಬೆನ್ನುನೋವಿನ ಕಾರಣ ನಿದ್ದೆ ಇಲ್ಲದೆ ಪರದಾಡಿದ್ದಾರೆ.
ಜೈಲಿನಲ್ಲಿರುವ ದರ್ಶನ್ ಅವರ ಆರೋಗ್ಯವನ್ನು ವೈದ್ಯರು ಪ್ರತಿದಿನ ತಪಾಸಣೆ ಮಾಡುತ್ತಿದ್ದಾರೆ, ಇನ್ನೊಂದೆಡೆ ನಟನಿಗೆ ಜಾಮೀನು ಸಿಗುತ್ತಾ ಇಲ್ವಾ ಅನ್ನುವ ಟೆನ್ಶನ್ ಇದ್ದೆರ, ಇದೀಗ ನಟನ ಆರೋಗ್ಯದಲ್ಲಿ ಏರುಪೇರಾಗಿದ್ದು, ದಾಸನ ಆರೋಗ್ಯದ ಕುರಿತು ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದೆ.
ನಟ ದರ್ಶನ್ ಅವರಿಗೆ ಮೊದಲಿನಿಂದಲೇ ಬೆನ್ನು ನೋವಿನ ಸಮಸ್ಯೆ ಕಾಡುತ್ತಿದೆ, ಇದೇ ಕಾರಣದಿಂದಾಗಿ ನಟ ಜೈಲು ಅಧಿಕಾರಿಗಳ ಬಳಿ ಸರ್ಜಿಕಲ್ ಚೇರ್ ಬೇಕೆಂದು ಕೋರಿಕೆ ಇಟ್ಟಿದ್ದರು. ಕೋರಿಕೆಯ ಮೇರಿಗೆ ಅಧಿಕಾರಿಗಳು ನಟನಿಗೆ ಚೇರ್ನ ವ್ಯವಸ್ತೆಯನ್ನು ಸಹ ಮಾಡಿದ್ದರು.
ನಟ ದರ್ಶನ್ ಅವರಿಗೆ ದಿನೇ ದಿನೇ ಬೆನ್ನು ನೋವು ಹೆಚ್ಚಾಗುತ್ತಿರುವ ಕಾರಣ ರಾತ್ರಿಯಿಡೀ ನಿದ್ದೆ ಇಲ್ಲದೆ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ, ಇದೇ ಕಾರಣಕ್ಕೆ ವಿಮ್ಸ್ ಆಸ್ಪತ್ರೆಯ ಆರ್ಥೋಪಿಡಿಷನ್ ಜೈಲಿನಲ್ಲೇ ನಟನಿಗೆ ಆರೋಗ್ಯ ತಪಾಸಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ನಟನಿಗೆ ತಪಾಸಣೆ ಮಾಡಿರುವ ವೈದ್ಯರು ನಟನಿಗೆ ಎಂಆರ್ ಐ ಸ್ಕ್ಯಾನ್ ಮಾಡಿಸುವಂತೆ ಸೂನೆ ನೀಡಿದ್ದಾರಂತೆ. ಆದರೆ ನಟ ಮಾತ್ರ ಸ್ಕ್ಯಾನ್ ಮಾಡಿಸಲು ಸಿರಾಕರಿಸಿದ್ದು, ಬೆಂಗಳೂರಿಗೆ ಹೋದ ನಂತರ ಸ್ಕ್ಯಾನ್ ಮಾಡಿಸಿಕೊಳ್ಳುವುದಾಗಿ ದಾಸ ವೈದ್ಯರ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.