ಪಾಕಿಸ್ತಾನದ ಅತ್ಯಂತ ಪ್ರಸಿದ್ಧ ಹಿಂದೂ ದೇವಾಲಯ ಎಲ್ಲಿದೆ ಗೊತ್ತಾ..? 51 ಶಕ್ತಿಪೀಠಗಳಲ್ಲಿ ಇದೂ ಸಹ ಒಂದು!

Shaktipeeth Shri Hinglaj Mata Mandir: ಈ ಸ್ಥಳವು ಸಾವಿರಾರು ವರ್ಷಗಳಿಂದ ಹಿಂದೂ ಧರ್ಮದ ಅನುಯಾಯಿಗಳಿಗೆ ಯಾತ್ರಾಸ್ಥಳವಾಗಿದೆ ಮತ್ತು ಪ್ರತಿವರ್ಷ ಲಕ್ಷಾಂತರ ಭಕ್ತರು ದರ್ಶನಕ್ಕಾಗಿ ಇಲ್ಲಿಗೆ ಬರುತ್ತಾರೆ.

Shakti Peethas in Lasbela, Balochistan: ಹಿಂಗ್ಲಾಜ್‌ ಶಕ್ತಿ ಪೀಠವು ಪಾಕಿಸ್ಥಾನದ ಬಲುಚಿಸ್ಥಾನಕ್ಕೆ ಸೇರ್ಪಡೆಗೊಂಡ ಲ್ಯರಿ ತೆಹ್ಸಿಲ್‌ ಎನ್ನುವ ಬೆಟ್ಟದಲ್ಲಿನ ಗುಹ ದೇವಾಲಯವಾಗಿದೆ. ಈ ಶಕ್ತಿ ಪೀಠವು ಕರಾಚಿಯಿಂದ ಸುಮಾರು 250 ಕಿಲೋಮೀಟರ್‌ ದೂರದ ವಾಯುವ್ಯ ದಿಕ್ಕಿನಲ್ಲಿದೆ. ವಿಷ್ಣುವಿನ ಸುದರ್ಶನ ಚಕ್ರದಿಂದ ಛಿದ್ರಗೊಂಡ ಸತಿಯ ದೇಹದ ಭಾಗಗಳ ಪೈಕಿ ತಲೆಯ ಭಾಗವು ಈ ಸ್ಥಳದಲ್ಲಿ ಬಂದು ಬಿದ್ದಿದೆ ಎಂದು ನಂಬಲಾಗಿದೆ. ಹೀಗಾಗಿಯೇ ಇದನ್ನು ಶಕ್ತಿಪೀಠವೆಂದು ಕರೆಯಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ಹಿಂಗ್ಲಾಜ್‌ ಮಾತಾ ದೇವಾಲಯವು ಪಾಕಿಸ್ತಾನದ ಅತ್ಯಂತ ಪ್ರಸಿದ್ಧ ಹಿಂದೂ ದೇವಾಲಯವಾಗಿದೆ. ಈ ದೇವಾಲಯವು ತನ್ನ ಧಾರ್ಮಿಕ ಪ್ರಾಮುಖ್ಯತೆ, ಐತಿಹಾಸಿಕ ಹಿನ್ನೆಲೆ ಮತ್ತು ನೈಸರ್ಗಿಕ ಸೌಂದರ್ಯದಿಂದ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. 

2 /5

ಹಿಂಗ್ಲಾಜ್‌ ಮಾತಾ ದೇವಾಲಯವು ಹಿಂದೂಗಳ ಪ್ರಮುಖ ಯಾತ್ರಾ ಸ್ಥಳವಾಗಿದೆ. ಈ ದೇವಾಲಯವು ಬಲೂಚಿಸ್ತಾನ್‌ ಪ್ರಾಂತ್ಯದ ಹಿಂಗೋಲ್‌ ರಾಷ್ಟ್ರೀಯ ಉದ್ಯಾನವನದಲ್ಲಿದೆ. ಹಿಂಗ್ಲಾಜ್‌ ಮಾತಾ ದೇವಾಲಯವನ್ನು 51 ಶಕ್ತಿಪೀಠಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ದಂತಕಥೆಯ ಪ್ರಕಾರ, ಇದು ಸತಿ ದೇವಿಯ ತಲೆ ಬಿದ್ದ ಸ್ಥಳವಾಗಿದೆ. 

3 /5

ಹಿಂಗೋಳ ನದಿಯ ತೀರದಲ್ಲಿನ ನಿಸರ್ಗದತ್ತವಾದ ಸಣ್ಣ ಗುಹೆಯೊಳಗೆ ಸತಿಯ ತಲೆಯಾಕಾರದ ಕಲ್ಲಿಗೆ ಸಿಂಧೂರವನ್ನು ಹಚ್ಚಿ ಪೂಜಿಸಲಾಗುತ್ತದೆ. ಈ ದೇವಾಲಯವನ್ನು ಮಹಾಲ್‌, ಹಿಂಗ್ಲಾಜ್‌ ಮಾತಾ, ಹಿಂಗುಳಾ ದೇವಿ ಮತ್ತು ನಾನಿ ಹೀಗೆ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ.

4 /5

ಈ ಸ್ಥಳವು ಸಾವಿರಾರು ವರ್ಷಗಳಿಂದ ಹಿಂದೂ ಧರ್ಮದ ಅನುಯಾಯಿಗಳಿಗೆ ಯಾತ್ರಾಸ್ಥಳವಾಗಿದೆ ಮತ್ತು ಪ್ರತಿವರ್ಷ ಲಕ್ಷಾಂತರ ಭಕ್ತರು ದರ್ಶನಕ್ಕಾಗಿ ಇಲ್ಲಿಗೆ ಬರುತ್ತಾರೆ. ಈ ದೇವಸ್ಥಾನವನ್ನು ತಲುಪಲು ಲಕ್ಷಾಂತರ ಭಕ್ತರು ಕಷ್ಟಕರವಾದ ರಸ್ತೆಗಳು ಮತ್ತು ಮರಭೂಮಿ ಪ್ರದೇಶಗಳ ಮೂಲಕ ಹಾದು ಹೋಗಬೇಕು. 

5 /5

ನವರಾತ್ರಿ ಮತ್ತು ಇತರ ಪ್ರಮುಖ ಹಿಂದೂ ಹಬ್ಬಗಳಲ್ಲಿ ಇಲ್ಲಿ ವಿಶೇಷ ಪೂಜೆಗಳು ಮತ್ತು ಆಚರಣೆಗಳನ್ನು ನಡೆಸಲಾಗುತ್ತದೆ. ಹಿಂಗ್ಲಾಜ್‌ ಮಾತಾ ದೇವಾಲಯವು ಕೇವಲ ಧಾರ್ಮಿಕ ಸ್ಥಳವಲ್ಲ, ಆದರೆ ಇದು ಪಾಕಿಸ್ತಾನದ ಹಿಂದೂ ಸಂಸ್ಕೃತಿ ಮತ್ತು ಸಂಪ್ರದಾಯಗಳ ಸಂಕೇತವಾಗಿದೆ.