Most Expensive Coffee in the World 2021: ಪ್ರಪಂಚದಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಕಾಫಿ ಕುಡಿಯುವವರು ಇದ್ದಾರೆ. ಇಂದು ಅಂದರೆ ಅಕ್ಟೋಬರ್ 1 ಕಾಫಿಗೆ ಬಹಳ ವಿಶೇಷವಾದ ದಿನ.
ನವದೆಹಲಿ : Most Expensive Coffee in the World 2021: ಪ್ರಪಂಚದಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಕಾಫಿ ಕುಡಿಯುವವರು ಇದ್ದಾರೆ. ಇಂದು ಅಂದರೆ ಅಕ್ಟೋಬರ್ 1 ಕಾಫಿಗೆ ಬಹಳ ವಿಶೇಷವಾದ ದಿನ. ಇಂದು ಅಂತರಾಷ್ಟ್ರೀಯ ಕಾಫಿ ದಿನ. ಪ್ರಪಂಚದಲ್ಲಿ ಕೆಲವು ವಿಶೇಷ ರೀತಿಯ ಕಾಫಿಗಳು ಅತ್ಯಂತ ದುಬಾರಿ ವಿಭಾಗದಲ್ಲಿ ಬರುತ್ತವೆ. ಈ ರೀತಿಯ ಕಾಫಿ ಯಾವುದು ಎನ್ನುವುದು ತಿಳಿದಿದೆಯೇ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಓಸ್ಪಿನಾ ವಿಶ್ವದ ಅತ್ಯಂತ ದುಬಾರಿ ಕಾಫಿಗಳಲ್ಲಿ ಒಂದಾಗಿದೆ. ಇದು ಕೊಲಂಬಿಯಾದ ಕಾಫಿ. ಇದರ ಬೆಲೆ ಪ್ರತಿ ಪೌಂಡ್ಗೆ 1540 ಡಾಲರ್ ಆಗಿದೆ. ಒಂದು ಪೌಂಡ್ 453.592 ಗ್ರಾಂಗೆ ಸಮಾನವಾಗಿರುತ್ತದೆ.
ಬ್ಲಾಕ್ ಐವರಿ ಕಾಫಿ ಒಂದು ವಿಶಿಷ್ಟವಾದ ಕಾಫಿ. ಇದರ ಪ್ರೋಸೆಸ್ ಅನ್ನು ಆನೆಗಳ ಮೂಲಕ ಮಾಡಲಾಗುತ್ತದೆ. ಕಂಪನಿಯು ತನ್ನ ಆನೆಗಳಿಗೆ ಅರೇಬಿಕಾ ಕಾಫಿ ಬೀಜಗಳನ್ನು ನೀಡುತ್ತದೆ ಮತ್ತು ಅದು ಆನೆಯ ಜೀರ್ಣಾಂಗ ವ್ಯವಸ್ಥೆಯ ಮೂಲಕ ಹಾದುಹೋಗಿ, ಮಲವಾಗಿ ಹೊರಬರುತ್ತದೆ ಮತ್ತು ನಂತರ ಈ ಕಾಫಿಯನ್ನು ಅದರಿಂದ ತಯಾರಿಸಲಾಗುತ್ತದೆ. ಇದರ ಬೆಲೆ ಪ್ರತಿ ಪೌಂಡ್ಗೆ 1500 ಡಾಲರ್ .
ಫಿಂಕಾ ಎಲ್ ಇಂಜರ್ಟೊ ಕಾಫಿ ಕೂಡ ವಿಶ್ವದ ಅತ್ಯಂತ ದುಬಾರಿ ಕಾಫಿಗಳಲ್ಲಿ ಒಂದಾಗಿದೆ. Themanual.com ಪೋರ್ಟಲ್ ಪ್ರಕಾರ, ಇದರ ಬೆಲೆ ಪ್ರತಿ ಪೌಂಡ್ಗೆ 500 ಡಾಲರ್ .
ಹಸೆಂಡಾ ಎಸ್ಮೆರಾಲ್ಡಾ ಗೀಶಾ ಕಾಫಿಯನ್ನು ವಿಶ್ವದ ಅತ್ಯಂತ ದುಬಾರಿ ಕಾಫಿಯಲ್ಲಿ ಸೇರಿಸಲಾಗಿದೆ. ಈ ಕಾಫಿಯ ಬೆಲೆ ಪ್ರತಿ ಪೌಂಡ್ಗೆ 120 ಡಾಲರ್ .
ಕೋಪಿ ಲುವಾಕ್ ವಿಶ್ವದ ಅತ್ಯಂತ ದುಬಾರಿ ಮತ್ತು ಜನಪ್ರಿಯ ಕಾಫಿಯಾಗಿದೆ. ಪ್ರಾಣಿಗಳಿಗೆ ಆಹಾರವಾಗಿ ನೀಡುವ ಮೂಲಕ ಪ್ರೋಸೆಸ್ ಮಾಡಲಾಗುತ್ತದೆ. ಕಂಪನಿಯು ಈ ಕಾಫಿ ಬೀಜಗಳನ್ನು ಬೆಕ್ಕುಗಳಿಗೆ ನೀಡುತ್ತದೆ ಮತ್ತು ಈ ಬೀನ್ಸ್ ಅನ್ನು ಅವುಗಳ ಮಲದಿಂದ ಸಂಸ್ಕರಿಸಲಾಗುತ್ತದೆ. ನಂತರ ಕಾಫಿ ತಯಾರಿಸಲಾಗುತ್ತದೆ. ಇದರ ಬೆಲೆ ಪ್ರತಿ ಪೌಂಡ್ಗೆ 600 ಡಾಲರ್.