ಹಾಗಲಕಾಯಿ ಜೊತೆಗೆ ಈ ಆಹಾರಗಳನ್ನು ಅಪ್ಪಿತಪ್ಪಿಯೂ ಸೇವಿಸಬೇಡಿ

Health Tips: ಹಾಗಲಕಾಯಿ ರುಚಿಯಲ್ಲಿ ಕಹಿಯಾದರೂ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ, ಹಾಗಲಕಾಯಿಯೊಂದಿಗೆ ಕೆಲವು ಆಹಾರಗಳನ್ನು ಅಪ್ಪಿತಪ್ಪಿಯೂ ಸೇವಿಸಬಾರದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

1 /6

ಹಾಗಲಕಾಯಿಯಲ್ಲಿ ತಾಮ್ರ, ವಿಟಮಿನ್ ಬಿ, ಅಪರ್ಯಾಪ್ತ ಕೊಬ್ಬಿನಾಮ್ಲಗಳಂತಹ ಅನೇಕ ಪೋಷಕಾಂಶಗಳಿವೆ. ಇದಲ್ಲದೇ ಇದರಲ್ಲಿ ಆ್ಯಂಟಿ ವೈರಸ್ ಮತ್ತು ಆ್ಯಂಟಿ ಬಯೋಟಿಕ್ ಗುಣಗಳೂ ಹೇರಳವಾಗಿ ಕಂಡುಬರುತ್ತವೆ. ರುಚಿಯಲ್ಲಿ ಕಹಿಯಾಗಿರುವ ಹಾಗಲಕಾಯಿ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ಆದರೆ, ಕೆಲವು ವಸ್ತುಗಳೊಂದಿಗೆ ಇದನ್ನು ಸೇವಿಸುವುದು ತುಂಬಾ ಹಾನಿಕಾರಕವೆಂದು ಸಾಬೀತುಪಡಿಸಬಹುದು. 

2 /6

ಪನೀರ್, ಚೀಸ್ ಮತ್ತು ಮೊಸರು ಮುಂತಾದ ಹಾಲಿನೊಂದಿಗೆ ತಯಾರಿಸಿದ ಆಹಾರ ಪದಾರ್ಥಗಳೊಂದಿಗೆ ಹಾಗಲಕಾಯ್ಹಿ ಸೇವನೆಯು ಆರೋಗಕ್ಕೆ ಹಾನಿಕರಕ ಎಂದು ಸಾಬೀತುಪಡಿಸಬಹುದು. ಇದರಿಂದ ಹೊಟ್ಟೆನೋವು, ಮಲಬದ್ಧತೆ ಮತ್ತು ಉರಿಯೂತದಂತಹ ಸಮಸ್ಯೆಗಳು ಹೆಚ್ಚಾಗಬಹುದು.   

3 /6

ಆಯುರ್ವೇದದ ಪ್ರಕಾರ, ಹಾಗಲಕಾಯಿಯೊಂದಿಗೆ ಮೂಲಂಗಿಯನ್ನು ಸೇವಿಸಬಾರದು. ಮೂಲಂಗಿ ಮತ್ತು ಹಾಗಲಕಾಯಿಯ ಪರಿಣಾಮವು ವಿಭಿನ್ನವಾಗಿರುತ್ತದೆ. ಅದಕ್ಕಾಗಿಯೇ ಈ ಎರಡು ತರಕಾರಿಗಳನ್ನು ಒಟ್ಟಿಗೆ ಸೇವಿಸಿದಾಗ, ಅದು ದೇಹದಲ್ಲಿನ ತಾಪಮಾನವನ್ನು ಅಸಮತೋಲನಗೊಳಿಸುತ್ತದೆ. 

4 /6

ಆಯುರ್ವೇದದ ಪ್ರಕಾರ, ಹಾಗಲಕಾಯಿ ಮತ್ತು ಬೆಂಡೇಕಾಯಿಯನ್ನು ಒಟ್ಟಿಗೆ ಸೇವಿಸುವುದರಿಂದ ಜೀರ್ಣಕಾರಿ ಸಮಸ್ಯೆಗಳು ಹೆಚ್ಚಾಗಬಹುದು. 

5 /6

ಹಾಗಲಕಾಯಿಯೊಂದಿಗೆ ಪರಂಗಿ ಹಣ್ಣಿನ ಸೇವನೆ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ, ಏಕೆಂದರೆ ಪಪ್ಪಾಯಿಯಲ್ಲಿ ನೀರು ಸಮೃದ್ಧವಾಗಿದೆ, ಇದು ದೇಹವನ್ನು ತೇವಾಂಶದಿಂದ ಇಡುತ್ತದೆ. ಇದಕ್ಕೆ ವಿರುದ್ಧವಾಗಿ, ಹಾಗಲಕಾಯಿ ತರಕಾರಿ ದೇಹದಿಂದ ನೀರನ್ನು ಹೀರಿಕೊಳ್ಳುತ್ತದೆ.

6 /6

ಹಾಗಲಕಾಯಿ ಜೊತೆಗೆ ಮಾವಿನ ಹಣ್ಣನ್ನು ಅಪ್ಪಿತಪ್ಪಿಯೂ ಸೇವಿಸಬೇಡಿ. ಇದು ಜೀರ್ಣಕಾರಿ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.  ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.