Diwali 2022: ದೀಪಗಳ ಹಬ್ಬ ದೀಪಾವಳಿಯು ಸಂಪತ್ತಿನ ದೇವತೆಯಾದ ತಾಯಿ ಲಕ್ಷ್ಮಿಯ ಆಶೀರ್ವಾದಕ್ಕಾಗಿ ವಿಶೇಷ ಎಂದು ಪರಿಗಣಿಸಲಾಗಿದೆ.
Diwali 2022: ಈ ವರ್ಷ ಅಕ್ಟೋಬರ್ 24 ರಂದು ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ಇದಕ್ಕಾಗಿ ಜನರು ಈಗಾಗಲೇ ಮನೆಯನ್ನು ಸ್ವಚ್ಛಗೊಳಿಸಲು ಮತ್ತು ಶಾಪಿಂಗ್ ಮಾಡಲು ಪ್ರಾರಂಭಿಸಿದ್ದಾರೆ. ದೀಪಗಳ ಹಬ್ಬ ದೀಪಾವಳಿಯು ಸಂಪತ್ತಿನ ದೇವತೆಯಾದ ತಾಯಿ ಲಕ್ಷ್ಮಿಯ ಆಶೀರ್ವಾದಕ್ಕಾಗಿ ವಿಶೇಷ ಎಂದು ಪರಿಗಣಿಸಲಾಗಿದೆ. ಆದರೆ, ದೀಪಾವಳಿಯಂದು ಮನೆಯಲ್ಲಿ ಕೆಲವು ವಸ್ತುಗಳನ್ನು ಇಡುವುದು ಅಶುಭವೆಂದು ಪರಿಗಣಿಸಲಾಗಿದೆ. ಇದರಿಂದಾಗಿ ಲಕ್ಷ್ಮಿಯು ಕೋಪಗೊಳ್ಳುತ್ತಾಳೆ ಎಂಬ ನಂಬಿಕೆಯೂ ಇದೆ. ಅಂತಹ ಪರಿಸ್ಥಿತಿಯಲ್ಲಿ, ದೀಪಾವಳಿಯಲ್ಲಿ ತಾಯಿ ಲಕ್ಷ್ಮಿಯ ಆಶೀರ್ವಾದ ಪಡೆಯಲು ಈ ವಸ್ತುಗಳನ್ನು ಇಂದೇ ಮನೆಯಿಂದ ಹೊರಹಾಕುವುದು ಉತ್ತಮ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಹಳೆಯ ಸವೆದ ಚಪ್ಪಲಿ/ಶೂ: ಸಾಮಾನ್ಯವಾಗಿ ಕೆಲವರು ಹಳೆಯದಾದ, ತುಂಬಾ ಸವೆದ ಚಪ್ಪಲಿ, ಶೂಗಳನ್ನೂ ಸಹ ಮನೆಯಲ್ಲಿ ಸಂಗ್ರಹಿಸುತ್ತಾರೆ. ಆದರೆ, ಇದರಿಂದಾಗಿ ಮನೆಯಲ್ಲಿ ಋಣಾತ್ಮಕ ಶಕ್ತಿ ಆವರಿಸುತ್ತದೆ. ಹಾಗಾಗಿ, ನಿಮ್ಮ ಮನೆಯಲ್ಲಿಯೂ ಅಂತಹ ಪಾದರಕ್ಷೆಗಳಿದ್ದರೆ ಮೊದಲು ಅವುಗಳನ್ನು ಮನೆಯಿಂದ ಹೊರಹಾಕಿ.
ಒಡೆದ ಪಾತ್ರೆ: ಮನೆಯಲ್ಲಿ ಒಡೆದ, ಮುಕ್ಕಾದ ಪಾತ್ರೆಗಳನ್ನು ಇಡುವುದು ಸಹ ಅಶುಭ ಎಂದು ಪರಿಗಣಿಸಲಾಗುತ್ತದೆ. ನಿಮ್ಮ ಮನೆಯಲ್ಲಿಯೂ ಒಡೆದ ಸ್ಟೀಲ್, ಪ್ಲಾಸ್ಟಿಕ್, ತಾಮ್ರದ ಪಾತ್ರೆಗಳು ಇದ್ದರೆ ಅವುಗಳನ್ನು ಈಗಲೇ ಮನೆಯಿಂದ ಹೊರಗೆ ಎಸೆಯಿರಿ.
ದೇವರ ಮುರಿದ ವಿಗ್ರಹ : ಮನೆಯಲ್ಲಿ ಯಾವುದೇ ದೇವರ ಮುರಿದ ವಿಗ್ರಹ ಇರಬಾರದು. ಪೂಜಾ ಮನೆಯಲ್ಲಿ ಇಂತಹ ಮೂರ್ತಿಗಳಿರುವುದರಿಂದ ವಾಸ್ತು ದೋಷಗಳು ಹೆಚ್ಚಾಗುತ್ತವೆ. ದೀಪಾವಳಿ ಆರಂಭಕ್ಕೂ ಮುನ್ನ ಇಂತಹ ಮೂರ್ತಿಗಳನ್ನು ನೀರಿನಲ್ಲಿ ಮುಳುಗಿಸಿ ಮನೆಯಲ್ಲಿ ಹೊಸ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದು ಅಗತ್ಯ. ಇದರಿಂದ ಲಕ್ಷ್ಮಿ ಸಂತಸಗೊಂಡಿದ್ದಾಳೆ.
ದೀಪಾವಳಿ ಹಬ್ಬವನ್ನು ಬೆಳಕಿನ ಹಬ್ಬ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಮನೆಯಲ್ಲಿ ಕತ್ತಲೆ ಇರಬಾರದು. ಕತ್ತಲೆ ಇರುವಂತಹ ಸ್ಥಳದಲ್ಲಿ ವಿದ್ಯುತ್ ದೋಷ ಅಥವಾ ಬಲ್ಬ್ ಸರಿಪಡಿಸಿ ಅಥವಾ ಬದಲಾಯಿಸಿ. ಕೆಟ್ಟ ಬಲ್ಬ್ ಅನ್ನು ಮನೆಯಲ್ಲಿ ಸಂಗ್ರಹಿಸಬೇಡಿ. ಮನೆಯಲ್ಲಿ ಕತ್ತಲಾದಾಗ ಲಕ್ಷ್ಮಿ ಬರುವುದಿಲ್ಲ.
ಕೆಲಸ ಮಾಡದ ಗಡಿಯಾರ: ಕೆಲಸ ಮಾಡದ ಗಡಿಯಾರವು ನಿಮ್ಮ ಅದೃಷ್ಟದೊಂದಿಗೆ ಸಂಬಂಧವನ್ನು ಹೊಡ್ನಿದೆ. ಇದು ನಿಮ್ಮ ಅದೃಷ್ಟವನ್ನೂ ಸಂಕೇತಿಸುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ, ಕೆಲಸ ಮಾಡದ ಗಡಿಯಾರವನ್ನು ಮನೆಯಲ್ಲಿ ಇಡುವುದು ಅಶುಭ ಎಂದು ಪರಿಗಣಿಸಲಾಗಿದೆ. ನಿಮ್ಮ ಮನೆಯಲ್ಲಿಯೂ ಇಂತಹ ಗಡಿಯಾರ ಇದ್ದರೆ ಮೊದಲು ಅದನ್ನು ಸರಿಪಡಿಸಿ, ಇಲ್ಲವೇ ಅದನ್ನು ಮನೆಯಿಂದ ಹೊರಹಾಕಿ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.